Friday, June 18, 2010

ಬೆಚ್ಚನೆ ಹನಿಸದ್ದು

ಭೋರ್ಗರೆಯೋ ರಕ್ಕಸನ ಅಬ್ಬರಕೆ
ಮನೆಯೊಳಗೆ ಕತ್ತಲು ಕವಿದಂತೆ
ಗಾಢ ಮೌನ!
ನೀಲಾಂಧಕಾರ ಒದ್ದೋಡಿಸಲು
ಸಾಕು ಕಾಣದ ಮಾರುತ
ಒಮ್ಮೆ ಸದ್ದು ಮತ್ತೆ ಮೌನ!
ಶರಧಿಯೂ ಬೆಚ್ಹಿ ಬೀಳುತ್ತಾಳೆ

****************

ಮೋಡ ಬಿದ್ದಿದೆ
ಸುತ್ತಲೂ ಕಾರಂಜಿ
ನೆಲದ ಕೆಸರ ತೊಳೆಯುತಿದೆ
ಮನದ ಕೊಳೆಯನ್ನೂ ತೊಳೆಯಲಿ
ಬನ್ನಿ ಹೇಳೋಣ ಮಳೆ ಸದ್ದಿನ ಜೊತೆ
ಮತ್ತೆ ಬಾ

5 comments:

ಮನದಾಳದಿಂದ............ said...

ವ್ಹಾವ್.........
ಸುಂದರ ಸಾಲುಗಳು.
i like it.........

ಸೀತಾರಾಮ. ಕೆ. / SITARAM.K said...

ತು೦ಬಾ ಚೆ೦ದನೆಯ ಕವನ ಎರಡೆನೇ ಪ್ಯಾರಾ ತು೦ಬಾ ಮುದ್ದಾಗಿ ಮಳೆಯನ್ನು ಬರ ಮಾಡಿಕೊಳ್ಳುತ್ತಿದೆ. ಮನದ ಕೊಳೆ ಸ್ವಚ್ಚವಾದರೇ ಒಳ್ಳೆಯದಲ್ಲವೇ!

shivu.k said...

ಸೊಗಸಾದ ಕವನ.

ದಿನಕರ ಮೊಗೇರ said...

ಹರೀಶ್ ಸರ್,
ನಿಮ್ಮ ಬ್ಲಾಗ್ ಗೆ ಮೊದಲ ಬಾರಿ ಬರುತ್ತಿದ್ದೇನೆ.... ಎಲ್ಲಾ ಬರಹ, ಕವನ ವನ್ನೂ ಓದಿದೆ...... ಎಲ್ಲಾವೂ ಚೆನ್ನಾಗಿದೆ..... ನನ್ನ ಬ್ಲಾಗ್ ಗೆ ಒಮ್ಮೆ ಭೇಟಿ ಕೊಡಿ.....

ಮನಸಿನಮನೆಯವನು said...

ಹರೀಶ ಮಾಂಬಾಡಿ ,

ಹನಿ ಹನಿ ಪುಟಕೆ ಹನಿ ಪಸರಿಸಿದ ಕವನ..
ಚೆನ್ನಾಗಿದೆ..