Friday, February 13, 2009

ಪ್ರೀತಿಯ ಸೆಲೆ

ಹಸಿವ ಕಂಗಳು,ಒಣಗಿದ ತುಟಿಗಳ ಏರು ಜವ್ವನೆಗೆ
ಬಿಗಿದಪ್ಪಿ ಮುತ್ತಿನ ಮಳೆ ಎರೆಯಲು ಎಲ್ಲಿದೆ ಪುರುಸೊತ್ತು?
ಹಳ್ಳಿಯ ಹವೆಯೂ ಈಗ ಮಲಿನಗೊಂಡಿದೆ ಹುಟ್ಟಿದ್ದಕ್ಕೆ,
ಅಪ್ಪುವುದಕ್ಕೆ, ಬಟ್ಟೆ ಹಾಕುವುದಕ್ಕೆ, ಕಳಚುವುದಕ್ಕೊಂದು
ದಿನ ಎಂಬ ಆಚರಣೆಯೇ ಸೋಜಿಗ ತಂದಿದೆ..
ತೊದಲು ನುಡಿಯನಾಡುವ ಹಸುಳೆಗೇನು ಗೊತ್ತು?
ಇನ್ನು ಮುಂದೆ ಬಾಳ ಪಯಣ ಯಾರ ಮನೆಯ ತೊತ್ತು?
ಸಧ್ಯಕ್ಕೆ ಅಮ್ಮನ ಬೆಚ್ಹನೆಯ ಮುತ್ತೇ ಸಾಕೆನುತಿದೆ
ಸೆಂಟ್,ಪೌಡರ್ ಹಾಕಿ ಕೆಂಭೂತದಂತೆ ಪಾರ್ಕುಗಳಲ್ಲಿ
ಅಂಡಲೆದು ಕೆಟ್ಟ ಜಾಗತೀಕರಣದ ಲಿಪ್ ಸ್ಟಿಕ್ ನ ಚುಂಬನಕ್ಕೆ
ದಿನ, ಮುಹೂರ್ತ ಪ್ರತ್ಯೇಕ ಯಾಕೆ?
ಪ್ರೀತಿಯ ಸೆಲೆ ಕಾಣಲು ಕಳ್ಳತನವೇಕೆ?

7 comments:

ಚಿತ್ರಾ ಸಂತೋಷ್ said...

ಸರ್..
ಇದು ವ್ಯಾಲಂಟೈನ್ಸ್ ಡೇ ಉಡುಗೊರೆನಾ? ತುಂಬಾ ಚೆನ್ನಾಗಿದೆ ಕವನ..."ಸಧ್ಯಕ್ಕೆ ಅಮ್ಮನ ಬೆಚ್ಹನೆಯ ಮುತ್ತೇ ಸಾಕೆನುತಿದೆ.." ಹೌದಲ್ವೇ?..ಅಮ್ಮನ ಸಿಹಿಮುತ್ತು, ಬೆಚ್ಚಗಿನ ಮಮತೆಯ ಮಡಿಲಿನ ಪರಿಪೂರ್ಣ ಪ್ರೀತಿಗೆ ಎಲ್ಲೆಯುಂಟೇ?
-ಚಿತ್ರಾ

shivu.k said...

ಸರ್,

ಪ್ರೀತಿ ಮತ್ತು ವಾಸ್ತವ ಸ್ಥಿತಿಯನ್ನು ಚೆನ್ನಾಗಿ ಕವನದಲ್ಲಿ ಹೇಳಿದ್ದೀರಿ....
ಸಧ್ಯಕ್ಕೆ ಅಮ್ಮನ ಬೆಚ್ಹನೆಯ ಮುತ್ತೇ ಸಾಕೆನುತಿದೆ.."
ನನಗೂ ಇದೇ ಬೇಕೆನಿಸುತ್ತಿದೆ.....

VENU VINOD said...

wah wah nice...amd practical :)

Mediapepper said...

edde undu :)

Anonymous said...

chitra, shivu, venu, straightforward..,

Thanks a lot

- Mambady

ಮಹೇಶ್ ಪುಚ್ಚಪ್ಪಾಡಿ said...

ಚೆನ್ನಾಗಿ ವಿವರಿಸಿದ್ದೀರಿ...

ಇಂದಿನ ಜಗತ್ತೇ ಗೊಂದಲದ ಗೂಡಾಗುತ್ತಿದೆಯೇ ಅಂತ ಮನಸ್ಸು ಪಿಸುಮಾತಿನಲ್ಲಿ ಹೇಳುತ್ತಿದೆ. ನೀವಂದಂತೆ ಈಗ ಅಮ್ಮನ ಬೆಚ್ಚನೆಯ ಸಿಹಿ ಮುತ್ತೇ ಸಾಕೆನಿಸುತ್ತದೆ.

ಹರೀಶ ಮಾಂಬಾಡಿ said...

ಮಹೇಶ್,
ವ್ಯಾಲಂಟೈನ್ಸ್ ಡೇ ಎಂಬ ಆಚರಣೆ ಇದ್ದಕ್ಕಿದ್ದಂತೆ ಸುದ್ದಿಯಾದಾಗ ಮನಸ್ಸಿಗೆ ಕಂಡದ್ದು ಬರೆದೆ.