ಹೌದಲ್ಲ! ನಾವೀಗ ಗಗನಚುಂಬಿಸಲು ಹೊರಟಿದ್ದೇವೆ
ಗಮ್ಯವೆತ್ತ ಗಮನವೆತ್ತ? ತಿಳಿದಿದೆಯಾ
ಬೆಂಕಿಯೂ ಕೆನ್ನಾಲಿಗೆ ಚಾಚಿ ಹೊರಟಿದೆ ನಮ್ಮೊಂದಿಗೆ
ಅಗಾಧ ಮರಳು, ನೀರ ರಾಶಿ ಇದ್ದರೂ ನಂದಿಸಲಿಲ್ಲವಲ್ಲ
ಯಾರಿಗೂ ಬೇಡ ನಮ್ಮೊಳಗೆ ಸ್ನೇಹದ ಸಹನೆಯೇ ಇಲ್ಲ
ಒಬ್ಬರಿಗಿಂತ ಒಬ್ಬರು ಹೊರಟಿದ್ದೇವೆ ಗಗನಚುಂಬಿಸಲು
ತ್ವೇಷಮಯ ಜಗಜೀವನದಲ್ಲಿ ಎಲ್ಲವೂ ಲೆಕ್ಕಾಚಾರ
ಎಲ್ಲಿದೆ ಸಂಬಂಧದ ಸಹಕಾರ?
ಉಗುಳಿದರೆ ಬೆಂಕಿ, ಕಾರುವುದೂ ವಿಷವೇ
ಜಗತ್ತು ಕಿರಿದಾದಂತೆ ಮಾನವತೆ ಸುಟ್ಟುಹೋಗಿದೆ
ನಂದಿಸಲು ನಾವೆಲ್ಲಿ?
ನಾವೀಗ ಗಗನಚುಂಬಿಸಲು ಹೊರಟಿದ್ದೇವೆ
6 comments:
mastagide... navuuu horatiddeve...
ಹೌದು ಜಗತ್ತು ಕಿರಿದಾಗಿದೆ ಅನ್ನುತ್ತೇವೆ, ಆದರೆ ಪಕ್ಕದ ಮನೆಯವನ ಪರಿಚಯವೇ ನಮಗೆ ಸರಿಯಾಗಿ ಇರುವುದಿಲ್ಲ, ಗಗನಚು೦ಬಿಗಾಗಲು ಹೊರಟ ನಾವು ನಿ೦ತ ನೆಲ ಮರೆಯುತ್ತಿದ್ದೇವೆ, ದೃಷ್ಟಿ ಮೇಲೆಯೇ ನೆಟ್ಟಿದೆ, ನೆಲ ಕಾಣುತ್ತಿಲ್ಲ, ಪ್ರೀತಿ, ವಿಶ್ವಾಸ, ಸಹಕಾರಗಳು ಗೌಣವಾಗಿ ದ್ವೇಷ-ಅಸೂಯೆಗಳೇ ಮೆರೆದಾಡುವ೦ತಾಗಿದೆ. ಅರ್ಥಪೂರ್ಣ ವಾಗಿದೆ.
ಹರೀಶ್,
ಒಂದು ಅರ್ಥಪೂರ್ಣ ಲೇಖನ....ನಮ್ಮೊಳಗೆ ಪ್ರಶ್ನಿಸಿಕೊಳ್ಳುವಂತೆ ಮಾಡುತ್ತೆ...
ಧನ್ಯವಾದಗಳು
ಹೌದು,,, ನೀವು ಹೇಳುತಿರುವುದು ನಿಜ....ಬಾಂದವ್ಯಗಳೇ ಇಲ್ಲದೆ ಸ್ವಾರ್ತ ದಿಂದ ಎಲ್ಲರೂ ಎಲ್ಲಿಗೋ ಹೊರಟಿದ್ದಾರೆ....
ಅರ್ಥ ಪೂರ್ಣ ವಾಗಿ ಇದೆ ಲೇಖನ
ಗುರು
ಪ್ರಿಯ ಹರೀಶ್,
ನಮಸ್ತೆ.
ಇತ್ತೀಚೆಗೆ ನಿಮ್ಮ ಲೇಖನಿ ಹರಿತವಾಗುತ್ತಿದೆ. ಪ್ರತಿ ಲೇಖನಗಳೂ ಮನಸ್ಸನ್ನು ಚುಚ್ಚುತ್ತಿವೆ. ನಿಮ್ಮ ಕನವರಿಕೆ-೨ ಹಾಗೆ ಮಾಡಿತು. ಮರೆಯಾದ ಸ್ನೇಹ. ಆದರೂ ಗಗನಚುಂಬಿಸಲು ಹೊರಟವರ ಬಗ್ಗೆ ಓದಿ ಮನಸ್ಸು ಕಹಿಯಾಯಿತು. ಎಷ್ಟು ಚೆನ್ನಾಗಿ ಬರೆಯುತ್ತಿದ್ದೀರಿ. ಅಭಿನಂದನೆಗಳು
agni, paraanjape, shivu, guru, javali sir
thanks
Post a Comment