ನಮ್ಮ ಗಡಿ ಯಾವುದು?
ನನ್ನನ್ನು ಸದಾ ಕಾಡುತ್ತಿರುವ ಪ್ರಶ್ನೆ ಇದು.
ನಮ್ಮನ್ನು ನಿಯಂತ್ರಿಸಲು ಪೂರ್ವಜರು ಮಾಡಿದ ಕಟ್ತುಪಾಡುಗಳಲ್ಲಿ ಇದೂ ಒಂದು ಎಂಬುದು ನನ್ನ ಗ್ರಹಿಕೆ. ಎಷ್ತೇ ಸ್ವಾತಂತ್ರ್ಯ ಇರಲಿ. ಗಡಿ ದಾಟುವ ಸಾಹಸ ಮಾಡುವವರು ಕಡಿಮೆ. ಇದು ಭಾಷೆ, ಸಂಸ್ಕ್ರತಿ, ಜಾತಿ ಇತ್ಯಾದಿಗಳಿಗೆ ಅನ್ವಯ ಆಗುತ್ತದೆ. ನೀವು ಮಂಗಳೂರಿನಿಂದ ಕಾಸರಗೋಡಿಗೆ ಹೋದಾಗ, ಶಿವಮೊಗ್ಗದಿಂದ ಹುಬ್ಬಳ್ಳಿಗೆ ಹೋದಾಗ, ಹಾಸನದಿಂದ ಬೆಂಗಳೂರು, ಮೈಸೂರಿನಿಂದ ಕೋಲಾರ, ಬಳ್ಳಾರಿಯಿಂದ ಆಂಧ್ರ, ಬೆಳಗಾವಿಯಿಂದ ನಿಪ್ಪಾಣಿಗೆ ನಿಮ್ಮ ಸ್ವಂತ ವಾಹನದಲ್ಲಿ ಅಲ್ಲಲ್ಲಿ ನಿಲ್ಲಿಸಿಕೊಂಡು ಅವರಿವರನ್ನು ಮಾತನಾಡಿಸಿಕೊಂಡು ಹೋದಾಗ ಅನುಭವಕ್ಕೆ ಬರುತ್ತದೆ.
ವಿಟ್ಲದಿಂದ ಅಡ್ಯನಡ್ಕ, ಅಲ್ಲಿಂದ ಪೆರ್ಲಕ್ಕೆ ಹೋಗಿ. ಅಲ್ಲಿನ ಬಸ್ ನಿಲ್ದಾಣದಲ್ಲಿ ಸುಮ್ಮನೆ ನಿಲ್ಲಿ. ಕನ್ನಡ ಭಾಷೆಯನ್ನು ಗಮನಿಸಿ. ಎಷ್ತೊಂದು ಬದಲಾವಣೆ? ಪೆರ್ಲ, ಬದಿಯಡ್ಕ, ಕುಂಬಳೆ, ಮಂಜೇಶ್ವರ, ಕಾಸರಗೋಡುವಿನ ಸಾಮಾನ್ಯ ವ್ಯಕ್ತಿಯ ಮನೆಮಾತು ಕನ್ನಡ ಇದ್ದರೂ ಅಪ್ಪಟ ಮಲಯಾಳಿ ಶೈಲಿಯಲ್ಲೇ ಆತನ ಹಾವ ಭಾವ ಇರುತ್ತದೆ. ನಮ್ಮ ಬೆಂಗಳೂರಿನ ಕೆಲವೊಂದು ಓರಾಟಗಾರರು ಮಾತ್ರ ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು ಎಂದು ಹೂಂಕಾರ ಮಾಡುವುದು, ಕೆಲವೊಂದು ಸಾಹಿತಿಗಳು ಪಣ ತೊಡುವುದನ್ನು ಬಿಟ್ಟರೆ ಕಾಸರಗೋಡಿನ ಸಾಮಾನ್ಯ ಕನ್ನಡಿಗರು ಅಲ್ಲಿ ಹಾಯಾಗಿದ್ದಾರೆ. ಗೌರವದಿಂದಲೇ ಇದ್ದಾರೆ. ಮಲಯಾಳಿಗಳ ಮೇಲೆ ಕನ್ನಡಿಗರು, ಕನ್ನಡಿಗರ ಮೇಲೆ ಮಲಯಾಳಿಗಳು ಸವಾರಿ ಮಾಡಿದ್ದು ಕಡಿಮೆ.
ಇದೇ ಬಾಂಧವ್ಯ. ಪರಸ್ಪರ ಹೊಂದಾಣಿಕೆ ಇದ್ದಾಗ ಮಾತ್ರ ಇದು ಸಾಧ್ಯ.
‘ನಾನು ಕರ್ನಾಟಕಕ್ಕೆ ಬರುವುದಿಲ್ಲ’
ಕರ್ನಾಟಕದ ಕೆಂಪು ಪಟ್ತಿಯ ವ್ಯವಸ್ಠೆಯಿಂದ ರೋಸಿ ಹೋದ ಅಪ್ಪಟ ಕನ್ನಡ ಪ್ರೇಮಿ ಹಾಯಾಗಿ ಬದಿಯಡ್ಕ ಬಳಿ ನಿವ್ರತ್ತ ಜೀವನ ಸಾಗಿಸುತ್ತಿದ್ದಾರೆ. ಅವರ ಮಾತಿದು. ಇತ್ತೀಚೆಗೆ ಕೇರಳಕ್ಕೆ ಹೋಗಿದ್ದಾಗ ಹೀಗೆ ಅವರು ಹೇಳಿದ್ದರು.
ಇದು ಸುಳ್ಳು ಅಲ್ಲ ಎಂದು ನನಗನಿಸುತ್ತದೆ.....(ನನ್ನ ವೈಯಕ್ತಿಕ ನಿಲುವು)
ನಿಮಗೆ?
4 comments:
ಅಸಲಿಗೆ ಅಲ್ಲಿದ್ದವರಿಗೆ ಯಾವುದೇ ಸಮಸ್ಯೆ ಇರುವುದಿಲ್ಲ. ಸಮಸ್ಯೆ ಸೃಷ್ಟಿಸುವುದು ಹೊರಗಿನವರು. ಕಾಸರಗೋಡಿನಂತೆ, ಬೆಳಗಾವಿಗೆ ಸೇರಿದ ಕೆಲ ಗ್ರಾಮಗಳಲ್ಲೂ ಮರಾಠಿ ಪ್ರಾಬಲ್ಯ ಇದೆ ಎಂದು ಜನ ಕೂಗಾಡುತ್ತಾರೆ. ಆ ಊರುಗಳಲ್ಲಿ ಇರುವವರನ್ನು ಕೇಳಿ ನೋಡಿದರೆ ಅವರಿಗೆ ಇಂತವರ ಸಹವಾಸವೇ ಸಾಕಾಗಿರುತ್ತದೆ. ನನ್ನ ಅನುಭವಕ್ಕೂ ಈ ವಿಷಯ ಬಂದಿದೆ. ಚೆಂದದ ಲೇಖನ. ಬರೆಯುತ್ತಲಿರಿ....
eegeege pratiyobbara mmanassina naduve gadi muduttide. bala santasavanne kasiyuva 'e gadi' samasye nammallina desha prema, nAdaprema galnnu mare maduttide. modalu rAjya,deshada olaginvru mAnasika gadi galannu tegedu haki, elleru ondu emba bavane taleyabeku, Aga mAtra nammallina Bougolikavada gadi samasyegala prihAra kandukoLLlu ichchashakti moodalu saDya... embudu nanna aBipraya..
ನಿಮ್ಮ ಬರಹದಲ್ಲಿರುವುದು ಸತ್ಯ. ನಿಜಕ್ಕೂ ದೂರದ ಬೆಟ್ಟ ನುಣ್ಣಗಿಲ್ಲ ಕೆಲವರಿಗೆ. ಸುಮ್ಮನಿರಲಾರದ ತಪ್ಪು ಹುಡುಕುತ್ತಾರೆ. ನನ್ನ ದಿನಪತ್ರಿಕೆ ವಿತರಣೆಯಲ್ಲಿ ನನ್ನ ಹುಡುಗರಲ್ಲಿ ಐದು ಜನರು ತಮಿಳು, ಒಬ್ಬ ತೆಲುಗು, ಒಬ್ಬ ಮಾರವಾಡಿ, ಇಬ್ಬರು ಕನ್ನಡಿಗರು, ಒಬ್ಬ ಕ್ರೈಸ್ತನಿದ್ದಾನೆ. ಯಾರಲ್ಲಿಯೂ, ಯಾವಾಗಲೂ ವಿರಸವಾಗಲಿ, ಜಗಳವಾಗಲಿ ಇಲ್ಲ ಎಲ್ಲರೂ ಒಟ್ಟಾಗಿ ಸೇರಿ ಮಜಾ ಮಾಡುತ್ತೇವೆ. ಇದು ಪ್ರತಿನಿತ್ಯದ ಅನುಭವ!
ಶಿವು.ಕೆ
ಅಬ್ಬ, ಒಬ್ಬರಾದರೂ ನನ್ನದೇ ದೃಷ್ಟಿಕೋನವಿರುವವರಿದ್ದಾರಲ್ಲ ಅಂತ ಸಮಾಧಾನವಾಯಿತು... ನಾನು ಕಾಸರಗೋಡು ಕೇರಳದಲ್ಲೇ ಇರಲಿ ಅಂತ ಹೇಳಿ ಎಲ್ಲರಿಂದಲೂ ಉಗಿಸಿಕೊಂಡಿದ್ದೆ.. :)
Post a Comment