"ಅಯೋಧ್ಯ” ಹೊಟೇಲ್ ಹತ್ತಿರ ರಾತ್ರಿ ಊಟ ಮುಗಿಸಿ ನಿಂತಿದ್ದೆ..
‘ಜಿಂಕೆ ಮರೀನ ’ ಹಾಡು ಕೇಳಿ ಬಂತು.
ಗೆಳೆಯ ಮಂಜು ಗೊಣಗಿದ. ‘ಶುರು ಆಯ್ತು ಈ ಮಕ್ಕಳ ಗಲಾಟೆ...’ .
‘ಏನು ಮಾರಾಯಾ’ ಕುತೂಹಲದಿಂದ ಕೇಳಿದೆ.
"ಇದು ಮೆಡಿಕಲ್ ಕಾಲೇಜು ಮಕ್ಕಳ ಗಣಪನ ವಿಸರ್ಜನೆ ಗೌಜಿ... "
ಹೌದಲ್ವ, ಇವತ್ತು ಚೌತಿ.. ವಿನಾಯಕನ ಆರಾಧನೆ. ಮಂಗಳೂರಿನ ಮೆಡಿಕಲ್ ಕಾಲೇಜಿನ ಮಕ್ಕಳ ಭಕ್ತಿ ಕಂಡು ಸೋಜಿಗವಾಯ್ತು.
ಆದರೆ ಒಂದು ವಿಷಯ ಗೊತ್ತಾಗಲಿಲ್ಲ.
‘ಜಿಂಕೆ ಮರೀನ ’ ಎಲ್ಲಿ? ಗಣಪನಿಗೂ ಏನು ಸಂಬಂಧ?
ತಿಳಿಸುತ್ತಿರಾ?
5 comments:
ಈಗ ಜಿಂಕೆಮರಿ ಇಲ್ಲದಿದ್ದರೆ ಪಾಪದ ಗಣಪನನ್ನು ನೋಡೋರ್ ಯಾರು? :)
ಗಣಪನ ಎದುರು ಇದ್ದಿದ್ದು ಜಿಂಕೆ ಮರಿಗಳೇ ಅಲ್ವ?
Now sound has replaced sense in almost all the occasions. Poor Ganapa has to grin and bear it.
ಜಿಂಕೆ ಮರೀನಾ ಈಗ. ಚಳಿ ಚಳಿ ತಾಳೆನು ಎಂದು ಹಿಂದೆ. ಅದಕ್ಕೂ ಹಿಂದೆ .... ಗೊತ್ತಿಲ್ಲ
ಗಣಪನಿಗೆ ಇದೆಲ್ಲ ಸಹ್ಯವೇ. ಕುಡುಕರೂ ಸಹ್ಯ, ಜಗಳವೂ ಸಹ್ಯ.
ಅಲ್ವ ಮಾಂಬಾಡಿ!
ಗಣಪತಿ, ಶಾರದೆ ಈಗೀಗ ಸಿನೆಮಾ ಬ್ರೇಕ್ ಡ್ಯಾನ್ಸ್ ನೋಡಿಕೊಂಡೇ ನಿಂತಿರಬೇಕು.....ಪಾಪ...
ಧನ್ಯವಾದ ವೇಣು, ಕ್ರಿಷ್ಣಮೋಹನ..
ಈಶ್ವರಯ್ಯ ಸರ್, ನಿಮ್ಮ ಪ್ರೋತ್ಸಾಹ ಸದಾ ಇರಲಿ.
ಗುರು, ನಾನು ಮಂಗಳೂರಲ್ಲೇ ಇದ್ದೇನೆ..
--ಮಾಂಬಾಡಿ
Post a Comment