ಅ ಬ್ಬಾ ಅದೇನು ಹಾರಾಟ
ಕಡುನೀಲಿ ಬಣ್ಣದ ಜಲರಾಶಿಗೆ
ಜಿಗಿಜಿಗಿದು ಆಕಾಶ ಚುಂಬಿಸುವಂತೆ
ಉಕ್ಕೇರಿ ತಿಳಿಯಾಗಿ ಹರಿದು
ಶುಶ್ಕ ಮರಳನ್ನು ಮುತ್ತಿಕ್ಕುತ್ತದೆ
ಮತ್ತೆ ಮತ್ತೆ ಹಾರಿ ಅಪ್ಪಳಿಸಿ ಮರಳುತ್ತದೆ
ಬೇಕನಿಸಿದಾಗ ಕೈಸಿಗದ ಮರೀಚಿಕೆಯಂತೆ
ಮರುಳು ಮಾನವನಿಗೋ ತಡೆಯಲಾರದ
ಹಸಿವು,ನೀರಡಿಕೆ, ಉಪ್ಪುನೀರೇನು ನೀಡಬಲ್ಲದು
ಬರೀ ಆಸೆ, ಕುಡಿಯಲಾಗುವುದಿಲ್ಲ
ಕುಡಿದರೂ ಹೊರಕಕ್ಕಬೇಕು ಎಲ್ಲಾ ಆಕಾಂಕ್ಷೆ
10 comments:
ಕನವರಿಕೆ-ಬದುಕಿನ ಬಹಳಷ್ಟು ಮಗ್ಗುಲುಗಳು ಬರೇ ಕನವರಿಕೆಯಲ್ಲೇ ಕಳೆದುಹೋಗುತ್ತವಲ್ಲವೇ? ಅದೇ "ಬರೀ ಆಸೆ, ಕುಡಿಯಲಾಗುವುದಿಲ್ಲ, ಕುಡಿದರೂ ಹೊರಕಕ್ಕಬೇಕು ಎಲ್ಲಾ ಆಕಾಂಕ್ಷೆ" ಸುಂದರ ಸಾಲುಗಳು ಬದುಕಿನ ಕನವರಿಕೆಯನ್ನು ಮತ್ತೆ ಮತ್ತೆ ಪ್ರಶ್ನೆ ಮಾಡುವಂತಾಯಿತು.
-ಧರಿತ್ರಿ
ಬದುಕಿನ ಕನವರಿಕೆಗಳು ತುಂಬಾ ಚೆನ್ನಾಗಿವೆ, ಹೀಗೆಯೇ ಮುಂದುವರಿಯಲಿ ನಿಮ್ಮ ಪಯಣ
Chennaagide...
ಜೀವನದ ಕನವರಿಕೆಗಳು....
ಹೌದು....ಎಲ್ಲಾ ಆಸೆ ಕೈಗೆ ಸಿಗುವುದಿಲ್ಲ...ಸಿಕ್ಕಂತೆ ಕಂಡರೂ ಖಂಡಿತ ವಾಪಸ್ಸು ಕಕ್ಕಬೇಕು...ಹೊರಗಟ್ಟಬೇಕು...
ಶಿವು.ಕೆ
ಮಾ೦ಬಾಡಿಯವರೇ
ಕವನ,ಮತ್ತು ಅದರೊಳಗಿನ ಭಾವನೆಯೆ ಕನವರಿಕೆ ಚೆನ್ನಾಗಿದೆ
'ಕನವರಿಕೆ'ಯ ಅಂತರಂಗ,
ಕವಿಯ ಭಾವಾತರಂಗ,
ಮೀಟುತಿದೆ ವಾಚಕರ ಸೂಕ್ಷ್ಮ-ತರಂಗ.
-ಪ. ರಾಮಚಂದ್ರ,
ರಾಸ್ ಲಫ್ಫಾನ್, ಕತಾರ್
ಕನವರಿಕೆಯ ಕವನ ತುಂಬ ಚೆನ್ನಾಗಿ ಇದೆ , ಕನವರಿಕೆಯನ್ನು ಚೆನ್ನಾಗಿ ಹೋಲಿಸಿ ಕನವರಿಸುವಂತೆ ಮಾಡಿದ್ದಿರ... ಹೀಗೆ ಮುಂದುವರಿಯಲಿ.....
ಗುರು
ಚೆನ್ನಾಗಿದೆ.
-ರಾಧಿಕಾ
ಪ್ರತಿಕ್ರಿಯಿಸಿದವರಿಗೆಲ್ಲಾ ಥ್ಯಾಂಕ್ಸ್.
ಹಾಯ್
ಮುದ್ದು ಮುದ್ದಾಗಿದೆ
Post a Comment