ಅದ್ಯಾವುದೋ ಪನ್ನೀರ ಕೊಳ
ಅಲ್ಯಾವುದೋ ಬಿಳಿಹಂಸಜೋಡಿ
ಮತ್ತೆ ಮತ್ತೆ ಮುತ್ತಿಕ್ಕುತ್ತಿದೆ ಗೊತ್ತಿಲ್ಲ
ಆರ್ಥಿಕ ಹೊಡೆತ, ಬೆಲೆಯೇರಿಕೆಗಳ ಮಾರಿ
ಪನ್ನೀರನ್ನೂ ಕಲಕುತ್ತೆ,ಹಂಸದ ಬಣ್ಣ ಬದಲಿಸುತ್ತೆ
ಅದ್ಯಾವನೋ ಊರ ಡೊಂಕ ತಿದ್ದುವ
ಭ್ರಮೆಯ ಹಮ್ಮು ಬಿಮ್ಮಿನ ಲೇಖನಿಗ,
ಅಲ್ಯಾವುದೋ ಕುಟುಂಬ ಅವನ ನಿರೀಕ್ಷೆಯಲ್ಲಿ
ಗೊತ್ತುಂಟು ಅವನಿಗೂ,ಬಳಗಕ್ಕೂ ಬೆಲೆಯೇರಿದರೂ
ಕಿಸೆ ಭರ್ತಿಯಾಗುವುದಿಲ್ಲ, ಹಾಲುಗಲ್ಲದ ಕಂದಮ್ಮ
ಚಿನ್ನದ ಪುಟ್ಟ ಓಲೆಯ ಮಾತಾಡುವುದರ ಕೇಳುವ
ಧೈರ್ಯ ಅವನಿಗೆಲ್ಲಿ, ಊರಿಗಿಡೀ ಪ್ರಕಾಶಿಸುವ
ದೀಪದ ಕೆಳಗೆ ಕತ್ತಲೇ ತಾನೇ?
ಗುಲಾಮನೂ ದೊರೆಯಾದರೆ ಅವನು ದೊರೆಯಂತೇ
ಆಡುವ ಆದರೆ ಮತ್ತೊಬ್ಬ ನವಗುಲಾಮ ಹುಟ್ಟುತ್ತಾನೆ
ಇದು ಜಗಜೀವನ, ಇಲ್ಲೇನಿದೆ ಬರಿ ಕತ್ತಲು,
ಅಲ್ಲಲ್ಲ ದೊಡ್ಡ ದೊಡ್ಡ ಸೋಡಿಯಂ ದೀಪಗಳು!
9 comments:
ಮಾ೦ಬಾಡಿಯವರೇ,
ಪ್ರಸಕ್ತ ಪರಿಸ್ಥಿತಿಯನ್ನು ಸ್ಥೂಲವಾಗಿ ಕವನದ ಮೂಲಕ ಬಿ೦ಬಿಸಿದ್ದೀರಿ. ಕೆಲವೊ೦ದು ಲೈನುಗಳು ಮಾರ್ಮಿಕವಾಗಿವೆ,
ಅರ್ಥಗರ್ಭಿತವಾಗಿವೆ. ಚೆನ್ನಾಗಿದೆ. ನನ್ನ ಬ್ಲಾಗಿನತ್ತ ನೀವು ಇತ್ತೀಚಿಗೆ ಬ೦ದಿಲ್ಲೆ೦ದು ಕಾಣ್ಸುತ್ತೆ. ಪುರುಸೊತ್ತು ಮಾಡಿಕೊ೦ಡು ಒಮ್ಮೆ ಬನ್ನಿ
ಮಾಂಬಾಡಿ,
ಕವನ ತುಂಬಾ ಅರ್ಥಗರ್ಭಿತವಾಗಿದೆ...ಸೂಕ್ಷ್ಮವಾದ ಅರ್ಥವನ್ನು ಕೊಡುತ್ತವೆ ಪದ್ಯದ ಸಾಲುಗಳು...ಇಂದಿನ ಪ್ರಸ್ತುತತೆಯನ್ನು ಚೆನ್ನಾಗಿ ಬರೆದಿದ್ದೀರಿ...
ವ್ಹಾ ವ್ಹಾ...ಪತ್ರಕರ್ತರ ಬಗ್ಗೆಯೂ ಈ ಕವನ ವಿಶ್ಲೇಷಿಸಿದೆ :)
ಪರಾಂಜಪೆಯವರೆ,
ನಿಮ್ಮಲ್ಲಿಗೆ ಬರುತ್ತೇನೆ..
ಶಿವು, ವೇಣುವಿನೋದ್
ಅವರವರ ಭಾವಕ್ಕೆ, ಊಹೆಗೆ ಈ ಬರೆಹ ಬಿಟ್ಟಿದ್ದೇನೆ
ಚೆನ್ನಾಗಿದೆ.
ಮಾಂಬಾಡಿ ಸರ್..
ಲೇಖನಗಳನ್ನೆಲ್ಲ ಬಿಟ್ಟು ಕವನದ ಬೆನ್ನು ಹತ್ತಿದಂತಿದೆ. ಪ್ರಸ್ತುತವನ್ಮು ಅರ್ಥಪೂರ್ಣವಾಗಿ ಈ ಕವನ ಚಿತ್ರಿಸಿದೆ. ದೀಪದ ಕೆಳಗೆ ಕತ್ತಲು..ಹೌದು, ಅದಕ್ಕೆ ಕತ್ತಲನ್ನೂ ಪ್ರೀತಿಸು ಎಂದ ಆಂಗ್ಲಕವಿಯೊಬ್ಬನ ಕವನ ನೆನಪಾಯಿತು. ಶುಭವಾಗಲಿ
-ಪ್ರೀತಿಯಿಂದ,
ಧರಿತ್ರಿ
ಮಲ್ಲಿಕಾರ್ಜುನ, ಥ್ಯಾಂಕ್ಸ್.
ಧರಿತ್ರಿ, :) ಕತ್ತಲಲ್ಲೇ ಇರುವವರು ಇರುಳನ್ನು ಯಾವಾಗಲೂ ಪ್ರೀತಿಸುತ್ತಾರೆ..ಬೆಳಕಿಗಾಗಿ ಹಂಬಲಿಸುವ ಅಸಹಾಯಕರೂ ಇರುತ್ತಾರೆ
ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದ.
Nice poetry with a touch of reality and also raging present situation of India.
But what next????
mahesh,
Dont know
Post a Comment