Friday, February 20, 2009

ಇಂಥವರೂ ಇದ್ದಾರೆ

ಅದು ಬಂಟ್ವಾಳ ರೈಲ್ವೇ ನಿಲ್ದಾಣ.
ದಿನಕ್ಕೆ ಎರಡು ಪ್ರಯಾಣಿಕರ ರೈಲು ಓಡಾಡುವಾಗ ಜನಸೇರುವುದನ್ನು ಬಿಟ್ಟರೆ ಮತ್ತಲ್ಲಿ ಮೌನ.
ಉಳಿದಂತೆ ಇಡೀ ದಿನ ಅಲ್ಲಿ ವಾಕಿಂಗ್ ಹೋಗುವವರು, ಕಟ್ಟೆಯಲ್ಲಿ ಕುಳಿತುಕೊಳ್ಳುವ ಅಲೆಮಾರಿಗಳಿಗದು ಪ್ರಶಸ್ತ ತಾಣ.
ಹಾಗಾಗಿಯೋ ಏನೊ ಮೊನ್ನೆ ಆ ನಿವ್ರುತ್ತಿನಂಚಿನಲ್ಲಿರುವ ಟೀಚರ್ ಕೂಡಾ ಅಲ್ಲೇ ಗೌಜಿ ಮಾಡಿಕೊಂಡು ಬಿಡಾರ ಮಾಡಿದ್ದು. ಏನಮ್ಮಾ ಇಲ್ಲ್ಯಾಕೆ ಬಂದಿ ಎಂದು ಸ್ಟೇಶನ್ ಮಾಸ್ತರ್ ಕೇಳಿದರೆ ‘ನೀನ್ಯಾರು’ ಎಂದು ಜೋರು ಮಾಡುತ್ತಾ ಕುಳಿತಿದ್ದ ಟೀಚರ್ ಎಲ್ಲರ ಗಮನ ಸೆಳೆದರು.
*********
ಟೀಚರಿಂದು ದುರಂತದ ಕಥೆ. ಗಂಡ ಜತೆಗಿಲ್ಲ. ಮಗ ಓಡಿ ಹೋಗಿದ್ದಾನೆ. ಆ ಚಿಂತೆ ಮನಸ್ಸಿನ ತುಂಬೆಲ್ಲಾ ಹರಡಿ ಸ್ಥಿಮಿತ ಕಳೆದುಕೊಳ್ಳುವಂತೆ ಮಾಡಿತು. ಹಾಗೇ ಇದ್ದ ಬಾಡಿಗೆ ಮನೆ ಬಿಟ್ಟು ನೆಮ್ಮದಿ ಅರಸಿ ರೈಲ್ವೇ ನಿಲ್ದಾಣಕ್ಕೆ ಬಂದಿದ್ದು. ಹತ್ತಿರವೇ ಶಿಕ್ಷಣ ಇಲಾಖೆಯ ಕಚೇರಿ ಇದ್ದರೂ ಟೀಚರ್ ನೆರವಿಗೆ ಯರೂ ಬರಲಿಲ್ಲ. ಎಲ್ಲಾ ಇಲಾಖೆಗಳಿಗೂ ದೂರು ನೀಡಲಾಯಿತು. ಪ್ರಯೋಜನ ಶೂನ್ಯ..
*********

ಹೌದು. ಯಾಕೆ ಬರುತ್ತಾರೆ? ಮಹಿಳೆಯರ ಪರ ಹೋರಾಟ ಮಾಡುವ ಸಂಘಟನೆಗಳು, ಟಿ.ವಿ. ಕ್ಯಾಮೆರಾಗಳು, ಅದೇ ಸಮಯದಲ್ಲಿ ಪಬ್ಬಿಗೆ ಹೋದ ಇನ್ನೂ ಯಾರೆಂದು ಗೊತಿಲ್ಲದ ಶ್ರೀಮಂತ ಗಣ್ಯ ವ್ಯಕ್ತಿಗಳ ಮಕ್ಕಳ ಮಾನ ಹರಾಜಾದ ಘಟನೆಯನ್ನು ಲೋಕಕ್ಕೆಲ್ಲಾ ತಿಳಿಸಲು ಪೈಪೋಟಿ ನಡೆಸುತ್ತಿದ್ದ ಕಾಲ ಅದು. ಪತ್ರಿಕೆಗಳಲ್ಲಿ(ಒಂದು ಬೆಳಗ್ಗಿನ, ಎರಡು ಸಂಜೆಯ) ವರದಿ ಬಂತು. ಅದೇ ಸಮಯಕ್ಕೆ ಪಬ್ಬು, ಬಾರಿಗೆ ಬಂದ ಮಹಿಳಾ ಆಯೋಗದ ಎರಡೂ ಬಣದ ಸದಸ್ಯರಿಗೆ ಕೇವಲ ೨೫ ಕಿ.ಮೀ. ಇರುವ ಬಿ.ಸಿ.ರೋಡಿಗೆ ಬರಲಾಗಲಿಲ್ಲ...

*********
ಹೋಗಲಿ ಬಿಡಿ, ಯಾರು ಬರದಿದ್ದರೇನಾಯಿತಂತೆ ಎಂದು ಯಾವ ಊರು ಉಧ್ಹಾರದ ಸಂಘಟನೆಯಲ್ಲೂ ಗುರುತಿಸದ ಕೆಲವರು ಟೀಚರನ್ನು ಚಿಕಿತ್ಸೆಗಾಗಿ ಮಂಗಳೂರಿನ ಕಂಕನಾಡಿಯ ಮಾನಸಿಕ ತಪಾಸಣೆ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದರು. ೮, ೯ ಸಾವಿರ ಖರ್ಚನ್ನು ತಾವೇ ಭರಿಸಿದರು..
ಈಗ ಟೀಚರ್ ಗುಣಮುಖರಾಗುತ್ತಿದ್ದಾರೆ...

*********
ಒಬ್ಬ ಮಹಿಳೆಯನ್ನು ಯಾವುದೇ ಸಂಘ, ಸಂಸ್ಥೆಗಳ ನೆರವಿಲ್ಲದೇ ಮಾನವೀಯತೆಯಿಂದ ಸಹಾಯ ಮಾಡುವವರು ಎಶ್ಟೋ ಮಂದಿ ನಮ್ಮ ಮಂಗಳೂರಲ್ಲಿದ್ದಾರೆ. ಇಂಥವರು ನಿಮ್ಮೂರಲ್ಲೂ ಇರಬಹುದು.
ನಿಮಗಿದು ತಿಳಿದಿರಲೆಂದು ಬರೆದೆ. ಸುಮ್ಮನೇ ಎಲ್ಲಿಂದಲೋ ಬಂದವರು ನಮ್ಮೂರನ್ನು ‘ತಾಲಿಬಾನ್’ ಎಂದಾಗ ಬೇಸರವಾಗುತ್ತದೆ. ಭಾರತದ ಎಲ್ಲಾ ಊರಿನಂತೇ ನಮ್ಮ ದಕ್ಷಿಣ ಕನ್ನಡ ಜಿಲ್ಲೆ ಇದೆ. ಮತಾಂಧರ ಜೊತೆ ಮಾನವೀಯತೆ ಇದ್ದವರೂ ಇದ್ದಾರೆ..
*********
ಅಂದ ಹಾಗೆ, ಟೀಚರನ್ನು ಆಸ್ಪತ್ರೆಗೆ ಕರೆದೊಯ್ದವರಲ್ಲಿ ಹಿಂದೂ, ಕ್ರೈಸ್ತ, ಮುಸ್ಲಿಮ್ - ಎಲ್ಲಾ ಧರ್ಮದವರೂ ಇದ್ದರು.. ಯಾರೂ ನಾನಿಂಥವನು ಎಂದು ಹೇಳಿಕೊಳ್ಳಲಿಲ್ಲ..

17 comments:

ಚಿತ್ರಾ ಸಂತೋಷ್ said...

ಒಳ್ಳೆ ಬರಹ.! ಮಾನವೀಯತೆಗೆ ಜಾತಿ, ಮತಗಳ ಎಲ್ಲೆ ಇರಲ್ಲ. ಇದಕ್ಕೊಂದು ಉತ್ತಮ ನಿದರ್ಶನ ಕೊಟ್ಟಿದ್ದೀರಿ.
ಮಂಗಲೂರು ತಾಲೀಬಾನ್ ಆಗಿದೆ ಅಂದವರು ಯಾರೂ ಮಂಗಳೂರುನ್ನು ನೋಡಿಲ್ಲ..ದೆಹಲಿಯೋ, ಬೆಂಗಳೂರೋ ಇನ್ಯಾವುದೋ ಕಡೆ ತಮ್ಮ ಕೂಲ್ ಕೂಲ್ ಎಸಿ ರೂಮಲ್ಲಿ ಕುಳಿತು 'ತಾಲೀಬಾನೀಕರಣ' ಅಂತ ಬೊಬ್ಬಿಡುತ್ತಿದ್ದಾರೆ. ಇಂಥ ಎಡಬಿಡಂಗಿಗಳ ಮಾತಿಗೆ ನೀವ್ಯಾಕೆ ಪ್ರಾಶಸ್ತ್ಯು ಕೊಡುತ್ತೀರಿ? ಇರಲಿ ಬಿಡಿ..ನಾಯಿ ಬಾಲ ಡೊಂಕೇ..
-ಚಿತ್ರಾ

ಹರೀಶ ಮಾಂಬಾಡಿ said...

ವಂದನೆಗಳು..

VENU VINOD said...

ಈಗ ಟೀಚರ್ ಗುಣಮುಖರಾಗುತ್ತಿದ್ದಾರೆ...
this is important...24X7galu halagi hogali

ಹರೀಶ ಮಾಂಬಾಡಿ said...

Venu,

Thanks for ur comment

PARAANJAPE K.N. said...

ಹರೀಶರೇ,
ನಿಮ್ಮ ಲೇಖನ ಚೆನ್ನಾಗಿದೆ. ನನ್ನ ಬ್ಲಾಗಿಗೊಮ್ಮೆ ಬನ್ನಿ.

Kuntikanamata Kumar said...

kathe bareyuva shaili anataryakke muttithu.

ಹರೀಶ ಮಾಂಬಾಡಿ said...

ಪರಾಂಜಪೆಯವರೆ,
ಭೇಟಿ ನೀಡಿದ್ದಕ್ಕೆ ಧನ್ಯವಾದ.

ಕುಂಟಿಕಾನ ಕುಮಾರ್,
ಇದು ಕಥೆಯಲ್ಲ ಸತ್ಯಘಟನೆ. ನನಗೆ ಕಥೆ ಬರೆಯುವ ಕಲೆ ಸಿದ್ದಿಸಿಲ್ಲ

ಮಿಥುನ ಕೊಡೆತ್ತೂರು said...

chendada baraha

ಹರೀಶ ಮಾಂಬಾಡಿ said...

Mithun,

Thanks

ನಾವಡ said...

ನಿಜ ಹರೀಶರೇ,
ಪ್ರತಿ ಕಡೆಯಲ್ಲೂ ಮಾನವೀಯತೆಯ ಮನುಷ್ಯರು ಇರುವುದರಿಂದಲೇ ಇನ್ನೂ ಬದುಕಿನ ಬಗ್ಗೆ ಅಂಥದೊಂದು ಬೇಸರ ಬಂದಿಲ್ಲ. ಕೆಲವು ಮಂದಿಗೆ ಕೂಗುವುದು ಅಭ್ಯಾಸ ಇರುತ್ತೆ (ನಮ್ಮಲ್ಲಿ ಬೊಬ್ಬೆ ಹಾಕುವುದು ಎನ್ನುತ್ತಾರಲ್ಲಾ)ಅಂಥವರು ಯಾವುದೇ ಕಾಲಕ್ಕೂ ಸರಿಯಾಗೋದಿಲ್ಲ. ಕಾರಣ, ಬೇರೆಯವರು ಹೇಳಿದ್ದನ್ನು ಕೇಳಿಸಿಕೊಳ್ಳಲಿಕ್ಕೆ ಅವರು ಬೊಬ್ಬೆ ಹಾಕುತ್ತಲೆ ಇರುತ್ತಾರಲ್ಲಾ...ಅದಕ್ಕೇ ಬದುಕಿನ ಕತ್ತಲೆಯನ್ನು ತೊಲಗಿಸಲು ಇಂಥ ಪುಟ್ಟ ಹಣತೆಗಳೇ ಸಾಕು, ನಿಯಾನ್ ದೀಪಗಳು ಬೇಕಿಲ್ಲ.
ನಾವಡ

ಹರೀಶ ಮಾಂಬಾಡಿ said...

ನಾವಡ ಸರ್,

ಬ್ಲಾಗಿಗೆ ಭೇಟಿ ನೀಡಿದ್ದಕ್ಕೆ ಧನ್ಯವಾದ ಮತ್ತು ಸ್ವಾಗತ. ಕಣ್ಣೆದುರಿಗೆ ನಡೆದದ್ದು ನಿಮ್ಮಲ್ಲರ ಎದುರಿಗೆ ಇಡಬೇಕೆನ್ನುವುದು ನನ್ನ ಆಸೆ. ನಿಮ್ಮ ಪ್ರೋತ್ಸಾಹ ಸದಾ ಇದ್ದೇ ಇದೆ ಎಂದು ನಂಬಿದ್ದೇನೆ

dtsmv2002 said...

As a part of development, we do forget the humanity. It is a part and parcel of the development i feel. Anyway it is the unwanted happening because it is in accordance that "if you want to get something you have to loose something" and the cost of development of the region, state or country is Humanity.
Good to make people understand its importance, but many may not follow.

ತೇಜಸ್ವಿನಿ ಹೆಗಡೆ said...

ಸಕಾಲಿಕ ಲೇಖನ ತುಂಬಾ ಇಷ್ಟವಾಯಿತು. ಒಂದು ನಾಣ್ಯಕ್ಕೆ ಎರಡು ಮುಖಗಳಿವೆ ಎಂಬುದು ಕೆಲವು ಗೋಮುಖ ವ್ಯಾಘ್ರಗಳಂತಹ ರಾಜಕಾರಣಿಗಳಿಗೆ, ರಾಜಕೀಯ ಮಡುತ್ತಿರುವವರಿಗೆ ತಿಳಿಯದಿರುವುದೇ ಇಂತಹ ಆಭಾಸಕ್ಕೆ ಕಾರಣವೇನೋ?!

Anonymous said...

ನಮಸ್ತೆ ಸರ್
ನಿಮ್ಮ ಬ್ಲಾಗ್ ಗೆ ನನ್ನ ಮೊದಲ ಭೇಟಿ
ನಮ್ಮ ಕುಡ್ಲ (ಮಂಗಳೂರು) ವನ್ನು ‘ತಾಲಿಬಾನ್’ ಅಂದವರಿಗೆ ನಮ್ಮ ಜಿಲ್ಲೆ ‘ತಾಲಿಬಾನ್’ ಅಲ್ಲ ಎಂದು ತೋರಿಸಿಕೊಟ್ಟ ಬರಹ. ನಮ್ಮೂರಲ್ಲಿ ನಡೆಯೋ ಹಿಂಸೆಗಿಂತ ಹೆಚ್ಚಾಗಿ ಒಬ್ಬರೊಬ್ಬರಿಗೆ ಸಹಾಯ ಮಾಡುತ್ತೇವೆ ಎಂದು ತೋರಿಸಿ ಕೊಟ್ಟ ಬರಹ ದನ್ಯವಾದಗಳು

ಹರೀಶ ಮಾಂಬಾಡಿ said...

ಮಹೇಶ್,
ತೇಜಸ್ವಿನಿ,
ರೋಹಿಣಿ
ಥ್ಯಾಂಕ್ಸ್.

ರಾಕೇಶ್ ಕುಮಾರ್ ಕಮ್ಮಜೆ said...

ಹರೀಶಣ್ಣ ಒಳ್ಳೆ ಬರಹ. ಮನಸಿಂಗೆ ಮುಟ್ಟುವಾಂಗಿಪ್ಪದು...

Dr. Shashikantha Koudur said...

Hello Harish... Got your blog ID from Mr. Divan. Your anecdotish writing is really good! Liked it. However, coming to the issue, whether we should call it Talibanisation or by some other name... is a different question. But we need to recognise that over the last decade our beautiful (undivided) district has witnessed so many incidents of violence, which may be reported or unreported in the media. This hurts vehemently; and we need to do something towards that, as an individual or as a group. Of course, there are people who do it individually or as a group. Nevertheless, one also gets a feeling that violence is defeating all these isolated efforts hands down to gain prominence. Is there some light at the end of the tunnel?!