Tuesday, December 15, 2009
ತುಳು ಜಾತ್ರೆ...
ಮತ್ತೊಂದು ಮಹಾಜಾತ್ರೆ ಉಜಿರೆಯಲ್ಲಿ ನಡೆಯಿತು.
ಅದು ವಿಶ್ವ ತುಳು ಸಮ್ಮೇಳನ. ಎಲ್ಲೆಂಲ್ಲಿಂದ ಬಂದಿದ್ದರೋ ಗೊತ್ತಿಲ್ಲ. ಆದರೆ ಲಕ್ಷಾಂತರ ಮಂದಿ ಆಗಮಿಸಿ ಉಜಿರೆಯ ತುಂಬ ತಿರುಗಾಡಿದರು. ಮಳಿಗೆಗಳಲ್ಲಿ ಏನುಂಟು ಎಂದು ನೋಡಿದರು. ಊರಿಗೆ ಊರೇ ಸಾಸಿವೆ ಕಾಳು ಹಾಕಲೂ ಜಾಗವಿಲ್ಲದಂತೆ ಜನದಟ್ಟಣೆ ಇದ್ದರೂ ಯಾರೂ ತಾಳ್ಮೆಗೆಡಲಿಲ್ಲ. ಎಲ್ಲೂ ಪೊಲೀಸ್ ಲಾಟಿ ಬೀಸಲಿಲ್ಲ. ಯಾರೂ ಹೊಡೆಯಲು ಪ್ರಚೋದಿಸಲಿಲ್ಲ. ನಾಲ್ಕು ದಿನ ಊರಿಡೀ ಅದೇ ಸುದ್ದಿ. ನೀವು ಉಜಿರೆಗೆ ಹೋಗಿದ್ದೀರ?
********
ಆದರೆ ಸಣ್ಣ ಸಣ್ಣ ವಿಷಯಕ್ಕೆಲ್ಲಾ ಪ್ಯಾನೆಲ್ ಚರ್ಚೆ ನಡೆಸುವ ನಮ್ಮ ಕನ್ನಡದ 24 ಗಂಟೆ ಸುದ್ದಿವಾಹಿನಿಗಳು ತುಳು ಸಮ್ಮೇಳನ, ತುಳುವರ ಸಮಸ್ಯೆ, ಕಷ್ಟ, ಸುಖ, ದು:ಖ ದುಮ್ಮಾನ, ರಾಜಧಾನಿಯ ತಾರತಮ್ಯ, ಭವಿಷ್ಯಗಳ ಕುರಿತು ಸೊಲ್ಲೆತ್ತಲೇ ಇಲ್ಲ.!
ವಿಪರ್ಯಾಸವೆಂದರೆ, ಪ್ರಮುಖ ಮಾಧ್ಯಮ ‘ಹುಲಿ’ಗಳೆಂದು ಹೇಳಿಕೊಳ್ಳುವವರೆಲ್ಲರೂ ತುಳುನಾಡಿನ ನಂಟು ಬೆಳೆಸಿಕೊಂಡವರು. ಯುವ ಬುಧ್ಹಿವಂತರು’ ಉಜಿರೆಯ ಹಳೇ ವಿಧ್ಯಾರ್ಥಿಗಳು. ಕನ್ನಡ ದೃಶ್ಯ ಮಾದ್ಯಮದ ಆಯಕಟ್ಟಿನ ಜಾಗದಲ್ಲಿ ಕುಳಿತಿರುವವರು.
************
ನೆಗೆಟಿವ್ ಅಂಶಗಳೇನೇ ಇರಲಿ,
ಡಿಸೆಂಬರ್ 10-13ರವರೆಗೆ ನಡೆದ ಸಮ್ಮೇಳನ 10 ಲಕ್ಷ ತುಳುವರನ್ನು ಒಟ್ಟು ಸೇರಿಸಿದ್ದಂತೂ ಹೌದು.ಅಲ್ಲಿ ಚರ್ಚೆಯಾದದ್ದು, ವಿಚಾರ ಮಂಡನೆಯಾದದ್ದು ಯಾರಿಗೆ ಎಷ್ಟು ಅರ್ಥ ಆಗಿದೆಯೋ ಗೊತ್ತಿಲ್ಲ. ಹಾಗೆ ಸುಮ್ಮನ ಬಂದು ಹೋದವರೂ ಇರಬಹುದು. ಆದರೂ ತುಳು ಮನಸ್ಸುಗಳನ್ನು ಒಗ್ಗೂಡಿಸಿದ್ದು ಹೌದು.
********
ದುರಂತ ಎಂದರೆ ತುಳು ಸಮ್ಮೇಳನದ ಮರುದಿನ ಬೆಂಗಳೂರು-ಮಂಗಳೂರು ರೈಲು ಕಣ್ಣೂರಿಗೆ ವಿಸ್ತರಣೆ ಆಯಿತು.
ಮುಂದೇನು?
Subscribe to:
Post Comments (Atom)
5 comments:
ತುಳು ಸಮ್ಮೇಳನವನ್ನು ಸ೦ಕ್ಷೇಪವಾಗಿ ವಿವರಿಸಿದ್ದೀರಿ. ಹೌದು, ತುಳುನಾಡಿನಿ೦ದ ದೂರವಿರುವ ತುಳುವರನ್ನು ಈ ಸಮ್ಮೇಳನ ಒಗ್ಗೂಡಿಸಿದೆ. ಇನ್ನಷ್ಟು ಫೋಟೋ ಗಳಿದ್ದರೆ ಹಾಕಿ.
ನಿಜ, ಒಂದು ಭಾಷೆ ಆಡುವ ಜನರ ಒಗ್ಗೊಡಿಸಲು ಇಂಥಹ ಸಮ್ಮೇಳನಗಳು ಅವಶ್ಯ ಇಲ್ಲದಿರೆ ಭಾಷೆಯೇ ಸತ್ತು ಹೋಗುತ್ತದೆ
ತುಳುವರ ಒಗ್ಗಟ್ಟು ನೋಡಿ ಮೂಕ ವಿಸ್ಮಿತನಾಗಿದ್ದೇನೆ,
ಅತ್ಯಂತ ಶಿಸ್ತಿನಿಂದ ಸಮ್ಮೇಳನ ನಡೆದಿದೆ ಎಂದು ಕೇಳಿದ್ದೇನೆ
ಭಾರಿ ಕುಶಿ ಆಂಡ್
ತುಳು ಸಮ್ಮೇಳನದ ಬಗ್ಗೆ ನಿಮ್ಮ ಲೇಖನ ಚೆನ್ನಾಗಿ ಮೂಡಿಬಂದಿದೆ. ನಾಲ್ಕು ದಿನದ ಸಮ್ಮೇಳನದ ಬಗ್ಗೆ ಚಿತ್ರ ಸಹಿತ ಸವಿವರವಾಗಿ ಪ್ರಕಟಿಸಿದ www.daijiworld.com ನ ಲಿಂಕ್ ಕೊಡಿ. ಇದರಿಂದ ಮುಂದೆ ನಿಮ್ಮ ಬ್ಲಾಗ್ ವೀಕ್ಷಕರಿಗೆ ತುಂಬಾ ಮಾಹಿತಿ ಸಿಗುತ್ತದೆ.
ಧನ್ಯವಾದಗಳು
i missed it actually I was in mangolre.
You are very right. The media almost neglected this event and dismissed it as a district-level event. The media as usual is myopic in some issues. Although you are right in saying many media persons are from tulu region, none of them seems to be in decision making position, with the possible exception of Kannada Prabha. Anyway, the organisers also were not too serious about the publicity for the event beyond the district. If they did, they had enough strings to pull in all newspapers - at least in the Times group. After all in DK, they still think that Udayavani (now to some extent VK) are the only newspapers in the world.
Post a Comment