ಸತ್ಯಮೇವ ಜಯತೇ ಎನ್ನಲು ನಾಲಗೆ
ಹೊರಳುತ್ತಿಲ್ಲ ಕಾರಣ ಊರು ತುಂಬ
ಅಸತ್ಯ, ಅನೀತಿ, ಅಸಹ್ಯ ಮಾತುಗಳ
ಬರೆಹಗಳ ಸುರಿಮಳೆಯ ದರ್ಶನ
ದುಸ್ಸಾಹಸ, ದುಷ್ಟಬುದ್ದಿ, ದುರಾಕ್ರಮಣ
ಎಂದು ನಾವು ಮತ್ತೆ ಮತ್ತೆ ನಮ್ಮನ್ನೇ
ದೂರುವ ಸಂದರ್ಭ ಬೇಕಿತ್ತೆ
ಮುಂಬಯಿಯಲ್ಲಿ ದೊಡ್ಡ ದೊಡ್ದ ಮನುಜರ
ಕತ್ತರಿಸಿ ಕೊಂದ ನೆತ್ತರ ಕೋಡಿ ಹರಿಸಿದ
ಮೇಲಷ್ಟೇ ಪ್ರಪಂಚಕ್ಕೆ ಅರಿವಾಯಿತು
ಮತಾಂಧರ ಉನ್ಮತ್ತ ಹೆಜ್ಜೆಯ ಗುರುತು
ಮೈಕು ಹಿಡಿಸುವ ಮಲ್ಟಿನ್ಯಾಶನಲ್ ಮೀಡಿಯಾ
ದೊರೆಗಳು, ಕೊಚ್ಹೆಗುಂಡಿಗಳಿಗೆ ಹೋಗಲು
ಹೇಳುತ್ತಿಲ್ಲ, ಏಕೆಂದರೆ ಅವಕ್ಕೂ ಬೇಕು ಮಾರ್ಕೆಟ್
ಅದಕ್ಕಾಗಿ ಭಾರತವಿಂದು ಭೀತಿವಾದಿಗಳ, ಕೊಳಕು
ಜನರ ಬೇಳೆ ಬೇಯಿಸುವ ಟಾರ್ಗೆಟ್..
12 comments:
ಹರೀಶ್,
ಮೀಡಿಯಾಗಳ ಈಗಿನ ನಿಜವಾದ ಮನಸ್ಥಿತಿಯನ್ನು ಚೆನ್ನಾಗಿ ಬಿಂಬಿಸಿದ್ದೀರಿ. ಕವನ ಸತ್ಯಕ್ಕೆ ಹತ್ತಿರವಾಗಿದೆ.
ಶಿವು, ಸತ್ಯಕ್ಕೆ ಹತ್ತಿರ ಅಲ್ಲ ಸ್ವಾಮೀ ಇದು ಅಪ್ಪಟ ಸತ್ಯ.
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ.
ಇವೆಲ್ಲದರ ನಡುವೆಯೂ ಉಗ್ರರ ಗುಂಡಿಗೆ ಸೀಳುವ ನಮ್ಮ ಭದ್ರತಾ ಸಿಬ್ಬಂದಿಗಳು ಗ್ರೇಟ್
ನಿಮ್ಮ ಮನಸ್ಸಿನ ನೋವು ಕವನವಾಗಿದೆ. ತುಂಬಾ ಚೆನ್ನಾಗಿ ಬರೆದಿದ್ದೀರಿ..
ರಕ್ತದ ಕೋಡಿ ಹರಿದಿದೆ...
ನಾಡು ನೆತ್ತರಾಗಿದೆ... ರಾಜಕಾರಣಿಗಳ ಬೇಳೆ ಇನ್ನು ಬೇಯದು ಜಾಗೃತರಾಗಬೇಕು ಇಂದು ನಾವು... ಅವರ ಪಾಪದ ಕೂಪಕ್ಕೆ ಬಲಿಯಾಗುತ್ತಿರುವುದು ಬಡ ಜನರ ಜೀವಗಳು...
ನಮ್ಮ ತಾಳ್ಮೆ, ಸಮಾಧಾನವೇ ನಮಗೆ ಮುಳುವಾಯಿತೇನೋ...ಅಹಿಂಸೆಯ ಮಂತ್ರ ಹಾಗೂ ಯಾರಿಗೂ ನೋವಾಗದ ಹೇಳಿಕೆ ನೀಡುವ (ಬೋಧಿಸುತ್ತಿರುವ )ನಮ್ಮ ಪ್ರಯೋಜನವಿಲ್ಲದ ನೇತಾರರನ್ನು ಕಂಡು ಹಿಂಸೆಯ ಮೂಲಕ ಧಾಳಿ ಮಾಡಿದ ಆಕ್ರಮಣಕೋರರನ್ನು ನಾವೇನು ಮಾಡುವುದು ಅಲ್ಲವೇ?
ವೇಣು, ಪ್ರಕಾಶ್ ಹೆಗಡೆ, ಶ್ರೀ, ಮಹೇಶ ಪ್ರತಿಕ್ರಿಯಿಸಿದ್ದಕ್ಕೆ ವಂದನೆಗಳು..
"...ಮೈಕು ಹಿಡಿಸುವ ಮಲ್ಟಿನ್ಯಾಶನಲ್ ಮೀಡಿಯಾ
ದೊರೆಗಳು, ಕೊಚ್ಹೆಗುಂಡಿಗಳಿಗೆ ಹೋಗಲು
ಹೇಳುತ್ತಿಲ್ಲ, ಏಕೆಂದರೆ ಅವಕ್ಕೂ ಬೇಕು ಮಾರ್ಕೆಟ್
ಅದಕ್ಕಾಗಿ ಭಾರತವಿಂದು ಭೀತಿವಾದಿಗಳ, ಕೊಳಕು
ಜನರ ಬೇಳೆ ಬೇಯಿಸುವ ಟಾರ್ಗೆಟ್.. "
ಏನು ಹೇಳಲಿ..ಮನದ ನೋವಿನ್ನೂ ಕರಗಿಲ್ಲ..
ಕತ್ತಲು ಬೆಳಕಾಗಿಲ್ಲ..
..
ಅದೇ ಗುಂಗಿನಲ್ಲಿ..
-ಚಿತ್ರಾ
ಇದು ಹೀಗೇ ಬಂದು ಹಾಗೇ ಹೋಗುವ ವಿಷಯವಾದರೆ ಮರೆಯಬಹುದಿತ್ತು. ಒಂದು ಜೀವವನ್ನು ನಷ್ಟಗೊಳಿಸುವ ಕ್ರೂರ ಮನುಷ್ಯರು ಎಸ್ಟೇ ಬುದ್ದಿವಂತರಾದರೂ ಮನುಕುಲಕ್ಕೆ ಮಾರಿಗಳು.. ಹೀಗಾಗಿ ಕತ್ತಲು ಬೆಳಕಾಗುವವರಗೂ ಕಾಯಲೇಬೇಕು. ಸಾಧ್ಯವಾದರೆ ನಾವು ನೀವು ಬೆಳಕು ಹಚ್ಹಲು ಪ್ರಯತ್ನಿಸೋಣ. ಆ ಗುಂಗು ಇದ್ದರೇನೇ ಉತ್ಸಾಹ ಬರೋದು..
ಚಿತ್ರಾ, ನಿಮ್ಮ ಪ್ರತಿಕ್ರಿಯೆಗೆ ವಂದನೆಗಳು
sathyadinda kudide nima kavithe
manasu muttvantide
ಒಳ್ಳೆಯದಿದೆ ಮಾರಾಯ. ನೀನು ಹೇಳುವುದು ಎಲ್ಲಾ ಸರಿಯಿದೆ. ಅತ್ಯಂತ ಸುಂದರವಾಗಿಯೂ ಇದೆ. ನನಗೆ ಭಯ ಯಾಕೆಂದರೆ ಅದು ಪದ್ಯದೊಳಗೆ ಅದೇನು ತುರುಕಿಟ್ಟಿದಿ ಎಂದು.
ಒಲವಿನಿಂದ
ಬಾನಾಡಿ
ಸತ್ಯವಾಕ್ಯವ ಬರೆದೆಯಷ್ಟೇ.
ಅದನ್ನು ಕವನವನ್ನಾಗಿಯೋ , ಅನಿಸಿಕೆಯನ್ನಾಗಿಯೋ ತಿಳಿದುಕೊಳ್ಳಬಹುದು.
ವೀಣಾ, ಬಾನಾಡಿ ನಿಮ್ಮ ಪ್ರೋತ್ಸಾಹದಾಯಕ ಪ್ರತಿಕ್ರಿಯೆಗೆ ಥ್ಯಾಂಕ್ಸ್.
good poem harish ...you have good future
Post a Comment