ಅಂತೂ ಮುಗಿಯಿತು.ನಮ್ಮೂರಲ್ಲಿ ಚುನಾವಣೆ. ಯಾರು ಗೆಲ್ಲುತ್ತಾರೆ, ಸೋಲುತ್ತಾರೆ ಎಂಬುದು ಮುಂದಿನ ಮಾತು.
ಯಾರು ಗೆದ್ದರೂ ಅದು ಜನತೆಯ ವಿಜಯ ಎಂಬುದು ನನ್ನ ಅನಿಸಿಕೆ.
ಏಕೆಂದರೆ, ನಮ್ಮ ಮಂಗಳೂರು ಮತ್ತು ಉಡುಪಿಯಲ್ಲಿ ಗರಿಷ್ಟ ಮತ ಚಲಾವಣೆಯಾಗಿದೆ. ನಾವು ಬೆಂಗಳೂರಿನವರಷ್ಟು ಬುದ್ದಿವಂತರಲ್ಲದಿರಬಹುದು. ಆದರೆ ಹೆಚ್ಹಿನ ಪಾಲು ಓಟು ಹಾಕಿದ್ದೇವೆ. ಯಾವುದೇ ಹೆಂಡ, ಹಣಕ್ಕೆ ಯಾರೂ ಬಗ್ಗಿಲ್ಲ. ಯಾರು ನಮ್ಮ ಕಣ್ಣಿಗೆ ಸೂಕ್ತ ಎಂದು ಕಾಣುತ್ತಾರೋ ಅವರಿಗೆ ಓಟು ಹಾಕಿದ್ದೇವೆ. ನಕಲಿ ಮತದಾನ ಮಾಡಿಲ್ಲ. ಹೇಡಿ ನಕ್ಸಲರ ಬೆದರಿಕೆಗೆ ಜಗ್ಗಿಲ್ಲ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಾವು ನಂಬಿಕೆ ಇಟ್ಟಿದ್ದೇವೆ. ಯಾರೋ ಅರೆಬುದ್ದಿಜೀವಿಗಳು ಇಡೀ ಮಂಗಳೂರಿನವರನ್ನು ‘ತಾಲಿಬಾನಿಗಳು’ ಎಂದು ಹೇಳಿದ್ದಕ್ಕೆ ನಾವ್ಯಾರೂ ಸೊಪ್ಪು ಹಾಕಿಲ್ಲ.
ಹಲವಾರು ಮಂದಿಗೆ ಸಂಕಟವಾಗಿದ್ದಿರಬಹುದು. ಏನೆಂದರೆ ನಮ್ಮೂರಲ್ಲಿ ಚುನಾವಣೆ ಶಾಂತಿಯುತವಾಯಿತು ಎಂಬುದೇ ಮಿರಾಕಲ್.
ಅದಕ್ಕೇ ನೋಡಿ ಸುಳ್ಯದಲ್ಲಿ ಕುಡಿದು ಮಾಡಿದ ಸಣ್ಣ ತಕರಾರೊಂದನ್ನು ಬ್ರೇಕಿಂಗ್ ನ್ಯೂಸ್ ಆಗಿ ಚಾನೆಲೊಂದು ಬಿತ್ತರಿಸಿತು. ಅದನ್ನು ನೋಡಿ ಇನ್ನೊಂದು ಚಾನೆಲ್ ಕೂಡ ಫ್ಲ್ಯಾಷ್ ನ್ಯೂಸ್ ಆಗಿ ತೋರಿಸಿತು. ಆದರೆ Sorry..
ಈಗ ಎಲ್ಲೆಲ್ಲೂ ಶಾಂತಿ. ಧರ್ಮಸ್ಥಳ ಘಟನೆಯೊಂದನ್ನು ಬಿಟ್ಟರೆ..
ಕುಡಿದ ಮತ್ತಿನಲ್ಲಿ ‘ಪೋಲೀ’ಸ್ ಧರ್ಮಸ್ಥಳ ದೇವಸ್ಥಾನದ ಪಾಪದ ನೌಕರನಿಗೆ ಗುಂಡು ಹಾರಿಸಿಬಿಟ್ಟ ಘಟನೆ ಪತ್ರಿಕೆಗಳಲ್ಲಿ ಓದಿರಬಹುದು. ಟಿ.ವಿ.ಗಳಿಂದ ಸುದ್ದಿ ಗೊತ್ತಾಗಿರಬಹುದು. ಆದರೂ ನಮ್ಮ ಜನ ಆ ಪಾಪಿಯ ಬಂಧನವಾಗುವ ಕುರಿತು ಒತ್ತಾಯಿಸಿದರು. ಊರು ಬಂದ್ ಮಾಡಿದರು. ಇಲ್ಲಿಯೂ ಜಾತಿ, ಮತ ಎಂದು ಯಾರೂ ಲೆಕ್ಕ ಹಾಕಲಿಲ್ಲ.
ನೀವು ಬಿಜೆಪಿಯೋ , ಕಾಂಗ್ರೆಸ್ಸೋ, ಕಮ್ಯೂನಿಷ್ಟೋ ಬೇರೆ ಮಾತು. ಚುನಾವಣೆಯಲ್ಲಿ ಗೆದ್ದ ಪಕ್ಷವೋ ಅಭ್ಯರ್ಥಿಯೋ ‘ಸರಿ ಇಲ್ಲ’ ಎಂದು ಇನ್ನು ನೀವು ಹೇಳಿದರೆ, ನಮ್ಮೂರ ಜನರೇ ಸರಿ ಇಲ್ಲ ಎಂದು ನಾನು ತಿಳಿದುಕೊಳ್ಳಬೇಕದೀತು. ನಾನಂತೂ ಜನರ ತೀರ್ಮಾನವನ್ನು ಗೌರವಿಸುತ್ತೇನೆ.
ಇರಲಿ ಅದು ಮುಂದಿನ ಮಾತು.
ನಮ್ಮೂರು ಚೆನ್ನಾಗಿದೆ ಎಂಬುದೇ ಈಗಿರುವ ಸತ್ಯ.
14 comments:
ಪ್ರಿಯ ಹರೀಶ್,
ನಮಸ್ತೆ,
"ನಮ್ಮೂರು ಚೆನ್ನಾಗಿದೆ" ಲೇಖನ ತುಂಬಾ ಚೆನ್ನಾಗಿದೆ. ಚಿಕ್ಕದಾಗಿದ್ದರೂ ಮಾತಿನಲ್ಲಿ ಹರಿತವಿದೆ. ಕಣ್ಣು ತೆರೆಯಿಸುವಂತೆ ಬರೆದಿದ್ದೀರಿ. ನಮ್ಮೂರಿನ ಬಗ್ಗೆ ನನಗೂ ತೀರಾ ಹೆಮ್ಮೆ . -ಜವಳಿ
ಹರೀಶ್.
ತುಂಬ ಚೆನ್ನಾಗಿ ಬರೆದಿದ್ದರ ನಿಮ್ಮೂರ ಬಗ್ಗೆ... ಹೌದು ಎಲ್ಲರಿಗೂ ನಮ್ಮ ಊರು , ನಮ್ಮ ತನ, ನಮ್ಮ ಜನ,,ಬಗ್ಗೆ ಅಭಿಮಾನವಿರಬೇಕು... ನಿಮ್ಮ ಈ ಲೇಖನದಿಂದ ಅರ್ಥ ವಾಗ್ತಾ ಇದೆ ನಿಮಗೆ ಎಷ್ಟು ಅಭಿಮಾನ ಇದೆ ಅಂತ...
ಧರ್ಮಸ್ತಳದ ಘಟನೆ ಪತ್ರಿಕೆನಲ್ಲಿ ನೋಡಿ ಬೇಜಾರ ಆಯಿತು,,, ಅದರಲ್ಲೂ ಧರ್ಮಸ್ತಳ ಮಂಗಳೂರಿನ ಜನ ತೋರಿದ ಒಗಟ್ಟು ನೋಡಿ ತುಂಬ ಖುಷಿ ಪಟ್ಟೆ... ಗುಡ್ ಹೀಗೆ ಇರಬೇಕು.... ಲಾತಿ ಚಾರ್ಜ್ ಮಾಡಿ,, ಹಾಗೆ ಹೊರಟಿದ್ದವರನ್ನ ಅಸ್ಟು ಬೇಗ ಎಲ್ಲರೂ ಒಗ್ಗಟ್ಟಾಗಿ,, ನಿಲ್ಲಿಸಿ ಬಂದಿಸುವಲ್ಲಿ ಯೇಸಸ್ವಿ ಆಗಿದ್ದರೆ... ಮಂಗಳೂರಿನವರು ಯಾವಾಗಲು ಒಗ್ಗಟ್ಟು ತೋರಿಸ್ತಾರೆ...ವೆರಿ ನೈಸ್...
ಗುರು
ಹರೀಶ್,
ಮತದಾನದ ಬಗ್ಗೆ ಮತ್ತು ನಿಮ್ಮೂರಿನ ಬಗ್ಗೆ ತುಂಬಾ ಚೆನ್ನಾದ ಬರವಣಿಗೆ....ಚುನಾವಣಾ ಪಲಿತಾಂಶಕ್ಕೆ all the best..
ಧನ್ಯವಾದಗಳು..
ನಮ್ಮೂರು ನಿಜಕ್ಕೂ ಚೆನ್ನಾಗಿದೆ...
ಊರಿಗೆ ತಾಗಿಕೊಂಡಿರುವ ಕೇರಿ .. ಕೇರಿಗೆ ತಾಗಿಕೊಂಡಿರುವ ಊರು.... ಕ್ಷುಲಕ ಗಲಭೆಗೆ ಕಾರಣ ಇದುವೇ...
ಹೌದು, ಚುನಾವಣಾ ವಿಷಯದಲ್ಲಿ, ರಾಜಕೀಯ ಪ್ರಜ್ಞೆಯ ಜಾಗೃತಿ ಇರುವವರು ದ.ಕ.ದ ಜನ ಅನ್ನುವುದರಲ್ಲಿ ಅತಿಶಯವಿಲ್ಲ. ನಿಮ್ಮ ಬರಹದೊಳಗೆ ಸೂಚ್ಯವಾಗಿ, ಸೂಕ್ಷ್ಮವಾಗಿ ಅಡಕವಾಗಿರುವ ಊರಿನ ಬಗೆಗಿನ ಅಭಿಮಾನ ಗೋಚರವಾಗುತ್ತದೆ.
ಮಸ್ತ್,
ನಿಮ್ಮೂರ್ ಚೆನ್ನಾಗಿದೆ.
ನಮ್ಮೂರು ಕಡಲೂರು..ನಮ್ಮೂರಿಗೆ ನಮ್ಮೂರು ಸಾಟಿ ಅಲ್ವೇ? ಯಾರೇ ತಾಲಿಬಾನ್ ಅಂತ ಬೊಬ್ಬಿಟ್ಟರೂ ಚೆನ್ನಾಗೇ ಇರುತ್ತೆ ಅಲ್ವಾ ಹರೀಶ್ ಸರ್..!
-ಧರಿತ್ರಿ
ನಾನು ಮಂಗಳೂರಿನವ ಅನ್ನೋ ಮಾತನ್ನು ಪಕ್ಕಕ್ಕಿಟ್ಟು ಯೋಚಿಸಿದರೂ ನಮ್ಮೂರು ಚೆನ್ನಾಗಿದೆ:)
ಜವಳಿ ಸರ್, ಗುರು, ಮಹೇಶ್, ಧರಿತ್ರಿ, ಸಂದೀಪ್
ನಮ್ಮೂರಿನ ಪ್ರೀತಿಗೆ ಸಾಥ್ ನೀಡಿದ್ದಕ್ಕೆ ಧನ್ಯವಾದ
ಶಿವು, ಪರಾಂಜಪೆ, ಅಗ್ನಿ ನಿಮ್ಮ ಪ್ರತಿಕ್ರಿಯೆಗೆ ವಂದನೆಗಳು.
ಹೀಗೆ ಬರುತ್ತಿರಿ.
nalin gedda maatrakke mangaluru hege thaalibaaneekarana-vaguvudillavo haage nimmuru sundara yenda maatrakke komuvaada-ve illa yendu hemme paduvanthilla.. oorigondu holageri yembanthe nere oorugaligintha hindutvada amalu swalpa hecchaagiye ide mangaloorinalli.. yintha amalinallu thamma sama-chittada gamalu nimmura hemmeyannu kammiyagisadu... ottare yellarigu 'nammuru namage savi-bella' alwa....?
anonymous, Please write ur name
Otherwise, these is no value for ur comment
-- Harish Mambady
kshamisi... Nammuru namage savi bella- prathikriyeya karthru naane.. By kaviswara shikaripura..
ಕವಿಶ್ವರ ಶಿಕಾರಿಪುರ :)
ನಿಮ್ಮ ಪ್ರತಿಕ್ರಿಯೆ ಸರಿಯಾಗಿಯೇ ಇದೆ. ನನಗೂ ಗೊತ್ತು. ನಮ್ಮೊರಲ್ಲಿ ಕೋಮುವಾದದ ಅಮಲು ಸ್ವಲ್ಪ ಹೆಚ್ಹಾಗಿಯೇ ಇದೆ. ಆದರೆ ಅದನ್ನು ಟೀಕಿಸುವ ಭರದಲ್ಲಿ ಹಿಂದುತ್ವದ ಕಡೆಗೆ ಮಾತ್ರ ಬೆರಳು ತೋರಿಸುತ್ತಾರೆ. ಅದೇ ಸಂಧರ್ಭ ಇತರ ಕಮ್ಯುನಲ್ ಗಳನ್ನು ಪರೋಕ್ಷವಾಗಿ ಬೆಂಬಲಿಸುತ್ತಾರೆ. ಬಾಂಬ್ ಇಡುವ, ಊರನ್ನೇ ನಾಶ ಮಾಡುವವರನ್ನು, ಪ್ರಾರ್ಥನಾ ಮಂದಿರ ನಾಶ ಮಾಡುವವರನ್ನು, ಜಾತಿಯ, ಧರ್ಮದ ಹೆಸರಲ್ಲಿ ಸ್ನೇಹವನ್ನು ಅಳೆಯುವವರೆಲ್ಲರೂ ಕೋಮುವಾದಿಗಳೇ ಎಂದು ಪರಿಗಣಿಸಬೇಕು. ಆದರೆ ನಮ್ಮೂರಿನ ಕೆಲವು ಬುದ್ದಿಜೀವಿಗಳು ಹಿಂದುತ್ವ ವಿರೋಧಿಸುವ ಹೆಸರಲ್ಲಿ ಇನ್ನೊಂದು ಕೋಮನ್ನು ಪ್ರಚೋದಿಸುತ್ತಾರೆ. ಅದನ್ನು ನಿಮ್ಮಂಥವರು ಸರಿಯಾಗಿ ವಿಮರ್ಶಿಸದೆ ಬೆಂಬಲಿಸುತ್ತಾರೆ. ಇಲ್ಲಿ ಹಿಂದೂಗಳೊಂದಿಗೆ ಮುಸ್ಲಿಂ, ಕ್ರೈಸ್ತ ಕೋಮುವಾದಿಗಳೂ ಇದ್ದಾರೆ. ಒಂದು ಕೋಮಿನ ಕಣ್ಣಲ್ಲಿ ಇನ್ನೊಂದು ಕೋಮನ್ನು ದ್ವೇಷಿಸುವುದು ಕೋಮುವಾದ ಅಲ್ಲವೇ.
'nimmanthavaru sariyaagi vimarshisade bembalisutthaare' yemba maathu asamarthaneeya... naanu yellu bembala-da maathaadiye illa.. yelladannu sama-chitthadinda nodabeku yendashte heliddene.. nammuru yenda maatrakke huluku-gale illa yendu samarthisuvudu samanjasavalla.. yaavude komu athiyaagi anya-dharma dwesha thoridaru adu khandaneeya.. nimma 'komuvaada' yemba vyaakhyaanada vyaapthi chikkadu yenisiddakke prathikrayiside.. -kaviswara shikaripura
Post a Comment