Sunday, May 23, 2010

ರೆಕ್ಕೆ ಮುರಿದ ಲೋಹದ ಹಕ್ಕಿ

ಎಲ್ಲಾ ಅಳಿದ ಮೇಲೆ ಏನುಂಟು ಮುಂದಿನ ಮಾತು?
ಹೀಗನ್ನಿಸೋದು ನೆನ್ನೆ ಶನಿವಾರ ಬಜ್ಪೆಯ ದುರಂತ ಕಂಡು
ನೀವೆಲ್ಲಾ ಅಲ್ಲಿನ ಹೃದಯವಿದ್ರಾವಕ ಚಾಯಾಚಿತ್ರಗಳನ್ನು, ವರದಿಯನ್ನು ನೋಡಿರುತ್ತೀರಿ, ಓದಿರುತ್ತೀರಿ ಅಲ್ಲವೇ?
ವರ್ಶದ ಹಿಂದೆ ಮಂಗಳೂರಲ್ಲಿ ದ್ವೇಷದ ಅಗ್ನಿ ಉರಿಯುತ್ತಿತ್ತು. ಈಗ ನೋವಿನ ಅಗ್ನಿ.
ನಾನು ಅಲ್ಲಿ ಕಂಡದ್ದು ಕೇವಲ ಅವಷೇಶಗಳನ್ನಷ್ಟೇ ಅಲ್ಲ, ಸಾಮರಸ್ಯದ ಭ್ರಾತೃತ್ವ. ವಿಮಾನದಲ್ಲಿ ಇದ್ದವರು ಯಾವ ಜಾತಿ, ಕೋಮು ಎಂದು ನೋಡಲು ಯಾರು ಹೋಗಿದ್ದರು? ಸುಟ್ಟು ಕರಟಿದ ದೇಹದಲ್ಲಿ ಅವನ್ಯಾರು? ಶ್ರೀಮಂತನೋ, ಬಡವನೋ, ಹಿಂದೂವಾ? ಮುಸ್ಲಿಮಾ? ಕ್ರೈಸ್ತನಾ? ಎಂದು ನೋಡಲು ಯಾರಿಗೆ ಪುರುಸೊತ್ತಿತ್ತು?
ವಿಮಾನ ಬಿದ್ದ ಜಾಗದ ಕೆಲವೇ ಕಿ.ಮೀ. ಪರಿಸರದಲ್ಲಿ ಕೆಲವು ವರ್ಷಗಳ ಹಿಂದೆ ಕೋಮು ಗಲಭೆಯಿಂದ ಮರ್ಡರ್ ಆಗಿತ್ತು. ಆದರೆ ನಿನ್ನೆ ಅಲ್ಲಿ ಬೆಂದ ದೇಹಗಳನ್ನು ಹೊತ್ತೊಯ್ಯುವವರಲ್ಲಿ ಮುಸ್ಲಿಮರೂ ಇದ್ದರು, ಹಿಂದೂಗಳೂ ಇದ್ದರು.
ಯಾರೂ ಯಾರ ಹೆಸರೂ ಕೇಳಲಿಲ್ಲ

ನಾನೂ ನನ್ನ ಕರ್ತವ್ಯ ಮಾಡಬೇಕಿತ್ತು. ಸಾವನ್ನಪ್ಪಿದವರ ಬಂಧುಗಳಿಂದ ಅವರ ಕುರಿತು ವಿವರ ಪಡೆಯಲು ಹೋದ ನನಗೆ ಕಂಡದ್ದು ಬಹುತೇಕ ಮಧ್ಯಮ ವರ್ಗದ ಜನರ ಕರುಣ ಕಥೆಗಳೇ.
ವಿಮಾನದ ರೆಕ್ಕೆಯ ಪಕ್ಕ ಸೀಟ್ ನಂ 19 ಸಿಯಲ್ಲಿದ್ದ ಉಸ್ಮಾನ್ ಹಾರಿ ಬದುಕುಳಿದದ್ದು, ಟೂರಿಗೆಂದು ಹೋದ ಕುಟುಂಬ ಮತ್ತೆ ಬಾರದೇ ಇದ್ದದ್ದು... ಹೀಗೆ...
ಅದರಲ್ಲೂ ಉಸ್ಮಾನ್ ಹೇಳಿದ್ದು ನನಗೆ ಇನ್ನೂ ಕಣ್ಣಿಗೆ ಕಟ್ಟಿದಂತೆ ಇದೆ..
ಏನೋ ಅವ್ಯಕ್ತ ಶಕ್ತಿ ನಮ್ಮನ್ನು ಆಡಿಸುತ್ತಾ ಇದೆ. ದೇವರೆಂಬವ ಇದ್ದಾನೆ. ಆದರೆ ವಿಮಾನ ಹತ್ತುವಾಗ ನನ್ನೊಡನೆ ಇದ್ದವರನ್ನೆಲ್ಲಾ ಅವನ್ಯಾಕೆ ಕರೆದುಕೊಂಡ?
ಈ ಪ್ರಶ್ನೆಗೆ ನನ್ನಲ್ಲಿ ಉತ್ತರವಿಲ್ಲ..
ನಿಮ್ಮಲ್ಲಿದೆಯಾ?
(ಮತ್ತೆ ಮತ್ತೆ ಆ ದುರಂತ ಚಿತ್ರಗಳನ್ನು ನಿಮಗೆ ತೋರಿಸೋದು ಬೇಡ ಎಂದು ಹಾಕಿಲ್ಲ)

9 comments:

ಮನದಾಳದಿಂದ said...

ಹೌದು ಸರ್,
ಹೃದಯ ವಿದ್ರಾವಕ ದೃಶ್ಯ ನೋಡಿ ನನ್ನ ಕರುಳೇ ಕಿತ್ತು ಬಂತು. ಯಾರ್ಯಾರ ಆಯುಷ್ಯ ಎಷ್ಟೆಂದು ಮೊದಲೇ ನಿರ್ಧಾರ ಆಗಿರುತ್ತದೆ ಅಲ್ಲವೇ? ಕಾಣದ ಕೈ ಏನೇನು ಮಾಡಿಸುವುದೆಂದು ಹುಲುಮಾನವರಾದ ನಮಗೇನು ತಿಳಿದೀತು?

PARAANJAPE K.N. said...

ಹೌದು, ಇದೊ೦ದು ದೊಡ್ಡ ದುರಂತ. ಮಡಿದವರ ಕುಟು೦ಬಕ್ಕೆ ಅವರ ಅಗಲಿಕೆ ಭರಿಸುವ ಶಕ್ತಿ ಬರಲಿ, ಇನ್ನು ಮು೦ದೆ ಇ೦ತಹ ದುರ೦ತ ಗಳು ಸ೦ಭವಿಸದಿರಲಿ.

ಸೀತಾರಾಮ. ಕೆ. / SITARAM.K said...

ನೀವು ಹೇಳಿದ್ದು ನಿಜ ! ಕಷ್ಟದಲ್ಲಿ ಎಲ್ಲಾ ಮರೆತು ಮಾನವೀಯತೆ ಮೆರೆವುದು ಭಾರತೀಯರ ಮನೋಧರ್ಮ. ಅದು ಇನ್ನು ಜಾತಿ-ಧರ್ಮ ಶೃ೦ಖಲೆಗಳಿ೦ದ ಬ೦ಧಿತವಾಗಿಲ್ಲ! ಅಪಘಾತದಲ್ಲಿ ಮಡಿದವರ ಕುಟು೦ಬದವರಿಗೆ ನಷ್ಟ ಭರಿಸುವ, ನೋವ ಕರೆವ ಶಕ್ತಿ ಭಗವ೦ತ ನೀಡಲಿ ಎ೦ದು ಹಾರೈಸುತ್ತೆನೆ.

ವನಿತಾ / Vanitha said...

ಹೀಗಾಗಬಾರದಿತ್ತು...ಮುಂದೆ ಎಲ್ಲಿಯೂ ಹೀಗಾಗದಿರಲಿ.

Subrahmanya said...

ಕನ್ನಡಪ್ರಭದಲ್ಲೂ ನಿಮ್ಮ ಬರಹವನ್ನು ನೋಡಿದೆ. ಏನನ್ನೋಣ ? ವಿಧಿ ಎನ್ನೋಣವೇ ? ಎಷ್ಟೇ ಪರಿರಪಿಸಿದರೂ , ನಾವೆಷ್ಟೇ ಹಾರೈಸಿದರೂ ಆಗುವುದನ್ನು ತಡೆಯಲು ಸಾಧ್ಯವೇ ಆಗುತ್ತಿಲ್ಲವಲ್ಲ !. ಸಾಯಲೊಂದು ನೆಪವಷ್ಟೆ. ದುಃಖಿತರಿಗೆ ಸಹಿಸಿಕೊಳ್ಳುವ ಶಕ್ತಿ ಬರಲಿ, ನಮ್ಮ ಅನ್ಯೋನ್ಯತೆ ಹೀಗೇ ವೃಧ್ಹಿಸಲಿ.

!! ಜ್ಞಾನಾರ್ಪಣಾಮಸ್ತು !! said...

ಹರೀಶ ಮಾಂಬಾಡಿ.,

ನಿಜವಾಗಲು ತುಂಬಾ ದುರಂತಮಯ..

Raghu said...

very sad..

ಸಾಗರದಾಚೆಯ ಇಂಚರ said...

sad news

RAJ said...

ಮರೆಯದ ದುರಂತ ....ಇನ್ನು ಮರುಕಳಿಸದಿರಲಿ...