Tuesday, February 2, 2010
ಅಖಂಡ ಭಾರತ! ?
ಅಖಂಡ ಭಾರತ!
ಸಂಘಪರಿವಾರ ಪ್ರಸ್ತಾಪಿಸುವ ಭಾರತದ ಕಲ್ಪನೆಯ ಬಗ್ಗೆ ನಾನು ಹೇಳಲು ಹೊರಟಿಲ್ಲ. ಏಕೆಂದರೆ ಆ ‘ಗುರಿ’ ತಲುಪಲಂತೂ ಸಾಧ್ಯವೇ ಇಲ್ಲ. ನನಗೆ ಕಾಡುತ್ತಿರೋದು ಈಗಿರುವ ಭಾರತ ಅಖಂಡವಾಗಿದೆಯಾ ಎಂದು.
ಮುಂಬಯಿ ಮರಾಟಿಗರದ್ದು ಎಂಬ ಮಾತು ದಶಕಗಳ ಹಿಂದೆ ಹುಟ್ಟಿದಾಗ, ತಮಿಳನ್ನು ಅತಿಯಾಗಿ ಪ್ರೀತಿಸುವವರ ಸಂಖ್ಯೆ ಹೆಚ್ಹಾದಾಗಲೂ ಭಾರತ ಅಲ್ಲಾಡಲುಆರಂಭಿಸಿರಲಿಲ್ಲ. ಏಕೆಂದರೆ ಇವೆಲ್ಲದರ ಹಿಂದೆ ಪೊಲಿಟಿಕಲ್ ಅಜೆಂಡಾ ಮಾತ್ರ ಇತ್ತು. ಅದು ಸಾಧಿಸಿದ ಕೂಡಲೇ ಈ ಧ್ವನಿ ಕಮ್ಮಿಯಾಗುತ್ತಿತ್ತು. ಆದರೆ ಈಗ ನಮ್ಮನಮ್ಮಲ್ಲೇ ಇರೋ ಪ್ರತ್ಯೇಕತಾ ಭಾವನೆ ಮತ್ತಷ್ಟು ದಟ್ಟವಾಗಿದೆ.
ಒಂದು ಕ್ಷಣ ಯೋಚಿಸಿ. ಮುಂಬಯಿಯಿಂದ ತುಳು ಮಾತನಾಡುವವರು, ಹಿಂದಿ ಮಾತನಾಡುವವರು, ಕನ್ನಡ ಮಾತನಾಡುವವರು, ತಮಿಳು ಮಾತನಾಡುವವರು ಹಾಗೇ ಎದ್ದು ಹೋದರೆ ಏನಾಗಬಹುದು? ಮಲಯಾಳಿಗರು ಮಂಗಳೂರಿನ ವಾಣಿಜ್ಯ ಅಭಿವೃಧ್ಹಿಗೆ ತೆಲುಗರು ತಮಿಳರು ಬೆಂಗಳೂರಿನ ವಾಣಿಜ್ಯ ಅಭಿವೃಧ್ಹಿಗೆ ಕೊಡುಗೆ ಕೊಟ್ಟಿಲ್ಲವೇ? ಅವರನ್ನೆಲ್ಲಾ ಬೆತ್ತ ಹಿಡಿದು ಓಡಿಸಲು ಹೊರಟರೆ ಏನಾಗುತ್ತದೆ?
ಕಾಸರಗೋಡು ಕನ್ನಡನಾಡಿಗೆ ಸೇರಬೇಕು ಎಂದು ಉದ್ದುದ್ದ ಹೇಳಿಕೆ ಕೊಡುವ ಮಂದಿ ಖುದ್ದು ಅಲ್ಲಿಗೆ ಭೇಟಿ ಇತ್ತಿದ್ದಾರೆಯೆ? ಹಾಗೆ ನೋಡಿದರೆ ಕಾಸರಗೋಡು ಜಿಲ್ಲೆಯ ಕನ್ನಡ ಮಾತನಾಡುವವರನ್ನು ಕೇರಳ ಸರ್ಕಾರವೇ ಹೆಚ್ಹು ಗುರುತಿಸಿದೆ. ಯಕ್ಷಗಾನಕ್ಕೆ ಸರ್ಕಾರದ ಪ್ರೋತ್ಸಾಹ ಮೊದಲು ಸಿಕ್ಕಿದ್ದೇ ಕೇರಳದಿಂದ. ಇನ್ನು ಕನ್ನಡ ಮಾತನಾಡುವವರು, ತುಳು ಮಾತನಾಡುವವರು ಮಲಯಾಳಿಗಳೊಂದಿಗೆ ಅನ್ಯೋನ್ಯವಾಗಿಯೇ ಇದ್ದಾರೆ. ಸುಳ್ಯ, ಮಂಗಳೂರು, ಬಂಟ್ವಾಳ ತಾಲೂಕಿನ ಕೇರಳಕ್ಕೆ ತಾಗಿಕೊಂಡಿರುವವರ ಆಚಾರ,ವಿಚಾರಗಳಲ್ಲೂ ಕೇರಳ ಟಚ್ ಇದೆ. ಆದರೆ ಅವರೆಲ್ಲರೂ ಕನ್ನಡಿಗರೇ. ಆದರೂ ಕರ್ನಾಟಕ ಸರ್ಕಾರದ ಅಧೀನಕ್ಕೆ ಆ ಪ್ರದೇಶ ಬಂದು ಏನು ಸಾಧಿಸಿದ ಹಾಗಾಗುತ್ತದೆ?
ಇನ್ನು ಕರ್ನಾಟಕದ ಉತ್ತರ ಭಾಗದ ಮಹಾರಾಷ್ತ್ರಕ್ಕೆ ತಾಗಿಕೊಂಡಿರುವ ಪ್ರಾಂತ್ಯಗಳಲ್ಲಿ ಮರಾಟಿ ಪ್ರಭಾವ ಹೆಚ್ಹಾಗಿಯೇ ಇದೆ. ೧೯೯೦ರ ಸುಮಾರಿಗೆ ಗ್ರೇಟ್ ಮರಾಟಾ ಎಂಬ ಟೆಲಿ ಧಾರಾವಾಹಿ ಪ್ರಸಾರವಾಗುತ್ತಿದ್ದಾಗ ಕಾರವಾರದ ಹೆಚ್ಹಿನ ಮನೆಗಳಲ್ಲಿ ಟಿ.ವಿ. ಮುಂದೆ ಪಿನ್ ಡ್ರಾಪ್ ಸೈಲೆನ್ಸ್ ಇತ್ತು. ಎಲ್ಲರಿಗೂ ಆ ಧಾರಾವಾಹಿ ನೋಡಲು ಅದೊಂಥರಾ ಖುಷಿ. ಆದರೆ ಅವರು ಹುಟ್ಟು ಕರ್ನಾಟಕದವರು. ಅವರನ್ನೆಲ್ಲಾ ಮಹಾರಾಷ್ತ್ರಕ್ಕೆ ಓಡಿಸಿ ಎಂದರೆ ಏನಾದೀತು?
ಇದೀಗ ಮಹಾರಾಷ್ಟ್ರದ ‘ಸೈನಿಕರು’ ಇಂಥದ್ದೊಂದು ಪ್ರತ್ಯೇಕತೆಯ ಕಿಚ್ಹು ಹಚ್ಹಿದ್ದಾರೆ. ಅವರನ್ನೇ ಮಾದರಿಯಾಗಿ ದೇಶದ ಇತರ ಭಾಗಗಳಲ್ಲಿ ಆಯಾ ಭಾಷೆಯ ‘ರಕ್ಷಣಾ’ ವಿಭಾಗದವರು ಕೋಲು, ಕತ್ತಿ ಹಿಡಿದು ಹೊರಟರೆ ಏನಾದೀತು?
ಬೆಳಗಾವಿ, ಕಾಸರಗೋಡು, ಮುಂಬಯಿ, ಬೆಂಗಳೂರು, ಡೆಲ್ಲಿ, ಮಂಗಳೂರು, ಕೋಲ್ಕತ್ತಾ, ಗೋವಾಗಳನ್ನು ಭಾಷೆಯ ಆಧಾದಲ್ಲೇ ನೋಡಿದರೆ, ಆಯಾಭಾಷಿಕರೇ ಅಲ್ಲಿರಬೇಕು ಎಂದು ಹೊರಟರೆ ಭಾರತ - ಮತ್ತೊಂದು U.S.S.R. ಆದೀತು.
ಇದು ಕೇವಲ ನನ್ನ ಅಭಿಪ್ರಾಯ.. ಸರಿಯೋ, ತಪ್ಪೋ ಗೊತ್ತಿಲ್ಲ.!!!
Subscribe to:
Post Comments (Atom)
13 comments:
ಹರೀಶ್,
ನನಗೂ ನಮ್ಮ ಭಾರತ ಮುಂದೆ USSR ಆಗಬಹುದೇನೋ ಅನ್ನುವ ಭಯ ಕಾಡತೊಡಗಿದೆ...
ನಿಮ್ಮ ಮಾತು ನೂರಕ್ಕೆ ಸಾವಿರದಷ್ಟು ದಿಟ! ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸುವುದಾದರೆ ಕಾಸರಗೋಡನ್ನು ಕರ್ನಾಟಕಕ್ಕೆ ಸೇರಿಸಬೇಕು. ಬಳ್ಳಾರಿಯನ್ನು ಆಂಧ್ರಕ್ಕೆ ಹಾಕಬೇಕು. ಮಡಕಶಿರಾವನ್ನು ಕರ್ನಾಟಕಕ್ಕೆ ಸೇರಿಸಿಕೊಳ್ಳಬೇಕು. ಆದರೆ ಈ ಗೊಂದಲ ಬೇಕೇ? ಇಲ್ಲಿರೋ ೩೧ ಜಿಲ್ಲೆಗಳ ಸಮಸ್ಯೆಗಳನ್ನ ಮೊದಲು ತೀರಿಸಿ ನಂತರ ಅದರೆಡೆಗೆ ಬೇಕಾದರೆ ಗಮನ ಹರಿಸಲಿ. ಅಷ್ಟಕ್ಕೂ ಈ ನಾಡಿನಲ್ಲಿ ಯಾರು ಎಲ್ಲಿದ್ದರೇನಂತೆ? ಭಾರತೀಯನಾಗಿರುವುದು ಮುಖ್ಯ ಎಂಬ ಮಾತನ್ನು "ಠಕ್ಕ"ರೆ ಗಳು ಮರೆತಿರುವಂತಿದೆ. ಸುಮ್ಮನೆ ಶಾಂತಿ ಭಂಗ ಮಾಡುತ್ತಿರುವ ಅವರಿಗೆ ರೌರವ ನರಕ ಪ್ರಾಪ್ತಿ ಆದೀತು! ಮುಂಬೈನಿಂದ ಎಲ್ಲರನ್ನೂ ಓಡಿಸೋ ಬಗ್ಗೆ ಮಾತನಾಡೋ ಅವರು, ವಿದರ್ಭದಲ್ಲಿ ದಿನಕ್ಕೊಬ್ಬ ರೈತ ಮಹಾಶಯ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಬಗ್ಗೆ ಕೊಂಚೆ ಯೋಚಿಸಿದರೆ ಅವರ ಜನ್ಮ ಸಾರ್ಥಕವಾದೀತು. ಅವರಿಗೆ ಎಲ್ಲರ ಪರವಾಗಿಯೂ ಧಿಕ್ಕಾರವಿರಲಿ.
ರಕ್ಷಣೆಗೆ ಹುಟ್ಟಿಕೊಂಡ ಅನೇಕ ವೇದಿಕೆಗಳೆಲ್ಲ ಸುಲಿಗೆ ಸಂಘಟನೆಗಳಾಗುತ್ತಿವೆಯಲ್ಲ!
ತು೦ಬಾ ಪ್ರಸ್ತುತ ಲೇಖನ. ನಿಮ್ಮ ಭಯ ನಮ್ಮದೂ ಸಹಾ.
೧೦೦% ಸತ್ಯ..
ಶಿವು, ಹಾಗಾಗದಿರಲಿ
ಕಾರ್ತಿಕ್,
ಬೆಳಗಾವಿ ಏನಾಗ್ತಿದೆ ಎಂದು ನೋಡಿದ್ರಲ್ಲ?
ವೇಣು, ನೂರಕ್ಕೆ ನೂರು ಸತ್ಯ
ಸೀತಾರಾಮ್, ವನಿತಾ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ :)
ಸರಿಯಾಗೆ ಹೆಳಿದ್ದೀರಿ. ಬೆಸರವಾಗುತ್ತೆ..:(
ಸರಿಯಾಗೆ ಹೆಳಿದ್ದೀರಿ. ಬೆಸರವಾಗುತ್ತೆ..:(
ಕೇರಳದಲ್ಲಿ ಕನ್ನಡಿಗರು ನೆಮ್ಮದಿಯಿಂದ ಇದ್ದಾರೆ ಎಂಬ ಅನಿಸಿಕೆ ಕರ್ನಾಟಕದಲ್ಲೂ ಹುಟ್ಟಿಕೊಳ್ಳುತ್ತಿರುವುದು ದುರದೃಷ್ಟಕರ. ಕರ್ನಾಟಕಕ್ಕೇ ಸೇರಬೇಕು ಅಂತ ನಮಗೆ ಹಟವಿಲ್ಲ.ಆದರೆ ಇಲ್ಲಿ ಕನ್ನಡ ಕಲಿತು ಬದುಕುತ್ತಿರುವರ ಸಮಸ್ಯೆಗಳು ಹಲವಾರಿವೆ ಇಲ್ಲಿ ಕನ್ನಡ ತುಳು ಇನ್ನಿತರ ವೈವಿಧ್ಯಗಳು ಅಳಿದು ಹೋಗಿ ಇದು ಅಚ್ಚ ಮಲೆಯಾಳ ಮಣ್ಣು ಆಗಲು ಹೆಚ್ಚು ಕಾಲ ಬೇಕಿಲ್ಲ.ನಿಮಗೆ ಇಲ್ಲಿನ ಕನ್ನಡಿಗರ ಸಮಸ್ಯೆಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಆಸಕ್ತಿ ಇದ್ದರೆ ಕೆಲವು ಬರಹ ಕಳಿಸಿಕೊಡುವೆ.ಕೇರಳ ಕರ್ನಾಟಕ ಸರಕಾರಗಳು ಅಕಾಡಮಿಗಳ ಮೂಲಕ ಸಾಹಿತಿ ಕಲಾವಿದರಿಗೆ ಪ್ರಶಸ್ತಿ ಕೊಟ್ಟರೆ ಇಲ್ಲಿನ ಸಾಮಾನ್ಯ ಕನ್ನಡಿಗರ ಕಷ್ಟ ಬಗೆಹರಿಯುವುದಿಲ್ಲ. ಆನ್ನ ಉದ್ಯೋಗ ಇರಲಿ ಸರಕಾರೀ ಕಛೇರಿಗಳಲ್ಲಿ ವ್ಯವಹರಿಸಲೂ ಸಾಧ್ಯವಾಗದ ನಿಮ್ಮ ಕನ್ನಡವನ್ನು ಯಾಕೆ ಕಲಿಯಬೇಕು ಅಂತ ಜನ ಕೇಳುತ್ತಾರೆ!ಕೇವಲ ಸಾಂಸ್ಕೃತಿಕ-ಸಾಹಿತ್ಯಕವಾಗಿ ಭಾಷೆಯನ್ನೂ ಉಳಿಸಲು ಆಗೋದಿಲ್ಲ.ಇಲ್ಲಿನ ಭಾಷಾ ಅಲ್ಪಸಂಖ್ಯಾತರ ನ್ಯಾಯೋಚಿತವಾದ ಸಂವಿಧಾನದತ್ತ ಹಕ್ಕುಗಳನ್ನು ಇಲ್ಲಿನ ಸರಕಾರಗಳು ಗೌರವಿಸುತ್ತವೆಯ? ಇಲ್ಲಿ ಕನ್ನಡ ಕಲಿತವರು ಅನಾಥರಾಗುತ್ತಾರೆ ನಮ್ಮ ಕಷ್ಟಗಳನ್ನು ಅರ್ಥ ಮಾಡಿಕೊಳ್ಳದ ಕರ್ನಾಟಕ ಕೇರಳ ಸರಕಾರಗಳು ಯಕ್ಷಗಾನ ಉಳಿಸಿ ಮೀಸೆ ತಿರುವಿಕೊಳ್ಳಲಿ!
@ naresh,
Please send
mambady_harish@rediffmail.com
Post a Comment