
ಬಾಬುಕೋಡಿ ವೆಂಕಟ್ರಮಣ ಕಾರಂತ...!
ಹಾಗಂತ ಹೇಳಿದರೆ ಫಕ್ಕನೆ ಗೊತ್ತಾಗಲಿಕ್ಕಿಲ್ಲ
ಬಿ.ವಿ.ಕಾರಂತ ಅಂದರೆ ಸಾಕು. ಮತ್ತೆ ವಿವರಣೆ ಬೇಕಿಲ್ಲ..!
ಅಂಥವರೊಬ್ಬರು ಹುಟ್ಟಿ ಬೆಳೆದ ಊರಿಗೆ ಸಮೀಪವೇ ನಾನೂ ಇದ್ದೇನೆ ಅನ್ನುವುದೇ ರೋಮಾಂಚನ ತರುವ ವಿಷಯ. ಮೊನ್ನೆ ಅವರ ಹುಟ್ಟೂರಲ್ಲಿ (ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಕುಕ್ಕಾಜೆಯಲ್ಲಿ) ಊರವರು ಮತ್ತು ಕಾರಂತರ ಬೆಂಗಳೂರು, ಇತ್ಯಾದಿಗಳ ಒಡನಾಡಿಗಳೆಲ್ಲಾ ಸೇರಿ ಬಿ.ವಿ.ಕಾರಂತ ನೆನಪು ಜೊತೆಗೆ ನಾಟಕೋತ್ಸವ, ವಿಚಾರ ಸಂಕಿರಣಗಳನ್ನು ಆಯೋಜಿಸಿದರು. ಸ್ನೇಹಿತ ಕಜೆ ನರಸಿಂಹ ಭಟ್ ಜೊತೆ ಆ ಶುಕ್ರವಾರ ಬಿ.ಸಿ.ರೋಡಿನಿಂದ ಬೈಕಿನಲ್ಲಿ ಮಂಚಿಗೆ ತಲುಪಿದಾಗ ಸೂರ್ಯ ಹೊರಡುವ ತಯಾರಿ ನಡೆಸಿದ್ದ. ಆಗಲೇ ಕಾರಂತರ ಶಾಲೆಯಾದ ಮಂಚಿ ಕುಕ್ಕಾಜೆ ಸರ್ಕಾರಿ ಶಾಲೆಯಲ್ಲಿ ಸ್ತೇಜ್ ಸೆಟ್ತಿಂಗ್ ನಡೆಯುತ್ತಿತ್ತು. ತುಮರಿಯ ಕೃಷ್ಣಮೂರ್ತಿ, ಪುತ್ತೂರಿನ ಐ.ಕೆ.ಬೊಳುವಾರು ಸಂಗಡಿಗರಿಗೆ ಹಾಗಲ್ಲ, ಹೀಗೆ ಅನ್ನುತ್ತಾ ನಿರ್ದೇಶನ ತಯಾರಿ ಮಾಡಿತ್ತಿದ್ದರು. ಇವರೊಂದಿಗೆ ಅಂದು ಅಭ್ಯಾಗತದಾಗಿ ಡುಂಡಿರಾಜ್, ನಾಟಕ ಅಕಾಡೆಮಿ ಸದಸ್ಯ ಕುಮಾರಸ್ವಾಮಿ ಮೊದಲಾದವರು ಇದ್ದರು. ಅದೊಂದು ಅಪ್ಪಟ ಹಳ್ಳಿಯ ವಾತಾವರಣ. ಸ್ವಚ್ಹ ನಿಷ್ಕಲ್ಮಶ ಮನಸ್ಸಿನ ಆತ್ತಿಥೇಯರು. ಪ್ರಶಾಂತವಾದ ಗಾಳಿ, ಬೆರಗುಗಣ್ಣಿನ ಸ್ಥಳೀಯರು ನೋಡನೋಡುತ್ತಿದ್ದಂತೆ ಸಭಾ ಕಾರ್ಯಕ್ರಮ ಆರಂಭ ಆಯಿತು. ಕಾರಂತರ ಒಡನಾಡಿಗಳು, ಅವರ ಸ್ಮರಣೆ ಮಾಡಿದರು. ಬಳಿಕ ಮಕ್ಕಳ ನಾಟಕ. ಹೊತ್ತು ಹೋದದ್ದೇ ಗೊತ್ತಾಗಲಿಲ್ಲ.
ಮರುದಿನ ಶನಿವಾರವೂ ಸಂಜೆ ನಾಟಕ ಪ್ರದರ್ಶನ. ಅದೂ ಹೌಸ್ ಫುಲ್..!
ಭಾನುವಾರ ವಿಚಾರಸಂಕಿರಣ. ಮೈಸೂರಿನ ರಮೇಶ್, ಉಡುಪಿಯ ವೈದೇಹಿ, ದೆಹಲಿಯ ಶ್ರೀನಿವಾಸ್, ಐತಾಳ್ ....ಹೀಗೆ ನಾಟಕಗಳ ಬಗ್ಗೆ ಇದ್ದ ವಿಚಾರಸಂಕಿರಣವೆಲ್ಲಾ ಕಾರಂತ ಸ್ಮರಣೆಯೇ ಆಯಿತು. ಸಮಾರೋಪಕ್ಕೂ ಅರ್ಥಪೂರ್ಣವಾದ ನಾಟಕ ಪ್ರದರ್ಶನ.
********************
ಯಾರೋ ಮಂಚಿಯನ್ನು ಹೆಗ್ಗೋಡಿನಂತೆ ಮಾರ್ಪಡಿಸಬೇಕು. ಇದು ಬಿ.ವಿ.ಕಾರಂತರಿಗೆ ಅರ್ಥಪೂರ್ಣ ಶ್ರ ಧಾಂಜಲಿ ಅಂದರು. ಆದರೆ ನನಗನಿಸುತ್ತದೆ. ಅದಕ್ಕಿಂತಲೂ ಮುಖ್ಯವಾಗಿ ಇಂದು ನಾಟಕಕಾರರು, ವಿಚಾರವಂತರು ಅದರಲ್ಲೂ ಅಕಾಡೆಮಿಕ್ ವಲಯದವರು ಗಂಭೀರವಾಗಿ ಆಲೋಚಿಸುವ ಕಾಲ. ಎಲ್ಲಾ ರಂಗಕರ್ಮಿಗಳನ್ನೂ ಒಗೊಡಿಸುವುದು.
ನಮ್ಮ ದ.ಕ.ಜಿಲ್ಲೆಯನ್ನೇ ತೆಗೆದುಕೊಳ್ಳಿ. ಇಂದಿಗೂ ತುಳು ರಂಗಭೂಮಿ ಇಲ್ಲಿ ಜನಪ್ರಿಯ. ಇಲ್ಲಿನ ಕಲಾವಿದರು ಈಗಲೂ ಸ್ಟಾರ್ ಗಳು. ನಾಟಕ ಪ್ರದರ್ಶನವಿರುವ ಕಡೆ ಇಲ್ಲಿ ಇಂದಿಗೂ ನೂಕು ನುಗ್ಗಲು ಇದೆ. ಆದರೆ ಅದೇ ಜಾಗದಲ್ಲಿ ನೀನಾಸಂ ನಂಥ ತಂಡ ನಾಟಕ ಪ್ರದರ್ಷಿಸಿದರೆ ನೋಡಲು ಜನವೇ ಇಲ್ಲ. ಇದ್ದರೂ ಯು.ಜಿ.ಸಿ. ಸಂಬಳ ಪಡೆಯುವ ಕಾಲೇಜು ಉಪನ್ಯಾಸಕರು, ಸಾಹಿತ್ಯದ ಒಲವಿರುವ ಸಣ್ಣ ವರ್ಗ. ಹೀಗಾದರೆ ಆ ನಾಟಕ ಯಾರನ್ನು ತಲ್ಪುತ್ತದೆ?
ನಾವ್ಯಾಕೆ ಜನಪ್ರಿಯ ನಾಟಕಗಳ ಕಲಾವಿದರನ್ನು ನೀನಾಸಂ ಥರದ ಕಲಾವಿದರನ್ನು ಒಟ್ಟು ಸೇರಿಸಬಾರದು?
ಇಂಥದ್ದೇ ಪ್ರಶ್ನೆಯನ್ನು ಮೊನ್ನೆ ಮಂಚಿಗೆ ಬೆಂಗಳೂರಿನಿಂದ ಬಂದ ಬುದ್ದಿವಂತ "ರಂಗಕರ್ಮಿ’ಯನ್ನು ಯಾರೋ ಖಾಸಗಿಯಾಗಿ ಕೇಳಿದರಂತೆ. ಆಗವರು ಕೆಕ್ಕರಿಸಿ ನೋಡಿದರಂತೆ.
ಅಟ್ ಲೀಸ್ಟ್ ಬಿ.ವಿ.ಕಾರಂತ ಜೀವನಗಾಥೆಯನ್ನಾದರೂ ಅಂಥ ಮನೋಸ್ಥಿತಿಯುಳ್ಳವರು ಓದಲಿ..
ರಂಗಭೂಮಿ ಒಟ್ಟಾಗಲಿ... ಯುನಿವರ್ಸಿಟಿ ಪ್ರೊಫೆಸರ್, ಆಟೋ ಡ್ರೈವರ್ ಜತೆಜತೆಯಾಗಿ ಕುಳಿತು ಒಂದೇ ನಾಟಕವನ್ನು ನೋಡಿ, ಸರಿ ತಪ್ಪುಗಳ ವಿಮರ್ಷೆ ಮಾಡಲಿ..
ಹಾಗಾಗಬಹುದೇ?
9 comments:
ಹರೀಶ್ ಸಾರ್,
ಕಾರಂತರ ನೆನಪಿಸಿದ್ದಕ್ಕೆ ಥ್ಯಾಂಕ್ಸ್. ನಿಮ್ಮ ಕಡೆ ಈಗಲೂ ರಂಗಭೂಮಿ ಚಟುವಟಿಕೆಯಲ್ಲಿದೆ ಎಂದು ಕೇಳಿದ್ದೇನೆ. ಕಲಾವಿದರನ್ನು ಓಗ್ಗೂಡಿಸುವ ನಿಮ್ಮ ಅಲೋಚನೆಗೆ ನನ್ನ ಸಹಮತವಿದೆ..
ಉನ್ನತ ಶಿಕ್ಷಣ ಪಡೆದವರು ಮಾತ್ರ ಬುದ್ಧಿಜೀವಿಗಳಾಗುವುದು, ಇಂಗ್ಲಿಷ್ನಲ್ಲಿ ಟೀಕಿಸುವುದು, ಅರ್ಧ ಕನ್ನಡ ಇನ್ನರ್ಧ ಇಂಗ್ಲಿಷ್ನಲ್ಲಿ ಕಮೆಂಟ್ ಮಾಡುತ್ತಿರುವ ಈ ದಿನಗಳಲ್ಲಿ, ಹಳ್ಳಿಯಲ್ಲಿ ನಡೆಯುವ ಇಂತಹ ಪ್ರಯತ್ನಗಳು ಮಾಧ್ಯಮದವರಿಗೂ ಸುದ್ದಿ ಅನ್ನಿಸದೇ ಇರೋದು ದುರಂತವೇ ಸರಿ...
ಉನ್ನತ ಶಿಕ್ಷಣ ಪಡೆದವರು ಮಾತ್ರ ಬುದ್ಧಿಜೀವಿಗಳಾಗುವುದು, ಇಂಗ್ಲಿಷ್ನಲ್ಲಿ ಟೀಕಿಸುವುದು, ಅರ್ಧ ಕನ್ನಡ ಇನ್ನರ್ಧ ಇಂಗ್ಲಿಷ್ನಲ್ಲಿ ಕಮೆಂಟ್ ಮಾಡುತ್ತಿರುವ ಈ ದಿನಗಳಲ್ಲಿ, ಹಳ್ಳಿಯಲ್ಲಿ ನಡೆಯುವ ಇಂತಹ ಪ್ರಯತ್ನಗಳು ಮಾಧ್ಯಮದವರಿಗೂ ಸುದ್ದಿ ಅನ್ನಿಸದೇ ಇರೋದು ದುರಂತವೇ ಸರಿ...
ಹರೀಷ್....
ನಾನೂ ಕರಂತರ ಅಭಿಮಾನಿ..
ಅ ವ್ಯಕ್ತಿಯ ಬಗೆಗೆ ಗೌರವ ಇರುವವರು "ಇಗೊ" ಬಿಟ್ಟರೆ ಎಲ್ಲ ಸರಿ ಆಗುತ್ತದೆ..
ಒಳ್ಳೆಯ ಲೆಖನ ಬರೆದಿದ್ದಕ್ಕೆ ಅಭಿನಂದನೆಗಳು...
nimma blog, photos, haleya nenapugalu tumba chennagive, hige vishistavada praytna munduvareyali, dhanyavadagalondige....
ರಂಗಭೂಮಿಯಲ್ಲಿ ಬಿ.ವಿ.ಕಾರಂತರ ನೆನಪು ಸದಾ ಇದೆ. ಆ ಕಾರ್ಯಕ್ರಮವನ್ನು ಇನ್ನೂ ಚೆನ್ನಾಗಿ ಆಯೋಜಿಸಬಹುದಿತ್ತು ಅಲ್ವಾ? ಹೇಗಿದ್ದರೂ ಅದು ಕಾರಂತರ ಊರು.ವೈದೇಹಿಯವರು ಅಲ್ಲಿ ಹೇಳಿದಂತೆ "ಇದು ಕಾರಂತರು ಹುಟ್ಟಿದ ಊರು ಇಲ್ಲಿ ಕಾಲಿಡುವುದೆಂದರೇ ಹೆಮ್ಮೆ...". ಹಾಗಾಗಿ ನನಗನ್ನಿಸಿದ್ದು ಇನ್ನೂ ವೈಭವವಾಗಿ ನಡೆಸಬಹುದಾಗಿತ್ತು.ಆದರೆ ಆ ಕಾರ್ಯಕ್ರಮ ಸಾಲದು ಅಂತ ಅಲ್ಲ. ಇನ್ನಷ್ಟು ಹುಡುಗರಿಗೆ ಕಾರಂತರನ್ನು ನೆನಪಿಸಬಹುದಾಗಿತ್ತು.ಅನೇಕ ಹುಡುಗರಿಗೆ ಕಾರಂತರು ಎಂದರೆ ಯಾರು ಎಂದೇ ತಿಳಿದಿಲ್ಲ.
ಕಾರಂತರ ನೆನಪು ಮನದೊಳಗೆ ಪುಳಕ ಹುಟ್ಟಿಸಿತು..ಥ್ಯಾಂಕ್ಯೂಉಉ ಸರ್..
-ತುಂಬುಪ್ರೀತಿ,
ಚಿತ್ರಾ
**** ಶಿವು, ನಮ್ಮ ಕಡೆ ತುಳು ರಂಗಭೂಮಿ ಇನ್ನೂ ಹೌಸ್ ಪುಲ್ ಪ್ರದರ್ಶನ ಕಾಣುತ್ತಿದೆ. ಬಿಡುವಾದಾಗ ಬನ್ನಿ.
*** ಕ್ರಿಷ್ಣಮೋಹನ್,ಈಗೀಗ ಯಾವುದು ಸುದ್ದಿ, ಯಾವುದು ಅಲ್ಲ ಎಂಬುದೇ ಗೊಂದಲ ತರುವಂತಿದೆ. ಹಳ್ಳಿಯ ಜನರಿಗೂ ತಿಳುವಳಿಕೆ ಇದೆ ಅನ್ನುವುದು ಮೆಟ್ರೋದವರಿಗೆ ಗೊತಾದರೆ ಸಾಕು. ಪ್ರತಿಕ್ರಿಯೆಗೆ ವಂದನೆ.
**** ಪ್ರಕಾಶ್ ಹೆಗಡೆ, ರವಿರಾಜ್, ಬಿ.ವಿ.ಕಾರಂತರು ಚಲನಚಿತ್ರಗಳಲ್ಲೂ ಪ್ರಯೋಗಶೀಲರಾಗಿ ಹೊಸತನ ನೇಡಿದವರು. ಬರೆಹ ಓದಿದ್ದಕ್ಕೆ ಧನ್ಯವಾದ
***** ಮಹೇಶ್, ನೀವು ಹೇಳಿದ್ದು ಸರಿ. ಅಂದು ನೀವೇ ನೋಡಿದಿರಲ್ಲ, ಅದೇ ಪರಿಸರದ ನಾಟಕ ಕಲಾವಿದರೂ ಗೋಷ್ಟಿಗೂ ಬರಲಿಲ್ಲ. ಇಂಥ ಕಾರ್ಯಕ್ರಮಗಳಲ್ಲಿ ಸಂಘಟಕರ ಪ್ರಯತ್ನವಷ್ಟೇ ಅಲ್ಲ, ಸಾರ್ವಜನಿಕರ ಸಹಭಾಗಿತ್ವವೂ ಬೇಕು. ಈ ಗ್ಯಾಪ್ ತೊಡೆದು ಹಾಕುವಂತಾಗಬೇಕು ಎಂಬುದು ನನ್ನ ಆಶೆ. ಏನಂತೀರಿ?
**** ಚಿತ್ರಾ ಅಭಿಪ್ರಾಯಕ್ಕೆಥ್ಯಾಂಕ್ಸ್.
ನಿಮ್ಮೆಲ್ಲರ ಗೆಳೆಯ
- ಹರೀಶ ಮಾಂಬಾಡಿ
sadhyakke adu saashya illa ansutte!
Post a Comment