Thursday, July 23, 2009

ಉತ್ತರ ಇಲ್ಲದ ಪ್ರಶ್ನೆ ?



ಮತ್ತೊಮ್ಮೆ ಈ ವಿಷಯ ಪ್ರಸ್ತಾಪ ಮಾಡುತ್ತಿದ್ದೇನೆ ಅಂದುಕೊಳ್ಳಬೇಡಿ.
ನಮ್ಮ ಕರಾವಳಿ (ನಿಮ್ಮೂರಿನ ಅವಸ್ಥೆಯೂ ಹೀಗೆ ಇರಬಹುದು) ರಸ್ತೆಗಳ ಖಾಯಂ ಕತೆ ಇದು.
ಅದರಲ್ಲೂ ರಾಷ್ಟ್ರೀಯ ಹೆದ್ದಾರಿ ಎಂದರೆ ಕೇಳುವುದೇ ಬೇಡ.
ಸೆಕೆಂಡ್ ಸೆಕೆಂಡ್ ಲೆಕ್ಕ ಹಾಕುವ ಬಸ್ಸು, ಲಾರಿಗಳು ತಮಗೆ ಜಾಗ ಕೊಡದ ಇತರ ವಾಹನಗಳನ್ನು ಕ್ಷುಲ್ಲಕ ಪೀಡೆಗಳಂತೆ ಕೆಕ್ಕರಿಸಿ ದಾಟುತ್ತವೆ.
ಅದರ ಜೊತೆ ಅಲ್ಲಲ್ಲಿ ರಸ್ತೆ ಅಗೆಯುವ ಕಾಮಗಾರಿ.
ಹೀಗೆ ಹೈರಾಣಾಗಿರುವ ರಸ್ತೆಗಳು ಪ್ರತೀ ಮಳೆಗಾಲ ಜನರ ತಾಳ್ಮೆಯನ್ನು ಕೆಣಕುತ್ತವೆ.
ದ.ಕ.ಜಿಲ್ಲೆಗೆ ದಿನಕ್ಕೆ ಸಾವಿರಾರು ಯಮಸ್ವರೂಪಿ ಅದಿರು ಲಾರಿಗಳು ಪ್ರವೇಶಿಸುತ್ತವೆ. ಸಣ್ನ ಪುಟ್ಟ ಅಪಘಾತಗಳಿಗಂತೂ ಲೆಕ್ಕ ಬರೆಯುವವರೇ ಇಲ್ಲ ಎನ್ನುವಂತಾಗಿದೆ. ಕಳೆದ ವಾರ ದ.ಕ-ಉಡುಪಿ ಜಿಲ್ಲೆಯಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಎರಡಂಕಿ ತಲುಪಿದೆ.
ಹೀಗೇಕೆ?
********
ವಾಹನದಟ್ಟಣೆ ಹೆಚ್ಹಾಗಿದೆಯೋ?
ನಿಯಮ ಪಾಲನೆ ಆಗುತ್ತಿಲ್ಲವೋ?
ಇದು
ಉತ್ತರ ಇಲ್ಲದ ಪ್ರಶ್ನೆಯೇ
ಅಥವಾ ಸಿಲ್ಲಿ ವಿಷಯವೇ

(ಚಿತ್ರದಲ್ಲಿ ಕಾಣುವುದು ಐದಾರು ತಿಂಗಳ ಹಿಂದೆ ನಾನು ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಇದ್ದಕ್ಕಿದ್ದಂತೆ ಮಣ್ಣು ಅಗೆಯುವ ಯಂತ್ರವೊಂದು ಮೇಲೇರಿ ಅಪಘಾತಕ್ಕೀಡಾಗಿದ್ದು)

14 comments:

BENAKA..ADKATHIMAR said...

Idu nityada hadu.

VENU VINOD said...

Khanditha serious prashne! aadre uttara kodoru yaaru?

ಹರೀಶ ಮಾಂಬಾಡಿ said...

ಬೆನಕ,
ವೇಣು,

ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು :)

ಮಲ್ಲಿಕಾರ್ಜುನ.ಡಿ.ಜಿ. said...

ಅಷ್ಟು ವಾಹನಗಳು ಓಡಾಡುವ ರಸ್ತೆಯನ್ನು ಎಷ್ಟು ಚೆನ್ನಾಗಿಟ್ಟುಕೊಳ್ಳಬೇಕು, ಅಂತಹುದರಲ್ಲಿ ಹೀಗೆ!! ಅದಕ್ಕೇನಾ ಹೊರದೇಶಗಳಿಗೆ ಕರಾವಳಿ ಬುದ್ದಿವಂತರು ಹೋಗೋದು(ನಮ್ಮ ವ್ಯವಸ್ಥೆ ಬಗ್ಗೆ ಬೇಸರದಿಂದ)?

PARAANJAPE K.N. said...

ಹರೀಶರೆ,
ಇದು ನಿತ್ಯಸತ್ಯ, ನಗ್ನಸತ್ಯ. ಅಧ್ವಾನವಾಗಿರುವ ರಸ್ತೆಗಳು, ಯಮಸ್ವರೂಪಿ ವಾಹನಗಳು, ದಿನೇದಿನೇ ಹೆಚ್ಚುತ್ತಿರುವ ಅಪಘಾತಗಳು - ಇವನ್ನೆಲ್ಲ ನೋಡಿ ಲೋಚಗುಟ್ಟುವ ನಾವುಗಳು, ಪರಿಹಾರವೇ ಇಲ್ಲವಾಗಿದೆ.

ಜಿ.ಎಸ್.ಬಿ. ಅಗ್ನಿಹೋತ್ರಿ said...

baroobbari 10 kallu tandu rastege adda haki....

Guruprasad said...

ಇದು ನಿಜಕ್ಕೂ ಆಘಾತ ಹಾಗು ಮನಸ್ಸಿಗೆ ನೋವು ಉಂಟು ಮಾಡುವಂಥ ವಿಚಾರ.....ಇಲ್ಲಿನ ರೋಡ್ ಗಳ ದುರಸ್ತಿಗಾಗಿ ಎಷ್ಟು ಹಣವನ್ನು ಖರ್ಚು ಮಾಡುತ್ತಲಿದ್ದರೆ...ಯಾವುದಾದರು ಒಳ್ಳೆ ಟೆಕ್ನಾಲಜಿ (ಹೊರ ದೇಶದ) ಉಪಯೋಗಿಸಿ,, ಯಾಕೆ ಒಂದೇ ಸಲ ಒಳ್ಳೆಯ ರೋಡ್ ಅನ್ನು ಮಾಡಿ maintain ಮಾಡಬಾರದು........
ನಾವು ಇಲ್ಲಿ ಹೀಗೆ ಹೇಳಿ ಬರೆದರೆ ಪ್ರಯೋಜನ ವಿಲ್ಲ ಅಂತ ಅನ್ಸುತ್ತೆ.....
ನಮ್ಮ ಕೆಟ್ಟ ವ್ಯವಸ್ತೇನೆ ಹೀಗೆ ಇದೆ...... :-(

ಹರೀಶ ಮಾಂಬಾಡಿ said...

ಅಗ್ನಿ,

ಆ ಪ್ರಯೋಗ ಆಯ್ತು..

ಹರೀಶ ಮಾಂಬಾಡಿ said...

ಮಲ್ಲಿಕಾರ್ಜುನ್, ಪರಾಂಜಪೆ,
ನಿಮ್ಮ ಅನಿಸಿಕೆಗೆ ಥ್ಯಾಂಕ್ಸ್.

ಗುರು, ಸಲಹೆ ಚೆನ್ನಾಗಿದೆ

ರಾಕೇಶ್ ಕುಮಾರ್ ಕಮ್ಮಜೆ said...

idu ellara nitya prashneye hawdu!

Anonymous said...

Idu sakalara nitya prashneye hawdu!

ರಾಕೇಶ್ ಕುಮಾರ್ ಕಮ್ಮಜೆ said...

Idu yellara nitya prashneye hawdu!!

Vidya said...

Idu khandithawaagiyu serious prashneye!!
idakke uttarawanna naave kandu hidiyabeku.
udaaharanege...
1-->dooradinda baruwa lorry samanugalige Train upayogisu wudarinda namma taar road gala mele bhara swalpa mattige kadime aagabahudu
2-->Namma sarakaara road contract kottavarige tingalu tingalu audit maadisabeku.Idannu nishtwantharu maadidalli kalape road construction kadime aaguwa saadyathe untu!!!

ಹರೀಶ ಮಾಂಬಾಡಿ said...

ರಾಕೇಶ್
ಪ್ರತಿಕ್ರಿಯೆಗೆ ಥ್ಯಾಂಕ್ಸ್.

ವಿದ್ಯಾ,
ನಿಮ್ಮ ಸಲಹೆ ಉತ್ತಮವಾಗಿದೆ