Tuesday, May 26, 2009

ಕನವರಿಕೆ - 3

ವ್ಯತ್ಯಾಸ

ಆಟಗಾರ
ವಿಜಯವನ್ನರಸುವುದು
ನದಿ
ಸಮುದ್ರವನ್ನರಸಿದಂತಲ್ಲ...
ವ್ಯಾಪಾರಿ
ಗಿರಾಕಿಯನ್ನರಸುವುದು
ಹುಡುಗ ಹುಡುಗಿಯನ್ನರಸಿದಂತಲ್ಲ...
ನಿರುದ್ಯೋಗಿ
ಕೆಲಸವರಸುವುದು
ದುಂಬಿ
ಹೂವನ್ನರಸಿದಂತಲ್ಲ
**********

ಚರಂಡಿ

ಹಸಿದ ವ್ಯಕ್ತಿ
ಓಲಾಡುತ್ತಾ ಬೀಳುವ ಜಾಗ
ಕುಡಿದ ವ್ಯಕ್ತಿ
ತೂರಾಡುತ್ತಾ ಮಲಗುವ ಜಾಗ
***********

ಪರಿಸರ

ಈಗ
ರಮಣೀಯ ಪ್ರಕೃತಿ,
ಹಸಿರು ವನ, ಬೆಟ್ಟ
ಪ್ರಶಾಂತ ಪರಿಸರ
ಬೇಕೆಂದರೆ
ಸಿಗುವುದು ಕಲಾವಿದನ
ಕುಂಚದಲ್ಲಿ ಮಾತ್ರ
(ಇವು ನನ್ನ ಕಾಲೇಜು ದಿನಗಳ ಕನವರಿಕೆಗಳು)

5 comments:

shivu.k said...

ಹರೀಶ್,

ಕೆಲವು ವಿಚಾರಗಳು ಸುಲಭವಲ್ಲ ಅನ್ನುವುದನ್ನು ಮೊದಲ ಕವನದಲ್ಲಿ, ನಮಗೊದಗಿ ಬಂದಿರುವ ಪರಿಸ್ಥಿತಿಯನ್ನು ಮೂರನೆ ಕವನದಲ್ಲಿ ಚೆನ್ನಾಗಿ ಹೇಳಿದ್ದೀರಿ...

ಧನ್ಯವಾದಗಳು

PARAANJAPE K.N. said...

ನಿಮ್ಮ ಕವನದಲ್ಲಿ ಅಡಕವಾಗಿರುವ ವಿಚಾರ ಮಾರ್ಮಿಕ ಸತ್ಯ

ದಿವ್ಯಾ ಮಲ್ಯ ಕಾಮತ್ said...

ಜೀವನದ ಸತ್ಯಗಳನ್ನು ಚೆನ್ನಾಗಿ ಪ್ರತಿಬಿಂಬಿಸಿದ್ದೀರಾ, ಕವನದಲ್ಲಿ... ಚೆನ್ನಾಗಿದೆ.

ಧರಿತ್ರಿ said...

ಚೆನ್ನಾಗಿವೆ ನಿಮ್ಮ ಕಾಲೇಜು ದಿನಗಳ ಕನವರಿಕೆಗಳು!
-ಧರಿತ್ರಿ

Guruprasad said...

ಹರೀಶ್
ಮೊದಲ ಹಾಗು ಕೊನೆ ಚುಟುಕ ಕವನಗಳು ತುಂಬ ಅರ್ಥ ದಿಂದ ಕೂಡಿದೆ.....ನೀವು ಹೇಳಿರುವಹಾಗೆ ಹಸಿರು ವನವನ್ನು ನಾವು ಕುಂಚದಲ್ಲೇ ನೋಡಬೇಕಾಗಬಹುದು...
ಗುರು