Saturday, August 29, 2009

ಹಗಲುಗನಸಲ್ಲ!(ರೈಲು ಹಗಲೂ ಬೆಂಗಳೂರಿಗೆ ಓಡುತ್ತದೆ ಎಂಬ ಖುಷಿಯಿಂದ ರೈಲಿನ ನಿರೀಕ್ಷೆಯಲ್ಲಿ ನನ್ನೂರು ಬಂಟ್ವಾಳ ರೈಲು ನಿಲ್ದಾಣದಲ್ಲಿ ಕುತೂಹಲದಿಂದ ಕಾಯುತ್ತಿದ್ದ ನನ್ನೂರಿನ ಜನ)

ಇದು ನೂರಕ್ಕೆ ನೂರು ಸತ್ಯ.
ಮಂಗಳೂರಿನಿಂದ ಬೆಂಗಳೂರಿಗೆ ರೈಲು ಹಗಲು ಹೊತ್ತೂ ಓಡುತ್ತದೆ!
ಇಂಥ ಹಳಸಿದ ಮಾತು ಕೇಳಿ ಕೇಳಿ ವಾಕರಿಕೆ ಬರುವಂತಾಗಿತ್ತು.
ರಾಜಕಾರಣಿಗಳಂತೂ ಅವರು ಮಾಡಲಿ ಎಂದು ಇವರು, ಇವರು ಮಾಡಲಿ ಎಂದು ಅವರು ಪರಸ್ಪರ ಪೈಪೋಟಿಯ ಹೇಳಿಕೆ ಕೊಡುತ್ತಾ ಇದ್ದರು. ಈ ಮಧ್ಯೆ ಹಿರಿಯರಾದ ಪರ್ಕಳದ ಆರ್.ಎಲ್.ಡಯಾಸ್, ಪುತ್ತೂರು ರೈಲ್ವೇ ಯಾತ್ರಿ ಸಂಘದ ದಿನೇಶ್ ಕೆ.ಭಟ್, ಬೆಂಗಳೂರಿನಲ್ಲಿರುವ ಅನಿಲ್ ಹೆಗ್ಡೆ ಮೊದಲಾದವರು ಬೇರೆ ಬೇರೆ ಕಡೆ ಇದ್ದ ಸ್ನೇಹಿತರನ್ನೆಲ್ಲಾ ಒಟ್ಟುಗೂಡಿಸಿ ಮನವಿಗಳ ಮೇಲೆ ಮನವಿ ಕೊಟ್ಟರು. ಸೈಲೆಂಟ್ ಹೋರಾಟ ಮಾಡಿದರು. ಕೊನೆಯ ಹಂತದಲ್ಲಿ ಮಂಗಳೂರಿನಲ್ಲಿ ಕನ್ನಡ ಸಂಘಟನೆ ಸಹಿತ ನಾಗರಿಕ ಪ್ರತಿಭಟನೆಗಳೂ ನಡೆದವು. ಇವರೆಲ್ಲರ ಜೊತೆ ನಾವು ಮಾಡ್ತೇವೆ ಎಂಬ ರಾಜಕಾರಣಿಗಳ ಹೇಳಿಕೆಗಳು.
ಎಲ್ಲರ ಪ್ರಯತ್ನದ ಫಲವಾಗಿ ಕೊನೆಗೂ
ಮಂಗಳೂರಿನಿಂದ ಬೆಂಗಳೂರಿಗೆ ಹಗಲು ಹೊತ್ತಿನಲ್ಲಿ ರೈಲು ಹೊರಟಿದೆ. ಆದರ ವಾರದಲ್ಲಿ ಮೂರು ಹೊತ್ತು ಅದೂ ಸಂಡೇ ಇಲ್ಲ ಎಂಬ ಬೇಸರವೂ ಇದೆ.
ಇನ್ನೇನಾಗುತ್ತೆ? ರೈಲು ಹೇಗಿದೆ? ಮುಂದೆ ನೋಡೋಣ.

13 comments:

shivu said...

ಸರ್,

ನನಗೂ ಈ ರೈಲಿನ ಬಗ್ಗೆ ಭಾವನಾತ್ಮಕ ಸಂಭಂದವಿದೆ. ಸದ್ಯದಲ್ಲಿಯೇ ಈ ರೈಲಿನಲ್ಲಿ ಪ್ರಯಾಣ ಮಾಡಿ ದಾರಿಯುದ್ದಕ್ಕೂ ಸುಂದರ ದೃಶ್ಶಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುವ ಆಸೆಯಿದೆ...ಕೊನೆಗೂ ಪ್ರಾರಂಭವಾಯಿತಲ್ಲ...ಅದೇ ಖುಷಿ...

RAJ said...

ಅಂತೂ ಶುಭ ಮುಹೂರ್ತ ಬಂತಲ್ಲ ಧನ್ಯರಾದೆವು. ತೀರ ಅಗತ್ಯವಾದದ್ದನ್ನು ಮಾಡುವುದೆಂದರೆ ಈ ರಾಜಕಾರಿಣಿಗಳಿಗೆ ಏನೋ ಅಲರ್ಜಿ. ಬೇಡದೆ ಇದ್ದದ್ದನ್ನು ಮುತುವರ್ಜಿಯಿಂದ ಮಾಡುವ ಇವರು ಇಷ್ಟಾದರೂ ಮಾಡಿದರಲ್ಲ. ( ರಾಜಕಾರಿಣಿಗಳು ಮಾಡಿದ್ದರೆ ಎಂಬುದರಲ್ಲಿ ವಿಶ್ವಾಸ ಇಲ್ಲ. )

ಹರೀಶ ಮಾಂಬಾಡಿ said...

ಶಿವು,
ಒಮ್ಮೆ ರೈಲಿನಲ್ಲಿ ಬನ್ನಿ.

ಹರೀಶ ಮಾಂಬಾಡಿ said...

ರಾಜ್,
ಇನ್ನು ಜನ ಜಾಗೃತರಾಗಬೇಕು
ಸಾಧ್ಯವಾ?

PARAANJAPE K.N. said...

ನಮ್ಮ ಮು೦ದಿನ ಊರ ಪಯಣ ಕುಟು೦ಬ ಸಮೇತ ಈ ಹಗಲು ರೈಲಿನಲ್ಲಿಯೇ ಎ೦ದು ನಮ್ಮ ಗೃಹ ಮ೦ತ್ರಿಗಳಿ೦ದ ಠರಾವು ಆಗಿಬಿಟ್ಟಿದೆ.

Deepasmitha said...

ಹರೀಶ್, ಮಂಗಳೂರು ಬೆಂಗಳೂರು ಹಗಲು ರೈಲು ಸಂಚಾರ ಆರಂಭವಾಯಿತೆಂದು ಪತ್ರಿಕೆಯಲ್ಲಿ ಓದಿ ನನಗೂ ಸಂತೋಷವಾಗಿತ್ತು. ಸಕಲೇಶಪುರದಿಂದ ಮುಂದಿನ ಹಾದಿ ದುರ್ಗಮ ಅರಣ್ಯ, ಬೆಟ್ಟದ ಮೂಲಕ ಹಾಯುವ ಈ ರೈಲು ನೀಡುವ ದೃಶ್ಯಾವಳಿ ಮೈನವಿರೇಳಿಸುವಂಥದ್ದು. ಒಮ್ಮೆ ಪ್ರಯಾಣಿಸಬೇಕು

Ramesh S Perla said...

Daily Railaaa...

Anonymous said...

ಶುಭಾಶಯಗಳು..

ಗೆಳೆಯರು ನಾವೊಮ್ಮೆ ಅದರಲ್ಲಿ ಮಂಗಳೂರಿಗೆ ಹೋಗುವ ಮಾತನಾಡುತ್ತಿದ್ದೇವೆ.

ಧರಿತ್ರಿ said...

ಮುಂದಿನ ಸಲ ನನ್ನದು ಚುಕ್ ಚುಕ್ ರೈಲು ಪಯಣ ..ೂರಿಗೆ...
-ಧರಿತ್ರಿ

ಹರೀಶ ಮಾಂಬಾಡಿ said...

ಪರಾಂಜಪೆಯವರೆ, ಬನ್ನಿ. ಬಂಟ್ವಾಳ ರೈಲು ನಿಲ್ದಾಣ ಪಕ್ಕವೇ ನನ್ನ ಮನೆ.

ಹರೀಶ ಮಾಂಬಾಡಿ said...

deepasmita, dharitri, raghavendra,
ಎಲ್ಲರಿಗೂ ಸ್ವಾಗತ. ಬಂಟ್ವಾಳಕ್ಕೆ ಬನ್ನಿ.

ಹರೀಶ ಮಾಂಬಾಡಿ said...

Ramesh perla,

Welcome to my blog
Daili railu anda edde atta?

ಜಲನಯನ said...

ಹರೀಶ್ ನಿಮ್ಮ ಬ್ಲಾಗ್ ಗೆ ಶರಧಿ ಕರೆತಂತು..
ಈ ಮಂಗಳೂರು-ಬೆಂಗಳೂರು ರೈಲನ್ನು ರೈಲ್ವೇಯವರಿಗಿಂತ ರಾಜಕಾರಣಿಗಳೇ ಹೆಚ್ಚು ಬಿಟ್ಟದ್ದು...ನಿಮಗೆ ಗೊತ್ತಿರಲಿಕ್ಕಿಲ್ಲ..ನಾನು ಮಂಗಳೂರಿನಲ್ಲಿ (ಮೀನುಗಾರಿಕಾ ಮಹಾ ವಿದ್ಯಾಲಯದಲ್ಲಿ) ಓದುವಾಗಿನಿಂದ (೧೯೭೮-೮೪) ನಮಗೆಲ್ಲ ಕನಸುತೋರಿಸಿದ ರೈಲು. ಕೊನೆಗೆ ನಮ್ಮ ಯು.ಜಿ. ಮುಗಿಯುವ ವೇಳೆಗೆ ಬಂತು..ಮತ್ತೆ...ನಿಂತಿತು, ಮತ್ತೆ ಓಡಿತು..ಮತ್ತೆ ಎಷ್ಟೋ ಸರ್ತಿ ರಾಜಕಾರಣಿಗಳು ಓಡಿಸಿದರು....ಅಬ್ಬಬ್ಬಾ..ಎಷ್ಟೆಲ್ಲ ಸರ್ಕಸ್ ...ಈಗ ಹಗಲು ಗನಸು..ಎಷ್ಟು ನಡೆಯುತ್ತೋ ನೋಡೋಣ...