ಕಡಲ ಭೋರ್ಗರೆತ ಕವಿಕಿವಿಗಿಂಪು
ಬೆಸ್ತರಿಗೆ ಘೋರ ಕಿರಿಕಿರಿ
ಹಿರಿಹಿರಿ ಹಿಗ್ಗಿವೆ ಮತ್ಸ್ಯಸಂಕುಲ
ಉಕ್ಕೇರಿದ ನದಿಯಲ್ಲಿ ಮೀನುರಾಶಿ
ಹಿಡಿಯಲು ಎಂಟೆದೆ ಬೇಕು
ತೇಲಿಬರುವುದೇ, ತೆಂಗಿನಕಾಯಿ
ಹುಡುಕಹೊರಟರೆ ಪ್ರಾಣಾಪಾಯ
ಹೊಟ್ತೆಪಾಡು, ದಿನಕೂಲಿಯೂ ಮಾಯ
ರಾಜದರ್ಬಾರಿಗೆ ಪರ್ಸೆಂಟೇಜ್ ಪರಿಹಾರ
ಹುಯ್ಯೋ ಮಳೆರಾಯ ಯಾರಿಗುಂಟು
ಯಾರಿಗಿಲ್ಲ ಕೆಸರು, ಮುಳುಗುವ ಆಟ?
ಮಳೆದರ್ಬಾರು!
7 comments:
vaastava chitrana, chennaagide
ಸಕತ್ತಾಗಿದೆ ನೈಜ ಚಿತ್ರಣ.. ಸಣ್ಣ ಇದ್ದಾಗ ನಮ್ಮನೆಗೆ ಬರ್ತಿದ್ದ ದಿನಕೂಲಿ ನೌಕರರು ಹೊಳೆಗೆ ಹಾರಿ ತೆಂಗಿನಕಾಯಿ ಯನ್ನು ಹಿಡ್ಕೊಂಡು ಬರ್ತಿದ್ದು ನೆನಪಾಯಿತು..!!! ..
ಚೆನ್ನಾಗೈತೆ ಸರ್..ನಿಮ್ಮ 4ನೇ ಕನವರಿಕೆ! ಇದೇ ಬದುಕು....
-ಧರಿತ್ರಿ
ಮಳೆಗಾಲದ ಕರಾವಳಿ ಬದುಕಿನ ವಾಸ್ತವ ಚಿತ್ರಣದ ಕವನ...
ಸ್ನೇಹಿತರೆ,
ಧನ್ಯವಾದ
ಹತ್ತು ವರ್ಷಗಳ ಹಿಂದೆ ಊರಲ್ಲಿ ಕಳೆದ ದಿನಗಳು ಮತ್ತೆ ನೆನಪಾದವು. ನಿಜಕ್ಕೂ ಚೆನ್ನಾಗಿದೆ. ಇಂಥ ಪ್ರಸಂಗಗಳನ್ನು ಮತ್ತೆ ಮತ್ತೆ ನೆನಪಿಸುತ್ತಿರಿ. ಧನ್ಯವಾದ...
agni,
thanks
Post a Comment