ಚುನಾವಣೆ ರಿಸಲ್ಟ್ ಬಳಿಕ ಗೊಂದಲ ಮೂಡಿದ್ದು ನನ್ನೂರು ಮಂಗಳೂರಿನ ಆಯ್ಕೆ ಕುರಿತ ಕಮೆಂಟ್ ಗಳು.
‘ಮಂಗಳೂರಲ್ಲಿ ಕೋಮುವಾದಿಗಳ ವಿಜಯ’
‘ಇನ್ನು ಮಂಗಳೂರಿನಲ್ಲಿ ಜನಸಾಮಾನ್ಯರಿಗೆ ನಡೆದಾಡಲೂ ಸಾಧ್ಯವಿಲ್ಲ, ಇಡೀ ದ.ಕ. ಕ್ರೂರ ಜನರ, ಅನಾಗರೀಕರ ನಾಡಾಗಿರತ್ತೆ, ತಾಲಿಬಾನಿಗಳ ಬೀಡಾಗುತ್ತೆ, ಅದರಲ್ಲೂ ಮಹಿಳೆಯರಿಗೆ ಕಷ್ಟ!..’
ಸಾಮಾನ್ಯ ರಾಜಕೀಯ ಹೇಳಿಕೆಗಳಾಗಿದ್ದರೆ ಇದನ್ನು ತಳ್ಳಿ ಹಾಕಬಹುದು. ನೆನಪಿಡಿ, ಸೋತ ಜನಾರ್ಧನ ಪೂಜಾರಿಯವರೂ ವಿನಮ್ರವಾಗಿ ಸೋಲೊಪ್ಪಿಕೊಂಡಿದಾರೆ. ಆದರೆ ಇಂಥದ್ದೆಲ್ಲಾ ಮಂಗಳೂರಿನ ಹೊರಗಿರುವವರು, ಆದರೆ ಬುಧ್ಹಿಜೀವಿಗಳೆನಿಸಿಕೊಂಡವರು ವಿವಿಧ ಮಾಧ್ಯಮಗಳನ್ನು ಬಳಸುತ್ತಾ ಪ್ರಚಾರ ಮಾಡುತ್ತಿದ್ದಾರೆ. ಇದು ನನ್ನಂತೆ ಹಲವರನ್ನು ಗೊಂದಲಕ್ಕೀಡುಮಾಡಿದೆ.
ಹಾಗಾದರೆ ನಳಿನ್ ಗೆ ಓಟು ಹಾಕಿದ ಸುಮಾರು ೪,೯೯,೦೦೦ ಮಂದಿಯೆಲ್ಲಾ ಅತಿಕ್ರೂರಿ ಕೋಮುವಾದಿಗಳೇ, ತಾಲಿಬಾನಿಗಳೇ ? ಜನರು ಬುದ್ದಿಗೇಡಿಗಳೇ?
ಇಂಥ ಹೇಳಿಕೆಗಳನ್ನು ನೀಡುವ ಉದ್ದೇಶವೇನು? ಜನರ ತೀರ್ಮಾನಕ್ಕೆ ಹಾಗೂ ಜನರ ಭಾವನೆಗಳಿಗೆ ಇದು ಘಾಸಿ ಮಾಡಿದಂತಾಗುವುದಿಲ್ಲವೇ? ಆತ ಬಿಜೆಪಿ ಇರಲಿ, ಕಾಂಗ್ರೆಸ್ ಇರಲಿ ಗೆದ್ದವರೆಲ್ಲರೂ ಜನರ ಆಯ್ಕೆಗಳೇ ಅಲ್ಲವೇ..
ತಿಳಿದವರು ಸ್ಪಷ್ಟಪಡಿಸಬೇಕು.
( ಮೊದಲೇ ಸ್ಪಷ್ಟಪಡಿಸುತ್ತಿದ್ದೇನೆ. ಯಾವುದೇ ಪೂರ್ವಾಗ್ರಹವಿಲ್ಲದೆ ಬರೆಯುತ್ತಿದ್ದೇನೆ. )
9 comments:
ನಳಿನ್ರನ್ನು ಗೆಲ್ಲಿಸಿದವರನ್ನು ಏನೂ ಬೇಕಾದ್ರು ಕರೀಲಿ...ಆದ್ರೆ ಪಬ್ ಘಟನೆಯನ್ನು ಕಾರಣವಾಗಿಸಿ ಮಂಗಳೂರನ್ನು ತಾಲಿಬಾನ್ ಸೆಂಟರ್ ಎಂದು ಕರೆದ ರೇಣೂಕಾ ಚೌಧರಿಯನ್ನು ಸೋಲಿಸಿದ ಜನರನ್ನು ಏನೆಂದು ಕರೆಯೋದು?...ಇನ್ನಾದರೂ ತಾವು ಹೇಳಿದ್ದೆಲ್ಲಾ ಜನ ಕೇಳ್ತಾರೆ ಅನ್ನೋ ಭ್ರಮೆ ರಾಜಕಾರಣಿಗಳು ಬಿಟ್ಟಲ್ಲಿ ದೇಶ ಉದ್ಧಾರ ಖಂಡಿತ
ಅದೆಲ್ಲ ರಾಜಕೀಯ ಪ್ರೇರಿತ ಮಾತುಗಳು, ಬಿಜೆಪಿಯ ನಳಿನ್ ಗೆದ್ದಿರುವುದರಿ೦ದ ಅಲ್ಲೇನು ಬೆ೦ಕಿ ಬೀಳುವುದಿಲ್ಲ, ಅದೆಲ್ಲ ಬುದ್ಧಿಜೀವಿಗೆ೦ದು ಕರೆಸಿಕೊಳ್ಳುವ ಮ೦ದಿಯ ಹುನ್ನಾರ. ನಿಮ್ಮ ಬರಹ, ಆಶಯ ಸರಿಯಾದುದು.
ಹರೀಶ್,
ನಿಮ್ಮ ನಿಜವೆನಿಸುತ್ತೆ...ಈ ಮಾದ್ಯಮದವರು ಏಕೆ ಹೀಗಾಡುತ್ತಾರೋ ಗೊತ್ತಿಲ್ಲ...ಅವರಿಗೆ ಏನಾದ್ರು ಹೀಗೆ ಬರೆದು ಕ್ಯಾಶ್ ಮಾಡಿಕೊಳ್ಳದಿದ್ರೆ ಸಮಾಧಾನವಾಗುವುದಿಲ್ಲವೆನಿಸುತ್ತೆ..ಇದು ನನ್ನ ಅಭಿಪ್ರಾಯ..
ಅಭಿಪ್ರಾಯಕ್ಕೆ ಧನ್ಯವಾದಗಳು
ಒಂದು, ಎರಡು ಬಾರಿ ಒಕೆ.. ಆದರೆ ಸದಾ ಬೇಕೆಂದೇ, ಯಾವ ಕಾರಣವೂ ಇಲ್ಲದೆ ಮಂಗಳೂರು ಹಾಗೂ ಅಲ್ಲಿನ ಜನರ ಬಗ್ಗೆ ಅರ್ಥವಿಲ್ಲದೆ ಬಾಯಿಗೆ ಬಂದ ಹಾಗೆ ಕಾಮೆಂಟ್ ಮಾಡುವವರು ವಿಕೃತ ಮನಸ್ಸಿನ ಅಥವಾ ಮಾನಸಿಕ ಸಮತೋಲನ ಕಳೆದುಕೊಂಡವರು ಎಂದರೆ ತಪ್ಪಲ್ಲ.
ಹಾಗಾಗಿ ಇಂಥವರ ಮಾತಿಗೆ ಮೂರು ಕಾಸಿನ ಬೆಲೆಯೂ ಇಲ್ಲ ಬಿಡಿ. ಊರಿನ ಬಗೆಗಿನ ನಿಮ್ಮ ಕಾಳಜಿ, ಪ್ರೀತಿ ನಿಜಕ್ಕೂ ಖುಷಿ ತರುವಂಥದ್ದು.
ವಟಗುಟ್ಟುವವರನ್ನು ತಡೆಯುವುದು ಅಸಾಧ್ಯ...ಕೋಮುವಾದ ಎನ್ನುವುದು ಸಮಸ್ಯೆ ಹೌದು, ಆದರೆ ಅದು ಇಲ್ಲದಿದ್ದರೆ ಕೆಲವರಿಗೆ ಬಂಡವಾಳವೇ ಇಲ್ಲ :)
ಈಗ ನಳಿನ್ ಗೆದ್ದ ಕಾರಣ ಅನೇಕರಿಗೆ ಇನ್ನು ಬರೆಯಲು ಗುಜರಾತೀಕರಣ, ಕೋಮುವಾದ, ಫ್ಯಾಸಿಸಂ ಇತ್ಯಾದಿ ಪದಗಳು ಸಿಕ್ಕೆಸಿಗುತ್ತವೆ..ನೀವು ತಲೆಕೆಡಿಸಿಕೊಳ್ಳಬೇಡಿ
ವೇಣು ಪ್ರತಿಕ್ರಿಯೆಗೂ ನನ್ನದೂ ಸಾಥ್!ಇರಲಿ ಬಿಡಿ..ತಾಲೀಬಾನೀಕರಣ ಅನ್ನೋದೇನು ಗೊತ್ತಿಲ್ಲದವರೂ 'ಮಂಗಳೂರು ತಾಲೀಬಾನ್ ಆಗುತ್ತಿದೆ' ಅನ್ತಾರೆ..ವಟಗುಟ್ಟಲಿ ಬಿಡಿ..ನಮಗ್ಯಾಕೆ ಚಿಂತೆ?
-ಧರಿತ್ರಿ
venu, raghav, dharitri
ಅಭಿಪ್ರಾಯಕ್ಕೆ ಧನ್ಯವಾದಗಳು
ತಾಲಿಬಾನಿಕರಣ, moral policing ಅಂತ ಬೊಬ್ಬೆ ಹೊಡೆಯುತ್ತಿದ್ದ ಮಾಧ್ಯಮ ಮತ್ತು ಬುದ್ಧಿ(?)ಜೀವಿಗಳಿಗೆ ಸರಿಯಾದ ಪಾಠ ಕಲಿಸಿದ್ದಾರೆ ಮಂಗಳೂರಿನ ಜನತೆ
Post a Comment