Friday, July 17, 2009

....................

ಮ್ಮೆಯೂ ತಿರುಗಿ ನೋಡದ ಜನರೀಗ ಮತ್ತೆ ಟೊಪ್ಪಿ ಹಾಕಿದ್ದಾರೆ.
ಇದುವರೆಗೆ ಬೆಂಗಳೂರಿಂದ ಮಂಗಳೂರಿನವರೆಗೆ ಮಾತ್ರ ಓಡುವ ರೈಲು ಇನ್ನು ಕೇರಳದ ಕಣ್ಣೊರಿಗೆ ವಿಸ್ತರಣೆಯಾಗಲಿದೆ.
ಇದಕ್ಕೆ ಕೇರಳದವರ ಒತಡವೇ ಕಾರಣವಂತೆ.
ಇದೊಂಥರಾ ಸ್ವಂತ ಮನೆ ಬಿಟ್ಟು ಬಾಡಿಗೆ ಮನೆಗೆ ಹೋಗುವಂಥ ಪರಿಸ್ಥಿತಿ.
ಕಣ್ಣೂರಿಂದ ರೈಲು ತುಂಬ ಮಲಯಾಳಿಗರು ಮಂಗಳೂರಿಗೆ ಬಂದು ನಮ್ಮನ್ನು ಹತ್ತಿಸಿಕೊಳ್ಳುತ್ತಾರೆ. ನಮಗೆ ಅವರು ಜಾಗ ಕೊಡುತ್ತಾರೆ.
ಅದಕ್ಕೆ ಅವರನ್ನು ದೂರಿ ಪ್ರಯೋಜನವಿಲ್ಲ.
ಮೊದಲೇ ದಕ್ಷಿಣ ಕನ್ನಡವೆಂದರೆ ಕರ್ನಾಟಕದಲ್ಲಿ ತಾತ್ಸರಕ್ಕೆ ಒಳಗಾದ ಊರು. ‘ಏನ್ರೀ ನಿಮ್ಮ ಮಂಗ್ಳೂರು. ಅದೊಂದು ಊರಾ. ಸೆಖೆ, ಮಳೆ, ಥೂ..’ ಎಂದು ಇಲ್ಲಿಗೆ ನೌಕರಿ ಮಾಡಲು ಬರುವ ಮೇಷ್ಟ್ರುಗಳು, ಅಧಿಕಾರಿಗಳು, ಬಸ್ ಕಂಡಕ್ಟರ್ ಗಳು, ಪತ್ರಕರ್ತರು ಇತ್ಯಾದಿ ಜನರು ದೂರುವುದನ್ನು ದ.ಕ.ಜನ ಕೇಳಿ ಸುಮ್ಮನೆ ನಕ್ಕುಬಿಡುವುದು ಮಾಮೂಲು.
ಈಗ ‘ನಿಮ್ಮ ಎಂಪಿಗಳು’ ಪ್ರಯೋಜನ ಇಲ್ಲ. ಕೇರಳದವರನ್ನು ನೋಡಿ ಕಲಿಯಲಿ ಎಂಬ ಸಲಹೆ ಈಗ ನಮ್ಮ ಬಳಿ ಬರ್ತಿದೆ.
ಇಸ್ಟೆಲ್ಲಾ ಆದರೂ ಹೆಣಕ್ಕೆ ಸಿಂಗಾರ ಮಾಡಿದಂತೆ ಕನಡಿಗರಿಗೆ ಯಾವ ರೀತಿಯಲ್ಲೂ ಉಪಕಾರ ಇಲ್ಲದ ಮಂಗಳೂರು ಅತ್ತಾವರದಲ್ಲಿರುವ ರೈಲ್ವೇ ನಿಲ್ದಾಣವನ್ನು ವಿಶ್ವದರ್ಜೆಗೇರಿಸುತ್ತಾರಂತೆ.
ಇನ್ನು ಏನೇನಾಗಲಿದೆಯೋ?

5 comments:

shivu.k said...

ಈ ವಿಚಾರವನ್ನು ಪೇಪರಿನಲ್ಲಿ ಓದಿದಾಗ ಬೇಸರವಾಯಿತು..ನಮ್ಮ ಮಂತ್ರಿಗಳಿಗೆ ಇಚ್ಛಾಶಕ್ತಿ, ಸ್ವಾಭಿಮಾನ ಇಲ್ಲವಲ್ಲ ...ಥೂ...

PARAANJAPE K.N. said...

ನಮ್ಮ ಸ೦ಸದರು - ಶಾಸಕರು ಎಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ ಅನ್ನೋದು ಇದರಿ೦ದ ಜಗಜ್ಜಾಹೀರಾಗಿದೆ

ಹರೀಶ ಮಾಂಬಾಡಿ said...

ರೈಲನ್ನು ಶಾಶ್ವತವಾಗಿ ಮಂಗಳೂರಿಗರಿಗೆ ಸಿಗದಂತೆ ಮಾಡುವ ಸಂಭವವೂ ಇದೆ.!

Unknown said...

Munde aaguwudenu??
Innu nammanthavarige train ni nalli seat sigalikke illa.
Haagaagi namage railu iddu illadanthe aagi puna KSRTC ya dubaari saulabyawannu upyogisikolla bekaagabahudu

ಹರೀಶ ಮಾಂಬಾಡಿ said...

ಇವತ್ತಿನವರೆಗೂ ಹಗಲು ರೈಲು ಬಂದಿಲ್ಲ