Monday, May 4, 2009

ಬೇಲಿ, ಹೊಲ ಮತ್ತು ಕಾನೂನು

ರ್ನಾಟಕದಲ್ಲಿ ಚುನಾವಣೆ ಸಂದರ್ಭ ಕರ್ತವ್ಯಕ್ಕೆಂದು ಹೊರರಾಜ್ಯಗಳಿಂದ ಆಗಮಿಸಿದ್ದ ಆರಕ್ಷಕರ ‘ದುರ್ವರ್ತನೆ’ಯ ಮೂರು ಪ್ರಕರಣಗಳು ದಾಖಲಾದವು. ಅವುಗಳಲ್ಲಿ ಎರಡು ನಡೆದದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ. ಮೊದಲನೆ ಪ್ರಕರಣದಲ್ಲಿ ಬಂಟ್ವಾಳದಲ್ಲಿ ನಿಯೋಜಿತರಾಗಿದ್ದ ಕೇರಳ ಪೊಲೀಸರು ಮಂಗಳೂರಿನ ಪಣಂಬೂರು ಬೀಚ್ ನಲ್ಲಿ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದ್ದು ಕಾರಣ. ಅಲ್ಲಿ ಇದ್ದ ಸಾರ್ವಜನಿಕರು ಈ ಪೊಲೀಸರನ್ನು ‘ವಿಚಾರಿಸಿ’ ಬಳಿಕ ಸ್ಥಳೀಯ ಪೊಲೀಸರಿಗೆ ಒಪ್ಪಿಸಿದರು. ಈ ಸಂದರ್ಭ ತಳ್ಳಾಟ, ಹೊಡೆದಾಟಗಳು ಆದವು. ಬಳಿಕ ಕೋರ್ಟಿಗೆ ಹಾಜರುಪಡಿಸುವ ವೇಳೆ ಪತ್ರಿಕಾ ಛಾಯಾಗ್ರಾಹಕರನ್ನು ಇದೇ ಆರೋಪಿಗಳು ದುರುಗುಟ್ಟಿ ನೋಡಿದ್ದೂ ಆಯಿತು.
ಇನ್ನೊಂದು ಪ್ರಕರಣ ದುರಂತಮಯವಾಯಿತು. ಧರ್ಮಸ್ಥಳದಲ್ಲಿ ದೇವಸ್ಥಾನದಲ್ಲೇ ‘ಜಬರ್ದಸ್ತ್’ ಮಾಡುತ್ತಿದ ಆಂಧ್ರ ಪೊಲೀಸರು ಸಂಜೆ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದ ಹುಡುಗರೊಂದಿಗೆ ಕದನಕ್ಕಿಳಿದರು. ಇಲ್ಲೂ ಮಾತಿನ ವಿನಿಮಯವಾದವು. ಗುಂಡು ಹಾರಿಸಿ ಒಬ್ಬನನ್ನು ಕೊಂದದ್ದೂ ಆಯಿತು. ಸಾರ್ವಜನಿಕರು ಟಯರ್ ಪೇರಿಸಿ ಕಿಚ್ಹು ಕೊಟ್ಟು ಪ್ರತಿಭಟನೆ ನಡೆಸಿದರು. ಮರುದಿನ ಊರು ಬಂದ್ ಮಾಡಿದರು.
ಕೆಲವು ಪತ್ರಿಕೆ, ವಬ್ ಸೈಟ್ ಗಳಲ್ಲಿ “ಪೊಲೀಸರು ‘ಪಾಪ’ ಅವರು ಹೆಂಡತಿ ಮಕ್ಕಳನ್ನು ಬಿಟ್ಟು ಬರುತ್ತಾರೆ ನೋಡಿ ಹೀಗಾಗಿಯೇ ಸ್ವಲ್ಪ ಗುಂಡು ಹಾಕಿ ಹೆಂಗಸರ ಮೈಮೇಲೆ ಕೈ ಹಾಕಿದರೆ ಅದು ವ್ಯವಸ್ಥೆಯದ್ದೇ ತಪ್ಪು. ಸಾರ್ವಜನಿಕರು ಹಾಗೆ ದನಕ್ಕೆ ಬಡಿದ ಹಾಗೆ ಹೊಡೆಯುವಿದು ಎಲ್ಲಾದರೂ ಉಂಟಾ” ಎಂಬ ಅರ್ಥ ನೀಡುವ ಬರೆಹಗಳನ್ನು ಪ್ರಕಟಿಸಿದವು. ಬಿಡಿ, ಅದು ಅವರವರ ಅಭಿಪ್ರಾಯ ಎಂದಾಯಿತು.
ಆದರೆ ಸಾಮಾನ್ಯ ನಾಗರಿಕನೊಬ್ಬ ಪೊಲೀಸ್ ಮಾಡುವ ತಪ್ಪಿಗೆ ಕಾನೂನು ಕೈಗೆತ್ತಿಕೊಂಡು ಯಾತಕ್ಕಾಗಿ ಪ್ರತಿಭಟಿಸುತ್ತಾನೆ? ಇದು ಸರಿಯಾ, ತಪ್ಪಾ, ಹಾಗಾದರೆ ಪೊಲೀಸರು ಕೆಟ್ಟ ಕೆಲಸ ಮಾಡಿದಾಗ ಯಾವ ರೀತಿ ಪ್ರತಿಭಟಿಸಬೇಕು? ಉದಾ: ಮಂಗಳೂರು, ಧರ್ಮಸ್ಥಳ ಘಟನೆಗಳಲ್ಲಿ ಏನು ಮಾಡಬಹುದಿತ್ತು?
ಪ್ರಾಕ್ಟಿಕಲ್ ಆದ ಉತ್ತರಗಳು ಸಿಗಬಹುದೇ?

12 comments:

PARAANJAPE K.N. said...

ವಾರಪತ್ರಿಕೆಯೊ೦ದರಲ್ಲಿ ಈ ತೆರನಾದ ಘಟನೆಗಳಿಗೆ ವ್ಯವಸ್ಥೆಯೇ ಕಾರಣ, ಹೆ೦ಡತಿ ಮಕ್ಕಳನ್ನು ಬಿಟ್ಟು ದೂರದೂರಿನಲ್ಲಿ ಪ್ರತಿಕೂಲ ಸ್ಥಿತಿಯಲ್ಲಿ ಅವಡುಗಚ್ಚಿ ಕೆಲಸ ಮಾಡುವ ಪೋಲೀಸರ ಮನಸ್ಥಿತಿ ಈ ರೀತಿಯ ಘಟನೆಗಳಿಗೆ ಕಾರಣವಾಗುತ್ತೆ ಅ೦ತ ಬರೆದಿದ್ದನ್ನು ಓದಿದೆ. ನನಗದು ಸರಿ ಎನಿಸಲಿಲ್ಲ. ನೀವು ಹೇಳಿದ ಪ್ರಕರಣಗಳಲ್ಲಿ ನಾಗರಿಕರ ಗು೦ಪಿನ ಮೇಲೆ ಪೊಲೀಸರು ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಮಾಡಿದಾಗ ಪ್ರತಿಭಟಿಸುವುದು (ಕೆಲವೊಮ್ಮೆ ಉಗ್ರಸ್ವರೂಪ ತಾಳುವುದು) ಸಹಜ ಮತ್ತು ಅವಶ್ಯಕ ಕೂಡ. ಅದನ್ನು ತಪ್ಪೆನಲಾಗದು. ಅ೦ತಹ ತಪ್ಪೆಸಗಿದ ಪೋಲೀಸರ ವಿರುದ್ಧ ನಿಜವಾಗಿಯೂ ಕ್ರಮ ಜರಗುವುದೇ ಮತ್ತು ತಪ್ಪಿತಸ್ಥರಿಗೆ ಶಿಕ್ಷೆ ಆಗುವುದೇ ? ಎನ್ನುವುದೇ ನಮ್ಮ ಮು೦ದಿರುವ ಪ್ರಶ್ನೆ. ಮ೦ಗಳೂರು, ಧರ್ಮಸ್ಥಳ ಗಳಲ್ಲಿ ನಡೆದ ಸಾರ್ವಜನಿಕರ ಆಕ್ರೋಶದ ಪ್ರತಿಕ್ರಿಯೆ ತಪ್ಪೇನಲ್ಲ. ಪೋಲಿಸರಾಗಲಿ, ರಾಜಕಾರಣಿ ಗಳಾಗಲಿ, ಯಾರೇ ಆದರೂ ತಪ್ಪೆಸಗಿದಾಗ ಪ್ರತಿರೋಧಿ ಸುವ ಗುಣ ನಾಗರಿಕರಲ್ಲಿ ಮೈಗೂಡಿದಾಗ ಮಾತ್ರ ಮು೦ದೆ ಅ೦ತಹ ಪ್ರಕರಣ ಗಳಾಗದ೦ತೆ ತಡೆಯುವುದು ಸಾಧ್ಯವಾದೀತು. ಅ೦ದ ಹಾಗೆ ನಿಮ್ಮ ಬ್ಲಾಗನ್ನು ಕೆ೦ಡಸ೦ಪಿಗೆ ಯವರು ದಿನದ ಬ್ಲಾಗ್ ನಲ್ಲಿ ಪರಿಚಯಿಸಿ ದ್ದಾರೆ,Congrats.

Shree said...

ಧರ್ಮಸ್ಥಳದ ಘಟನೆಯ ಬಗ್ಗೆ ಇವತ್ತು ನಿಮ್ಮ ಪೇಪರಿನಲ್ಲೇ ಘಟನೆಯ ಇನ್ನೊಂದು ಆಯಾಮ ಓದಿದೆ... ಶಕ್ತಿಶಾಲಿ ಗ್ರೆನೇಡ್-ಗಳಿದ್ದ ಬಸ್ಸಿಗೆ ಸಾರ್ವಜನಿಕರು ಬೆಂಕಿ ಹಚ್ಚಲು ಯತ್ನಿಸಿದಾಗ ಗುಂಡು ಹಾರಿಸುವುದು ಅನಿವಾರ್ಯವಾಯಿತು ಎಂದು ಅವರು ಹೇಳಿಕೆ ಕೊಟ್ಟಿದ್ದಾರೆಂದಿತ್ತು. ಇದು ತಪ್ಪಲ್ಲ ಎಂಬುದು ನನ್ನ ಭಾವನೆ. ಬಸ್ಸಿಗೆ ಬೆಂಕಿ ಬಿದ್ದಿದ್ದರೆ ಇಡಿಯ ಧರ್ಮಸ್ಥಳ ದೇವಸ್ಥಾನದ ಪ್ರಾಂಗಣವೇ ಅನಾಹುತದ ಬೀಡಾಗುತ್ತಿರಲಿಲ್ಲವೇ? ಓರ್ವ ಸತ್ತಿದ್ದನ್ನು ನಾನು ಖಂಡಿತಾ ಸಮರ್ಥಿಸಿಕೊಳ್ಳುತ್ತಿಲ್ಲ, ಆದರೆ ಸಾರ್ವಜನಿಕರು ವರ್ತಿಸುವ ರೀತಿಯಲ್ಲಿ ಹತೋಟಿಯಿರಬೇಕೆಂಬ ಆಚಾರ್ಯರ ವಾದವನ್ನು ಮಾತ್ರ ನಾನು 100ಕ್ಕೆ ನೂರು ಒಪ್ಪುತ್ತೇನೆ.

ಹರೀಶ ಮಾಂಬಾಡಿ said...

ಪರಾಂಜಪೆಯವರೆ,
ಎರಡೂ ಕಡೆಗಳಿಂದ ತಪ್ಪುಗಳು ನಡೆದಿವೆ.
ಆದರೆ ಪೊಲೀಸ್ ಅಂದಾಕ್ಷಣ ರೇಜಿಗೆ ಹುಟ್ಟಿಸುವಂತೆ ವರ್ತಿಸುವುದು ನಾಗರಿಕ ಪ್ರಪಂಚದವರೊಂದ ನಡೆದಿದೆ, ನಡೆಯುತ್ತಿದೆ. ಎಲ್ಲಿ ತಪ್ಪಿದ್ದು?

ಹರೀಶ ಮಾಂಬಾಡಿ said...

ಶ್ರೀ,

ನಮ್ಮ ಪತ್ರಿಕೆಯಲ್ಲೂ ಸುದ್ದಿಯ ವಿವಿಧ ಆಯಾಮಗಳ ವಿಶ್ಲೇಷಣೆ ನಡೆದಿದೆ. ಇದು ಸುದ್ದಿಯ ಇನ್ನೊಂದು ಮಗ್ಗಲು.

ಆದರೆ ವಿಷಯ ಅದಲ್ಲ.

ಯಾಕೆ ನಮ್ಮ ಮತ್ತು ಪೊಲೀಸರ ನಡುವೆ ಸಂಘರ್ಷ ಹುಟ್ಟುತ್ತದೆ?
ಇದಕ್ಕೆ ಪೊಲೀಸರು ಎಷ್ಟು ಕಾರಣ..ಅವರ ಮತ್ತು ನಾಗರಿಕರ ನಡುವೆ ಇಂಥ ಗ್ಯಾಪ್ ಇರಬಾರದು ಎನ್ನುವುದು ನನ್ನ ಕಳಕಳಿ.

ಸಂದೀಪ್ ಕಾಮತ್ said...

ಯಾವುದೇ ಊರಿನ ಜನರ ಮನಸ್ಥಿತಿಯ ಬಗ್ಗೆ ಆ ಊರಿನ ಪೋಲಿಸರೇ ಸರಿಯಾಗಿ ಅರಿತುಕೊಂಡಿರುತ್ತಾರೆ ಅನ್ನೋದು ನನ್ನ ವೈಯುಕ್ತಿಕ ಅಭಿಪ್ರಾಯ.

ಮುಂಬಯಿಯ ಕ್ರೈಂ ಬ್ರಾಂಚ್ ನಲ್ಲಿದ್ದವನು ಒಂದು ದಿನದ ಮಟ್ಟಿಗೆ ಬಿಹಾರಕ್ಕೇನಾದ್ರೂ ಹೋದ್ರೆ ಅಲ್ಲಿಧರ್ನದೇಟು ತಿಂದೇ ಬರುತ್ತಾನೆ.

ಹಾಗಾಗಿ ಒಂದು ದಿನದ ಮಟ್ಟಿಗೆ ಬರುವ ಪರ ಊರಿನ ಪೋಲಿಸರು ತಮ್ಮ ಪೋಲಿಸ್ ಬುದ್ಧಿಯನ್ನು ಎಲ್ಲೆಂದರಲ್ಲಿ ಪ್ರದರ್ಶಿಸೋದು ತಪ್ಪಾಗುತ್ತೆ.

ವನಿತಾ / Vanitha said...

ನಾನು ಬರೀ ಒಂದು ಕನ್ನಡ ಪತ್ರಿಕೆ ಓದುತ್ತೇನೆ, ಹಾಗಾಗಿ ನಂಗೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ನಾನು ಓದಿದ ಪ್ರಕಾರ, ball ಬಂದು ಬಸ್ ಗೆ ಬಿದ್ದುದರಿಂದ ಗಲಾಟೆ ಶುರು ಆಯಿತು ಎಂದು.. ಪ್ರಮುಖವಾಗಿ ಎದ್ದು ಕಾಣುವುದೆಂದರೆ, ಪೊಲೀಸರು ಅಥವಾ ಸಾರ್ವಜನಿಕರು ಬೇಗ ತಾಳ್ಮೆ ಕಳೆದುಕೊಳ್ಳುತ್ತಾರೆ.
ಪೊಲೀಸರು ಮೌನವಾಗಿ ಮುಂದೆ ಹೋಗಿದ್ದರೆ, ಈ ಅನಾಹುತಗಳು ನಡೆಯುತ್ತಿದ್ದುವಾ..??? ಬಹುಶ ಇಲ್ಲ..
ನನ್ನ ಪ್ರಕಾರ, ಕೆಲವೊಂದು ಕಡೆ, ಅನಗತ್ಯವಾಗಿ (ವಿವೇಚನೆ ಇಲ್ಲದೆ) ಪೊಲೀಸರು ಕಾನೂನು ಕೈಗೆತ್ತಿಕೊಳ್ಳುತ್ತಾರೆ.

ಮಹೇಶ್ ಪುಚ್ಚಪ್ಪಾಡಿ said...

ಹರೀಶ್
ಧರ್ಮಸ್ಥಳದ ಘಟನೆಯ ಬಗ್ಗೆ ನಾನು ಹತ್ತಿರದಿಂದ್ ನೋಡಿದ್ದೆ . ನನ್ನ ಅಭಿಪ್ರಾಯದ ಪ್ರಕಾರ, ಅಲ್ಲಿ ಸ್ಥಳೀಯರ ವರ್ತನೆ ಸರಿಯಿಲ್ಲದೇ ಇರಬಹುದು.ಆದರೆ ಪೊಲೀಸರ ವರ್ತನೆ ಅಲ್ಲಿ ಮೊದಲಿಗೆ ಕಾಣಿಸುತ್ತದೆ ಯಾಕೆಂದರೆ ಒಂದು ಹುದ್ದೆಯಲ್ಲಿ ಇದ್ದವರು ಮತ್ತು ಸಮಾಜದ ಶಾಂತಿ ಕಾಪಾಡಬೇಕಾದವರು ಏಕಾಏಕಿ ಗುಂಡಿನ ದಾಳಿ ಮಾಡುವುದು ಸರಿಯಲ್ಲ.ಸರಿ ಗುಂಡು ಹಾರಿಸುತ್ತಾರೆ ಅಂತನೇ ಹೇಳೋಣ.. ಬಸ್ಸಲ್ಲಿ ಮದ್ದು ಗುಂಡು ಇತ್ತು ಅಂತನೇ ಹೇಳೋಣ .. ಗಾಳಿಯಲ್ಲಿ ಗುಂಡು ಹಾರಿಸಬಹುದಿತ್ತಲ್ಲಾ.. ಈಗ ಗುಂಡಿನ ದಾಳಿಯಿಂದ ಸತ್ತ ಮೇಲೆ ಸಬೂಬುಗಳೇ ಸಬೂಬು... ಹಾಗಾಗಿ ಇಲ್ಲಿ ಸತ್ತವ ಹೋದ .. ಆ ಪೊಲೀಸ್ರಿಗೂ ಏನೂ ಆಗಲ್ಲ.. ಒಂದು ವಾರ ಸುದ್ದಿಯಾದದ್ದು ಚರ್ಚೆಯಾದದ್ದು ಮಾತ್ರಾ ಸಂಗತಿಯಾಗಹುದು ಅಂತ ನನಗನ್ನಿಸುತ್ತದೆ .ಮಾತ್ರವಲ್ಲ ನಮ್ಮ ರಾಜಕಾರಣಿಗಳು ನೋಡಿ ಪರಿಸ್ಥಿತಿಯ ಲಾಭ ಪಡೆಯಲು ಹೇಗೆ ಯತ್ನಿಸಿದರು ಅಂತ.. ಸಾವಿನ ಮನೆಯಲ್ಲೂ ಲಾಭದ ಲೆಕ್ಕಾಚಾರ..!!

nagaraja rao said...

ಹರೀಶ್,
ನಮಸ್ತೆ.
ತಪ್ಪು ಎರಡೂ ಕಡೆಯಿಂದ ನಡೆದಿದೆ. ಒಟ್ಟಿನಲ್ಲಿ ಸಹನೆ ಕಳೆದುಕೊಂಡಿದ್ದೇವೆ. ಅದಕ್ಕಾಗಿ ತೆತ್ತ ಬೆಲೆ ಮಾತ್ರ ಒಂದು ಅಮಾಯಕವಾದ ಜೀವ. ಅದು ಬೇಸರದ ಸಂಗತಿ. -ಜವಳಿ

Rakesh Mathias said...

ಯಾರು ಸರಿ ಯಾರು ತಪ್ಪು ಎನ್ನುವುದಕ್ಕಿಂತ ದಕ್ಷಿಣಕನ್ನಡ ಮತ್ತು ಉಡುಪಿಯ ಯಾತ್ರಾ ಸ್ಥಳಗಳಿಗೆ ಬರುವ ಯಾತ್ರಿಕರನ್ನು ಸ್ಥಳೀಯರು ಹೀಯಾಳಿಸುವ ಪ್ರ‍ವೃತ್ತಿಯ ಬಗ್ಗೆ ಚರ್ಚೆ ನಡೆಯಬೇಕಾಗಿದೆ.

ತೀರ್ಥಯಾತ್ರೆಗೆ ಬರುವ ದೂರದೂರಿನ ಯಾತ್ರಿಕರು ಈ "ಬುದ್ಧಿವಂತ" ಜಿಲ್ಲೆಗಳಲ್ಲಿ ಕಂಡು ಕೇಳರಿಯದ ಕಷ್ಟ ಪಡುತ್ತಾರೆ. ಹೆಂಗಸರು ಹುಡುಗಿಯರು ಇಲ್ಲ ಸಲ್ಲದ ರೋಡ್ ರೋಮಿಯೋಗಳನ್ನು ಟೋಲರೇಟ್ ಮಾಡಬೇಕಗುತ್ತದೆ. ಬಸ್ ವ್ಯಾನ್ ಡ್ರೈವರುಗಳು ಖಾಸಗಿ ಬಸ್ಸಿನವರಿಂದ ಹಿಡಿದು ದ್ವಿಚಕ್ರ ವಾಹನದವರಿಂದ "ಘಟ್ಟದವನು" ಒಂದು ಹೀಯಾಳಿಸಿಕೊಂಡು ಪೆಟ್ಟು ತಿನ್ನುವುದು ದಿನನಿತ್ಯದ ಸಂಗತಿಯಾಗಿದೆ.

ಏನೇ ಹೇಳಿ, ಧರ್ಮಸ್ಥಳದ ಪಡ್ಡೆಗಳು ತಮ್ಮ ಎಂದಿನ ಚಾಳಿ ಮುಂದುವರೆಸಲು ಹೋಗಿ ಆಂಧ್ರದ ಪೊಲೀಸರನ್ನು ಕಿಚಾಯಿಸಿದು ತಪ್ಪು. ಬೇರಾವ ದೇಶದಲ್ಲೂ ಹೀಗೆ ಪೊಲೀಸರ ಮೇಲೆ ಹಲ್ಲೆ ಮಾಡಲು ಹೋದರೆ ಔಟ್ ಕಮ್ ಇದೇ ಆಗುತ್ತಿತ್ತು ಎಂಬುದರಲ್ಲಿ ಸಂಶಯವೇ ಇಲ್ಲ.

shivu.k said...

ಹರೀಶ್,

ಫೋಲಿಸರು ಏನೇ ಆಗಲಿ ಅತಿರೇಕಕ್ಕೆ ಹೋಗಬಾರದು...ಎರಡು ಘಟನೆಗಳನ್ನು ಪತ್ರಿಕೆಗಳಲ್ಲಿ ಓದಿದ್ದೇನೆ...ಕೆಲವೊಮ್ಮೆ ಪೋಲಿಸರದು ಅತಿಯಾಯಿತು ಅನ್ನಿಸುತ್ತೆ....

ಧರಿತ್ರಿ said...

ಹೆಡ್ಡಿಂಗ್ ಸಕತ್ತಾಗಿದೆ..:))))
-ಧರಿತ್ರಿ

ಹರೀಶ ಮಾಂಬಾಡಿ said...

ನಿಮ್ಮ ಅಭಿಪ್ರಾಯಗಳಿಗೆ ಥ್ಯಾಂಕ್ಸ್