Tuesday, October 21, 2008

ಅವಳು ಹಾಗೇ....

ಮಾಯಾಂಗನೆಯ ಕುಡಿನೋಟಕ್ಕೆ
ಮರುಳಾಗಿ, ತನುಮನದೊಂದಿಗೆ
ಬಿಜಯಂಗೈದರೂ
ಬಿಸಿಗಾಳಿ, ಹನಿಬೆವರು ಹರಿಸಿದರೂ
ವಿಕ್ರಮಿಗೆ ವಿಜಯ ಸಿಗಲಿಲ್ಲ!
ಏಕೆಂದರೆ ಅವಳು ವಸುಂಧರೆ
ಎಷ್ಟೇ ಆಕ್ರಮಣ, ಅತ್ಯಾಚಾರ,
ಅನಾಚಾರಕ್ಕೂ ಅವಳು
ತಲೆಬಾಗುವುದಿಲ್ಲ...!
ಅತಿಯಾಸೆಗೆಂದು ಆಕೆಯ
ಬಲಾತ್ಕಾರ ನಡೆದರೂ,
ಅವಳ ಹಸಿರು ಹೊದಿಕೆ,
ಸೆಳೆದೆಳೆದರೂ, ಆಕೆ
ನಳನಳಿಸುತ್ತಾಳೆ...
ಆದರೆ ಒಂದೊಮ್ಮೆ
ಅವಳು ಮಗ್ಗಲು ಬದಲಾಯಿಸಿದರೆ..
ಯಾವ ವಿಕ್ರಮಿಯೂ ಉಳಿಯುವುದಿಲ್ಲ..

5 comments:

ಮಿಥುನ said...

ವಾಹ್!

shivu K said...

ಭೂತಾಯಿಯ ಮೇಲಿನ ಕವನ ಚೆನ್ನಾಗಿದೆ. ಏನೇ ಮಾಡಿದರೂ ಭೂಮಾತೆಯ ಅಂತಿಮ. ಚೆನ್ನಾಗಿದೆ ಕವನ.
ಶಿವು.ಕೆ.
ಸಾರ್ ನನ್ನ ಬ್ಲಾಗಿಗೆ ನಾಚಿಕೆಯಿಲ್ಲದ ಪಾರಿವಾಳ ಕುಟುಂಬ ಬಂದಿದೆ. ಬನ್ನಿ ಓದಿ ಪ್ರತಿಕ್ರಿಯಿಸಿ.

ಹಾಗೆ ಮತ್ತೊಂದು ಮಜವತ್ತಾದ ಬರವಣಿಗೆಯನ್ನು ಇಲ್ಲಿ ಬರೆದಿದ್ದೇನೆ ಒಮ್ಮೆ ಓದಿ ನಿಮಗೂ http://camerahindhe.blogspot.com/

ಪುಚ್ಚಪ್ಪಾಡಿ said...

ಈ ಕುಡಿನೋಟವೇ ಭಿನ್ನವಾಗಿದೆ.ಖುಷಿಯಿದೆ. ಒಂದೇ ವಾಕ್ಯದಲ್ಲಿ ಸೂಪರ್ಬ್

Anonymous said...

:)

Anonymous said...

privet vse super