Monday, October 6, 2008

ಗೊತ್ತಿದ್ದರೆ ಹೇಳಿ!

ಯಾರು ಭೀತಿವಾದಿ?
ನೆಲ, ಜಲ ನುಂಗುವವನಾ?
ಕಾಡಿನ ಮುಗ್ಧರ ನಂಬಿಸಿ
ಅವರನ್ನು ವ್ಯವಸ್ಥೆ ವಿರುಧ
ಎತ್ತಿಕಟ್ತುವವರಾ?
ಮಂದಿರ, ಮಸೀದಿ, ಚರ್ಚು
ಹಾನಿ ಮಾಡಿದವರಾ?
ಪ್ರಚಾರಕ್ಕೆ ಕಣ್ಣೊರಸುವ
ಕುಟಿಲ ರಾಜಕಾರಣಿಗಳಾ?
ಸೈಕಲ್, ರೈಲು, ಸೇತುವೆ
ಅಲ್ಲಿ, ಇಲ್ಲಿ ಎಲ್ಲೆಲ್ಲಿ
ಬಾಂಬಿಟ್ತು ನಮ್ಮನ್ನು ಉಡಾಯಿಸುವ
ಮತಾಂಧರಾ?
ಅಥವಾ ಅವರ
ಬೆನ್ನ ಹಿಂದೆ ನಿಂತು
ಮಾನವತಾವಾದಿಯಂತೆ
ಪೋಸು ಕೊಡುವ
ಸಾಹಿತಿ, ಚಿಂತಕರಾ?

6 comments:

ಮಹೇಶ್ ಪುಚ್ಚಪ್ಪಾಡಿ said...

ನಮಗೆ ನಾವೇನಾ..????.. ನನಗೂ ಅದೇ ಪ್ರಶ್ನೆ...

VENU VINOD said...

ಉತ್ತರ ಇಲ್ಲದ ಪ್ರಶ್ನೆ .. !

Ittigecement said...

ನಾವು ಬದಲಾಗದಷ್ಟು ಬದಲಾಗಿದ್ದೇವೆ. ನಮ್ಮನ್ನು ಏಕತೆಯನ್ನು ವ್ಯವಸ್ಥಿತವಾಗಿ ಒಡೆಯಲಾಗುತ್ತಿದೆ. ಜಾತಿ, ಬಣ್ಣ, ಭಾಷೆ, ಪ್ರದೇಶ ಇನ್ನೂ ಏನೇನೊ ಹೇಳಿ ಬೇರೆ ಬೇರೆ ಆಗಿದ್ದೇವೆ.. ಒಡಕಿನ ಮನೆಯಲ್ಲಿ ಮಳೆ, ಬಿಸಿಲು..ಎಲ್ಲಾ ಸಾಮಾನ್ಯ ಅಲ್ಲವಾ..??
ಬೇಸರವಾಗುತ್ತದೆ....

ಮಿಥುನ ಕೊಡೆತ್ತೂರು said...

ಎಲ್ಲರೂ...

shivu.k said...

ಇದರಲ್ಲಿ ನಾನು ಕೂಡ ಇದ್ದೇನಾ ? [ನನಗೆ ನಾಚಿಕೆಯಾಗುತ್ತದೆ. ಕಾರಣ ನಾನೇನು ಮಾಡಲಾಗುವುದಿಲ್ಲವಲ್ಲ ಅಂತ} ಚಿಂತನೆಗೆ ಹಚ್ಚುವ ಕವನ.
ಬರೆಯುತ್ತಿರಿ.

ಶಿವು.ಕೆ

ಮೌನೇಶ ವಿಶ್ವಕರ್ಮ said...

appata bharateeyarelladu ade prashne..