Thursday, December 9, 2010

ಮೇಲೇರಿದ ಮೇಲೆ,

ಗಾಳಿಪಟ ಎಷ್ಟು ಚೆಂದ?
ಅದರ ಬಣ್ಣವೇನು? ಅಂದವೇನು?
ಗಾಳಿಪಟ ಹಾರುವ ಮೊದಲು ಹೇಳುತ್ತಲೂ ಇತ್ತು
ಓ ದಾರವೇ..ನೀನಿಲ್ಲದೆ ನಾನಿಲ್ಲ
ಹಾರಿದ ಮೇಲೆ ಹೇಳಿತು ನಾನು ಎತ್ತರದಲ್ಲಿದ್ದೇನೆ..
ಮತ್ತೆ ಯಾಕೆ ಬೇಕು ಸೂತ್ರ,
(ಅ)ಮೇಲೇರಿದ ಮೇಲೆ ಕೆಳಗಿದ್ದವರು ಕಾಣ್ತಾರಾ?
ಅದೇ ಗತಿ ಸೂತ್ರಕ್ಕಾಯ್ತು...ಮತದಾರನಂತೆ,
ಬಡ ರೈತನಂತೆ, ಥ್ಯಾಂಕ್ಸ್ ಲೆಸ್ ಕೆಲಸ ಮಾಡೋ ಶ್ರಮಜೀವಿಯಂತೆ

3 comments:

ಮನಸಿನಮನೆಯವನು said...

oho...
೨೦೧೧ರಲ್ಲಿ ಸಿಹಿಕ್ಷಣಗಳು ಎದುರಾಗಲಿ...

ಮನಮುಕ್ತಾ said...

ನಿಜವಾದ ವಿಚಾರವನ್ನು ಚಿಕ್ಕ ಚೊಕ್ಕ ಸು೦ದರ ಸಾಲುಗಳಲ್ಲಿ ಚೆನ್ನಾಗಿ ಬರೆದಿದ್ದೀರಿ..

ಡಾ. ಚಂದ್ರಿಕಾ ಹೆಗಡೆ said...

prakrutiya jeevaviruva ella jiivigaluu higee allave? hannele maagida hannu... job sikka makkalu...gaalipata?