Thursday, August 4, 2011

ಯಾರಿಗೇನಾಗಬೇಕು?

ಮಳೆಯ ಹನಿ ದಟ್ಟವಾಗುತ್ತಿದ್ದಂತೆ
ಕಣ್ಣು ಮಂಜಾಯಿತು.
ದೇಹಕ್ಕಾದರೆ ಗಾಯ ವಾಸಿಯಾಗುತ್ತೆ
ಮರ ಮುಳುಗಿದರೆ ಮತ್ತೊಂದು ಗಿಡ ನೆಟ್ಟು
ದೊಡ್ಡಮರವನ್ನಾಗಿ ಮಾಡಲು ಎಷ್ಟೊಂದು
ಬೆವರ ಹನಿ ಮಣ್ಣಾಗಿದೆಯೋ, ಗೊಬ್ಬರವೆಷ್ಟು
ಹಾಕಿದ್ದೇನೋ, ನಿಮಗೇನು ಗೊತ್ತು?
ಸುಮ್ಮನೆ ಮರ ಬಿದ್ದೊಡನೆ ಲೊಚಗುಟ್ಟುವವರೇ?
ಹೀಗೆಂದು ನಿಮ್ಮ ಮೇಲೆ ಬೇಜಾರಿಲ್ಲ ಎಲ್ಲಾ
ನನ್ನ ಪ್ರಾರಬ್ಧ. ಜೊತೆಗೆ ಪೇಟೆಯಲ್ಲೀಗ ಚಿನ್ನದ
ರೇಟ್ ದುಪ್ಪಟ್ಟು. ಅಡಕೆ ಸುಲಿಯಲೂ ಅಷ್ಟೇ...
ಪೇಟೆಗ ಮದ್ದಿಗೆ ಹೋದರೂ ಕಷ್ಟ
ನಮ್ಮ ದುಮ್ಮಾನ ಕೇಳಿ ಯಾರಿಗೇನಾಗಬೇಕು?

(ಇದು ಕರಾವಳಿಯಲ್ಲಿ ಕೃಷಿಯನ್ನೇ ನಂಬಿರುವ ಬಡವನೊಬ್ಬನ ಸ್ವಗತ)

No comments: