ಹೀಗೊಂದು ಸಮಸ್ಯೆ
ನಾವೇನು? ದೇವನಿರ್ಮಿತರೇ,
ಹಾಗಾದರೆ ನಾವೆಲ್ಲರೂ ಪರಿಪೂರ್ಣರೇ?
ಕಾಮ, ಕ್ರೋಧಾದಿಗಳು ನಮ್ಮಲ್ಲೂ ಇಲ್ಲವೇ
ದೇವನಿರ್ಮಿತವಲ್ಲವೂ ಪರಿಪೂರ್ಣವೆಂದಾದರೆ
ಮಾನವನೂ ಸಂಪೂರ್ಣ ಅಲ್ಲವೇ?
ದೇವನೊಬ್ಬ ನಾಮ ಹಲವು ಎಂದಾದರೆ
ಈ ವಿರೋಧಾಭಾಸ ಯಾಕೆ ಅಲ್ಲವೇ?
*********
ಹೀಗೊಂದು ಸಮಾಧಾನ
ಸಭ್ಯತೆಯ ಮುಸುಕಿಗೆ ಅಸಭ್ಯತೆಯ ಸೋಂಕು
ಬಡಿಬಡಿದು ರಾಚಿದಾಗ, ಹೆದರಿಕೆ ಸತ್ತು
ಮಸಣ ಸೇರಿದಾಗ ಉಂಟಾದ ತಥ್ಯ ದೇವರಿದ್ದಾನೆ
ಅವನಿಗಾದರೂ ಅಂಜು,ನಾಚಿಕೆಪಡು, ಅವನಿಂದ
ನಿರ್ಮಿಸಲ್ಪಟ್ಟ ನಾವು ಅವನಂತೆ ಪರಿಪೊರ್ಣರಲ್ಲ
ಏಕೆಂದರೆ ಕಾಮ, ಕ್ರೋಧಾದಿಗಳು ನಮ್ಮನ್ನು ಬಿಡುವುದಿಲ್ಲ
ಅದಕ್ಕಾಗೇ ಇಸ್ಟೋಂದು ದೇವರಲ್ಲಿ ಯಾರನ್ನಾದರೂ ನಂಬು
4 comments:
ಇದು ಕೇವಲ 'ನಿಮ್ಮೊಳಗಿನ ಪ್ರಶ್ನೋತ್ತರ'ಗಳಲ್ಲ..ಸಮಸ್ತ ಜೀವಸಂಕುಲದ ಪ್ರಶ್ನೋತ್ತರ!! ದೇವರಿದ್ದಾನೋ ..ಇಲ್ಲವೋ..ಆದರೆ ನಂಬಿಕೆ ನಿರಾಕರಿಸಲಾಗದು ಅಲ್ಲವೇ? ನಾವು ದೇವನಿರ್ಮಿತರೇ...ನಮಗೆ ಗೊತ್ತಿಲ್ಲ..ಆದರೆ ಹಿರಿಯರು, ಹೆತ್ತವರು 'ಹೌದು' ಅನ್ನುತ್ತಾರಲ್ಲ..ಹೌದುದಿರಬಹುದೇನೋ..ಆಗ ಹುಟ್ಟಿಕೊಳ್ಳುತ್ತವೆ ಇಂಥ 'ಪ್ರಶ್ನೋತ್ತರ'ಗಳು!!
-ಪ್ರೀತಿಯಿಂದ,
ಚಿತ್ರಾ
ಹೌದಿರಬಹುದೇನೋ..
ಇದೆಲ್ಲಾ ಯೋಚಿಸಿದಾಗ ಮನುಷ್ಯನಿಂದನೇ ದೇವರು ಅಂತ ಅನ್ನಿಸಿಬಿಡುವುದಿಲ್ಲವೇ?
ommomme haagE annisuttade vikas
Post a Comment