Thursday, January 15, 2009

ಕುಡ್ಲವೆಂಬ ಬಲೂನು!

ಹಾಗೇ ಸುಮ್ಮನೆ ಹಿಂದಿರುಗಿ ನೋಡಿ!
ಕುಡ್ಲ ಹೇಗೆ ಕಾಣುತ್ತದೆ?
ತುಳು ಭಾಷೆಯಲ್ಲಿ ಕುಡ್ಲ, ಮಲಯಾಳಿಗಳಿಗೆ ಮಂಗಳಾಪುರ, ನಮಗೆಲ್ಲಾ ಮಂಗಳೂರು.
ಕರಾವಳಿಯ ಈ ಬಂದರು ಪಟ್ಟಣ ದಿಡೀರನೆ ಧೃಡಕಾಯವಾಗುತ್ತಿದೆ.
ಹುಟ್ಟಿದಾಗಿನಿಂದ ಇಲ್ಲಿಯವರೆಗೂ ಊರು ಬಿಡದೆ ಇಲ್ಲಿಯೇ ವಾಸಿಸುವ ನನ್ನಂಥ ಸಾಮಾನ್ಯರಿಗೂ ಅರ್ಥವಾಗದಷ್ಟು ಕುಡ್ಲ ಮಾರ್ಪಾಡಾಗಿದೆ. ಇಪ್ಪತ್ತು ವರ್ಷಗಳ ಹಿಂದೆ ಎಂಟನೇ ಕ್ಲಾಸಿಗೆ ಬೋಂದೇಲಿನಿಂದ ೧೯ ನಂಬ್ರದ ಬಸ್ಸಿನಲ್ಲಿ ಲಾಲ್ ಬಾಗ್ ಹೋಗುವಾಗ ಇದ್ದ ಸ್ಥಿತಿ ಈಗಿಲ್ಲ ಅನ್ನುವುದಾದರೆ ಅದು ಸಹಜ. ಆದರೆ ಮಿತಿಮೀರಿದ ವೇಗ ಮಾತ್ರ ಅಪಾಯಕ್ಕೆ ಆಹ್ವಾನ!.
ನಮ್ಮ ಕುಡ್ಲದಲ್ಲಿರುವ ಕೆಲವು ಶಾಪಿಂಗ್ ಕಾಂಪ್ಲೆಕ್ಸ್ ಗಳ ಒಳಹೊಕ್ಕು ನೋಡಿ. ಚಕ್ರವ್ಯೂಹದಂತಿರುವ ಕಟ್ಟಡಗಳೇ ಒಂದು ನಿಗೂಡ.ಅಲ್ಲೆಲ್ಲಾ ಎಂಥ ವಹಿವಾಟು ನಡೆಯುತ್ತಿದೆ? ಲಾಭ? ಕೇಳಿದರೆ ಲಾಸ್ ಮಾರ್ರೆ ಅನ್ನುತ್ತಾರೆ. ಹಾಗಾದರೆ ಒಂದೊಂದು ಅಂಗಡಿಯಲ್ಲಿ ಒಬ್ಬ ಹುಡುಗ, ಒಬ್ಬ ಹುಡುಗಿಯನ್ನಿಟ್ಟು ಮಾಲಕ ಮಾಡುವ ಕೆಲಸ ಏನು?
ಮುಂಬಯಿಯಲ್ಲಿ ಹೊಸ ಫ್ಯಾಷನ್ ಬಂದ ಕೂಡಲೇ ಮಂಗಳೂರಿನಲ್ಲಿ ಅದು ಕಾಣಿಸುತ್ತದೆ. ಅಲ್ಲಿ ಹೊಸ ಡಾನ್ ಹುಟ್ಟಿದರೆ ಇಲ್ಲಿ ಹೊಸ ಪೆಟ್ಟಿಸ್ಟ್(ಪೆಟ್ಟು ಮಾಡಲು ಗೊತ್ತಿದ್ದವ) ಹುಟ್ತುತ್ತಾನೆ. ಹೀಗೆ ನಮ್ಮ ಮಂಗಳೂರು ಮತ್ತು ಮುಂಬಯಿಯ ನಂಟು ಅಮೋಘ.
ಸುನಿಲ್ ಶೆಟ್ಟಿ ಮಂಗಳೂರಲ್ಲೇ ಎರಡೆರಡು ದೊಡ್ಡ ಅಂಗಡಿ ತೆರೆಯುವ ಸಾಹಸ ಮಾಡಿದ್ದಾನೆ. ದುಬಾಇ ಸಹಿತ ದೊಡ್ಡ ದೊಡ್ಡ ಕುಳಗಳು ಇಲ್ಲಿ ಭಾರೀ ಕಟ್ಟಡ ಕಟ್ಟಿಸುತ್ತಿದ್ದಾರೆ.
ಅದೆಲ್ಲಾ ಸರಿ, ಇದರಿಂದ ಯಾರಿಗೆ ಲಾಭ?
ಫುಟ್ ಪಾತ್ ಇಲ್ಲದ ರಸ್ತೆಗಳು, ಕ್ಲೀನ್ ಇಲ್ಲದ ಬಸ್ ನಿಲ್ದಾಣ, ಪ್ರಯೋಜನವಿಲ್ಲದ ನೇತಾರರ ನಡುವೆಯೂ ಕುಡ್ಲದ ಲ್ಯಾಂಡ್ ವ್ಯಾಲ್ಯೂ ಮಿತಿಮೀರಿ ಹೆಚ್ಹಿದೆ. ಚರ್ಚೆ ಮಾಡಲು ಹೋದಗೆ ‘ಪೆಟ್ಟಿಗೆ’ ಬರುತ್ತಾರೆ. ಹೀಗಾಗಿ ಬೆಂಗಳೂರಿಗೇನೂ ಕಮ್ಮಿ ಇಲ್ಲ.
ಇವೆಲ್ಲದರ ನಡುವೆ ಅದೇ ಕದ್ರಿ ಪಾರ್ಕ್, ಅದೇ ಸುಲ್ತಾನ್ ಬತ್ತೇರಿ, ಅದೇ ಪಣಂಬೂರು ಬೀಚ್ ಕೈಬೀಸಿ ಕರೆಯುತ್ತಿದೆ.
--ಇವಿಷ್ಟು ಸದ್ಯಕ್ಕೆ ಸಾಕು ಬರೆಯುವುದು ಬೇಕಾದಷ್ಟು ಇದೆ. ಅದಕ್ಕೂ ಮೊದಲು ನೀವೇನು ಕಂಡಿದ್ದೀರಿ ಹೇಳಿ.

6 comments:

shivu.k said...

ಹರೀಶ್,

ನಿಮ್ಮೂರು ಕುಡ್ಲ ಬಗ್ಗೆ ತುಂಬಾ ಚೆನ್ನಾಗಿ ಬರೆದಿದ್ದೀರಿ.....ಹಿಂದಿನ ವಸ್ತುಸ್ಥಿತಿಗೂ ಈಗಿನದಕ್ಕೂ ಆಗಿರುವ ವ್ಯತ್ಯಾಸಗಳನ್ನು ಚೆನ್ನಾಗಿ ವಿವರಿಸಿದ್ದೀರಿ.......

ಮಹೇಶ್ ಪುಚ್ಚಪ್ಪಾಡಿ said...

ಮಂಗಳೂರು - "ಕೊಡೆಯಾಲ"... ಬದಲಾಗಿದೆ ಮಾರಾಯ್ರೆ...
ಎಲ್ಲಿ ಪುಟ್ ಪಾತ್ ನಲ್ಲಿ ಹೋಗುವುದಕ್ಕೂ ಜಾಗವಿಲ್ಲ...
ಅದಲ್ಲ , ಅಂಗಡಿಯಲ್ಲಿ ಹೇಳುತ್ತಾರಾಲ್ಲಾ ಏನಿಲ್ಲಾ ಮಾರಾಯ್ರೆ ತುಂಬಾ ಲಾಸ್.. ಲಾಸ್... ಹಾಗಾದ್ರೆ ಅವರು ಮಾತ್ರವಲ್ಲ ಇಡೀ ಮಂಗಳೂರಿನ ಅಂಗಡಿ ಬಂದ್ ಮಾಡಬೇಕಿತ್ತು ಅಲ್ವಾ..?. ಇನ್ನೊಂದು ವಿಶ್ಯ . ಅದು ಕೃಷಿಕರಲ್ಲೂ ಹಾಗೆನೇ.. ಪ್ರತೀ ವರ್ಷ ಫಸಲು ಹೇಗೆ ಕೇಳಿದರೆ ಏನಿಲ್ಲಾ ಕಡಿಮೆ ಕಡಿಮೆ ಅಂತಾರೆ. ಹಾಗೆ ಒಂದು ೪ ವರ್ಷದಲ್ಲಿ ಅಂಗಳದಲ್ಲಿ ಖಾಲಿ ಇರಬೇಕಲ್ಲಾ..???ಆದ್ರೆ ಹಾಗಿದೆಯಾ..??

ಚಿತ್ರಾ ಸಂತೋಷ್ said...

ನಮ್ಮ ಕುಡ್ಲದ ಬಗ್ಗೆ ಚೆನ್ನಾಗಿ ಬರೆದಿದ್ದೀರ...
-ಚಿತ್ರಾ

ಹರೀಶ ಮಾಂಬಾಡಿ said...

ಶಿವು, ಪ್ರತಿಕ್ರಿಯೆಗೆ ಧನ್ಯವಾದ.

ಮಹೇಶ್, ಮಂಗಳೂರಿನಲ್ಲಿ ಪುಟ್ ಪಾತ್ ಎಲ್ಲಿ? ರಸ್ತೆಯಲ್ಲೇ ಜನರೂ ನಡೆಯಬೇಕು, ವಾಹನಗಳೂ ಓಡಾಡಬೇಕು. ಮಂಗಳೂರಿನ ಕೆಲವು ವ್ಯಾಪಾರಸ್ಥರು ಪಾಪದ ಕೃಷಿಕರ ಹಾಗಲ್ಲ. ಕೆಲವರ ಅಂಗಡಿಗಳು ಹೊರನೋಟಕ್ಕೆ ಇದ್ದಂತೆ ಒಳಗಿಲ್ಲ. ಈಗೀಗ ಅಂಗಡಿ, ಕಟ್ಟಡಗಳ ನಿಜವಾದ ಮಾಲಕ ಯಾರು ಅಂತ ಗೊತ್ತೂ ಆಗುವುದಿಲ್ಲ. ಇಲ್ಲೇ ಇರುವುದು ಅಪಾಯ. ಹೀಗಾಗಿ, ಈ ಲಾಸ್ ಹಿಂದೆಯೂ ನಿಗೂಡತೆಯಿದೆ.

ಚಿತ್ರಾ, ನಿಮ್ಮ, ನಮ್ಮ ಕುಡ್ಲ, ಭಾಷೆಯ ಪ್ರೀತಿಗೆ ವಂದನೆ. ಅದಕ್ಕೇ ನೋಡಿ ಘಟ್ಟ ಹತ್ತಿದರೂ, ನೀವು ನಮ್ಮವರು...

shivu.k said...

ಹರೀಶ್,

ಕೆಲಸದಲ್ಲಿ ತುಂಬಾ ಬ್ಯುಸೀನಾ...

ಮನಃಪೂರ್ವಕವಾಗಿ ನಗಬೇಕೆ !! ನೋಡಬನ್ನಿ ನಡೆದಾಡುವ ಭೂಪಟಗಳ!!

http://chaayakannadi.blogspot.com/

ಪ್ರೀತಿಯಿಂದ..

ಶಿವು...

ವನಿತಾ / Vanitha said...

ಎಸ್ಟೇ.. ಜನ ಜಂಗುಳಿ ಇರಲಿ..ಆದರೆ. ಯಾವಾಗಲೂ ಬೆವರು ಉಜ್ಜಿಕೊಂಡಿರಬೇಕಾದ , ತುಳು, ಕೊಂಕಣಿ, ಕನ್ನಡ, ಮಲಯಾಳಂ ಭಾಷೆಯ ಸಮ್ಮಿಲನದ ನಮ್ಮೂರೇ ಚೆಂದ...