Sunday, July 5, 2009
ನಿಮ್ಮೂರಲ್ಲೂ ಇಂಥದ್ದು ಇದೆಯೋ?
ಮಳೆಯ ದೊಡ್ಡ ದೊಡ್ಡ ಹನಿ ಮತ್ತು ದೊಡ್ದ ದೊಡ್ಡ ಹೊಂಡ.
ಕರಾವಳಿಯ ಯಾವ ರಸ್ತೆಯನ್ನು ನೋಡಿದರೂ ಇದೇ ಅವಸ್ಥೆ.
ಅದರಲ್ಲೂ ಅದಿರು ಲಾರಿ ಎಲ್ಲೆಲ್ಲಿ ಓಡಾಡುತ್ತವೆಯೋ ಅಲ್ಲಲ್ಲಿ ಇದು ಕಾಮನ್ ಎನ್ನುವಂಥ ಪರಿಸ್ಥಿತಿ.
ಯಾರೂ ಸೊಲ್ಲೆತ್ತುವಂತಿಲ್ಲ! ಒಂದು ವೇಳೆ ಮಾತನಾಡಿದರೂ ಪ್ರಯೋಜನ ಇಲ್ಲ.
ಏಕೆಂದರೆ ಅದಿರು ಲಾರಿಗಳನ್ನು ಅದುರಿಸಿದರೆ ಇಂದಿನ ರಾಜಕಾರಣವೇ ಉದುರಿ ಹೋಗುತ್ತದೆ.
ಶಿರಾಡಿ ಘಾಟಿಯನ್ನು ಲಗಾಡಿ ತೆಗೆದದ್ದೇ ಈ ಅತಿಕಾಯ ಅದಿರು ಲಾರಿಗಳು!
ಇವುಗಳ ಜತೆಯಲ್ಲಿ ಇತರ ದೊಡ್ಡ ದೊಡ್ದ ಲಾರಿಗಳು ಸಂಚಾರಿ ನಿಯಮ ಉಲ್ಲಂಘಿಸಿ ರಸ್ತೆಯನ್ನೇ ಆಕ್ರಮಿಸುತ್ತವೆ. ಪುರುಸೊತ್ತಿದ್ದಾಗ ಓಡುತ್ತವೆ. ಇಲ್ಲವಾದರೆ ಅಲ್ಲೇ ರಸ್ತೆಯ ಬದಿಯಲ್ಲಿ ಟಿಕಾಣಿ ಹೂಡುತ್ತವೆ.ಪಾರ್ಕ್ ಲೈಟ್ ಇಲ್ಲದೆ.
ಹೀಗೆ ನಿಂತಿದ್ದ ಲಾರಿಗೆ ಬಡಿದು ಅದೆಷ್ಟೋ ಜೀವಗಳು ಬಲಿಯಾದ ಇತಿಹಾಸವೂ ಉಂಟು.
ಈಗ ಮಂಗಳೂರು-ಬೆಂಗಳೂರು ಸಾಗುವ ರಾಷ್ಟ್ರೀಯ ಹೆದ್ದಾರಿ 48 ಅತಿಭಾರದ ಲಾರಿಗಳಿಂದ ನಲುಗಿ ಹೋಗಿದೆ.
ಎಂಥ ಗಟ್ಟಿ ಡಾಮರೂ ಈ ಅತಿಕಾಯ ವಾಹನಗಳ ಅಡಿಯಲ್ಲಿ ಪುಡಿಯಾಗುತ್ತಾ ಹೋಗುತ್ತದೆ.
ಚಿತ್ರದಲ್ಲಿರುವುದು ಬಿ.ಸಿ.ರೋಡ್ (ಮಂಗಳೂರಿನಿಂದ 25 ಕಿ.ಮೀ. ದೂರ)ಮೂಲಕ ಹಾದು ಹೋಗುವ ಹೆದ್ದಾರಿಯ ಆಳೆತ್ತರದ ಹೊಂಡ!
ಮಳೆಗಾಲವೆಲ್ಲಾ ಹೀಗೆ ಕಳೆಯಬೇಕಾದೀತೇನೋ.
ನಿಮ್ಮೂರಲ್ಲೂ ಇಂಥದ್ದು ಇದೆಯೋ?
ಅದು ಕೇರಳವಂತೂ ಖಂಡಿತ ಆಗಿರಲಿಕ್ಕಿಲ್ಲ.
ಅಲ್ವ?
Subscribe to:
Post Comments (Atom)
5 comments:
ಹರೀಶ್ ಸರ್,
ನಮ್ಮ ಬೆಂಗಳೂರಿನಲ್ಲೂ ಇದಕ್ಕಿಂತ ದೊಡ್ಡದಿದೆಯಲ್ಲಾ..ಮರಾಯ್ರೇ...ನಾವು ನಿತ್ಯ ಓಡಾಡುವುದರಿಂದ ಓಕೆ..ಬೇರೆಯವರ ಕತೇ ಆಷ್ಟೇ...
ಯಾಕಿಲ್ಲ ಹರೀಶ್ ಅವರೇ, ಇಂತಹ ದೃಶ್ಯವನ್ನು ಬರಿ ನಿಮ್ಮೂರಲ್ಲಷ್ಟೇ ಅಲ್ಲ, ನಮ್ಮ (ಬೆಂಗಳೂರ್) ಊರಲ್ಲೂ ಇದೆ ಅನ್ನುವುದಕ್ಕಿಂತ ಇತ್ತು ಎಂದು ಹೇಳಬಹುದು, ಏಕೆಂದರೆ ಈಗಿನ ಯಡಿಯೂರಪ್ಪ (ಬ ಜ ಪ) ಅವರ ಸರ್ಕಾರ ಬಂದ ಮೇಲೆ ನಮ್ಮ ಊರು ಎಷ್ಟೊಂದು ಸುಧಾರಣೆ ಕಂಡಿದೆ ಗೊತ್ತಾ! ಯಡಿಯೂರಪ್ಪನವರಿಗೆ ಜೈಯವಾಗಲಿ, ಇದೆ ರೀತಿ ನಮ್ಮ ಕರ್ನಾಟಕದ ಎಲ್ಲಾ ಊರುಗಳು ಇವರಿಂದಲೇ ಸುಧಾರಣೆ ಕಾಣಲಿ ಎಂದು ಆಶಿಸುತ್ತೇನೆ!
ಡು೦ಡಿರಾಜರ ಕವನದ ಸಾಲು "ಇ೦ಡಿಯಾ ಅ೦ದರೆ ಗು೦ಡಿಯಾ " ನೆನಪಾಯಿತು. ಹೌದು, ರಸ್ತೆಗಳ ಸ್ಥಿತಿ ಶೋಚನಿಯ. ಬಹುಶಃ ಇದನ್ನು ನಮ್ಮ ಸರಕಾರಗಳ ಕಾರ್ಯವೈಖರಿಯ ದ್ಯೋತಕ ಅನ್ನಬಹುದೇನೋ ?
ಬೆಂಗಳೂರಿನಲ್ಲಿ ಹೊಂಡಗಳಲ್ಲ...ನಡೆಯೋ ರಸ್ರೆ, ಪುಟ್ ಪಾತ್ ಎಲ್ಲಾ ಬಾವಿಗಳಾಗಿಬಿಟ್ಟಿವೆ
-ಧರಿತ್ರಿ
Ondanodnu kaaladalli Namma Bengaloorinaali kooda dodda dodda gundigalu iddau.Eeega Yadiyoorappa navara sarakaara banda mele rastheya sthithi bahalashtu sudaarisidhe.
Adaagiyu kelavede Manhole galu innu shelter kaanade Man ige dodda Hole aagiye ulidide
Post a Comment