Monday, November 10, 2008

ಪಯಣದ ಹಾದಿ..

ಅಂದು ಸುಮ್ಮನೇ ಕುಳಿತು
ಪರ್ವತದ ಶಿಖರದಿಂದ
ಬಗ್ಗಿ ನೋಡಿ ಪುಟ್ಟ ಮನೆ,
ಬಸ್ಸುಗಳ ನೋಡಿ ಖುಷಿಯಿಂದ
ಕುಣಿದಿದ್ದೆ....
ನಾನೆಷ್ಟು ಎತ್ತರದಲ್ಲಿದ್ದೇನೆ?
ಮತ್ತೆ ಹಾಗೇ ಇಳಿದು ಸುಮ್ಮನೇ
ರಸ್ತೆಯಲ್ಲಿರುವ ದೊಡ್ಡ ದೊಡ್ದ
ಲಾರಿ ಬಸ್ಸುಗಳ ನೋಡಿ
ಮಂಕಾದೆ...
ನಾನೆಷ್ಟು ಕೆಳಗಿದ್ದೇನೆ?
ಯಾರೋ ಹೇಳಿದರು,
ನಾನು ನೋಡಿ ತಿಳಿದೆ
ಎತ್ತರಕ್ಕೆ, ಪಾತಾಳಕ್ಕೆ
ಪಯಣಿಸುವುದು ನಮ್ಮ ಕೈಯಲ್ಲೇ
ಇದೆ..ಅದು ಸುಮ್ಮನೇ ನಮ್ಮ ಹಾದಿಯಲ್ಲಿ
ಬೇಡವಾದಾಗಲೂ ಸಿಗುತ್ತದೆ
ಆದರೆ ಬೆಟ್ಟ ಅಣಕಿಸುತ್ತದೆ
ನಾನೇರಿದೆತ್ತರಕೆ ನೀನೇರಬಲ್ಲೆಯಾ?

4 comments:

shivu.k said...

ನಿಜ. ನಿಮ್ಮ ಕವನದಲ್ಲಿರುವುದು ಸತ್ಯ.
ಮತ್ತಷ್ಟು ಬರೆಯಿರಿ....

ಮಹೇಶ್ ಪುಚ್ಚಪ್ಪಾಡಿ said...

ಏನಿದು ಅಣಕ...!!??
Superb..

ಹೊಸತು ಹೊಸತಾಗಿ ಬಂದಿದೆ ಬ್ಲಾಗ್..

ಹೊಸ ಹೊಸ ಬರಹದ ನಿರೀಕ್ಷೆಯಲ್ಲಿ...

ಆಗಾಗ ಬರುವೆವು....

ನಾನೆಷ್ಟು ಕೆಳಗಿದ್ದೇನೆ?

Anonymous said...

ನಮ್ಮೂರಿನ ನರಹರಿ ಪರ್ವತಕ್ಕೆ ಹೋದಾಗಲಾಗಲೆಲ್ಲಾ ನೆನಪಾಗುವುದನ್ನು ಸುಮ್ಮನೇ ದಾಖಲಿಸಿದೆ.
ಶಿವು, ಮಹೇಶ್, ಪ್ರತಿಕ್ರಿಯೆಗೆ ಧನ್ಯವಾದಗಳು.

--ಹರೀಶ ಮಾಂಬಾಡಿ

ಚಿತ್ರಾ ಸಂತೋಷ್ said...

ಸರ್...ಬದುಕು ಹೀಗೇ.ಆರೋಹಣ -ಅವರೋಹಣ.
-ಚಿತ್ರಾ