Sunday, March 6, 2011

ಪಂಜೆ ಮಂಗೇಶರಾಯರ ಮರೆತೇ ಬಿಟ್ಟರು

ಒಂದೆಡೆ ಅದ್ದೂರಿ ಸಾಹಿತ್ಯ ಸಮ್ಮೇಳನಕ್ಕೆ ಕೋಟಿ ಕೋಟಿ ವ್ಯಯವಾಗುತ್ತದೆ. ಮತ್ತೊಂದೆಡೆ ಕವಿಯೊಬ್ಬರ ನೆನಪಿನ ಸ್ಮಾರಕಕ್ಕೆ ಘೋಷಣೆಯಾದ ಹಣ ಬಿಡುಗಡೆ ಮಾಡಲೂ ಮೀನಮೇಷ ಎಣಿಸಲಾಗುತ್ತದೆ.ಅವರ ಕೊಡುಗೆಯ ಕೖತಜ್ಞತೆಯನ್ನು ಮರೆತುಬಿಡುವ ಹಂತಕ್ಕೆ ಬಂದ ನಮ್ಮ ವ್ಯವಸ್ಥೆಗೆ ಸ್ಪಷ್ಟ ಉದಾಹರಣೆ ಪಂಜೆ ಮಂಗೇಶರಾಯರ ಸ್ಮಾರಕ ಭವನ ನಿಮಾ೯ಣ.
2007ರ ರಾಜ್ಯ ಬಜೆಟ್್ನಲ್ಲಿ ಅಂದು ಉಪಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಪಂಜೆ ಮಂಗೇಶರಾಯರ ನೆನಪಿಗೆ ಅವರ ಹುಟ್ಟೂರಲ್ಲಿ ಸ್ಮಾರಕ ಭವನ ನಿಮಿ೯ಸಲೆಂದು 50 ಲಕ್ಷ ರುಪಾಯಿ ಒದಗಿಸಿದ್ದೇನೆ ಎಂದು ಹೇಳಿದರು. ಪತ್ರಿಕೆಗಳಲ್ಲಿ ಈ ಬಗ್ಗೆ ವರದಿಗಳೂ ಬಂದವು. ನಾಲ್ಕು ವಷ೯ ಕಳೆದವು. ಯಡಿಯೂರಪ್ಪ ಮತ್ತೆ ಮೂರು ಬಜೆಟ್್ ಮಂಡಿಸಿದರು. ಆದರೆ 50 ಲಕ್ಷ ರುಪಾಯಿ ಬಿಡಿ, 5 ಲಕ್ಷ ರುಪಾಯಿಯೂ ಘಟ್ಟ ಇಳಿದು ಪಂಜೆ ಹುಟ್ಟಿದ ಊರಾದ ಬಂಟ್ವಾಳಕ್ಕೆ ಬರಲಿಲ್ಲ.
ಬಂಟ್ವಾಳವೇ ಏಕೆ?
ಪಂಜೆ ಮಂಗೇಶರಾಯರು ಹುಟ್ಟಿದ್ದು ಬಂಟ್ವಾಳದಲ್ಲಿ. ಈಗ ಬಂಟ್ವಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳ ವಸತಿಗೖಹ ಪಂಜೆಯವರ ಮನೆಯಾಗಿತ್ತು. ಅಲ್ಲಿ ಈಗಲೂ ಪಂಜೆ ನೆನಪಿಸಲು ಫಲಕವೊಂದಿದೆ. ಹೀಗಾಗಿ ಪಂಜೆ ಮಂಗೇಶರಾಯರ ಸ್ಮಾರಕ ಭವನ ಬಂಟ್ವಾಳದಲ್ಲಿ ನಿಮಿ೯ಸಿದರೆ ಅದು ಅಥ೯ಪೂಣ೯ವಾಗುತ್ತದೆ.
ಜಾಗ ಇದೆ,ಹಣ ಇಲ್ಲ!

ಬಜೆಟ್್ನಲ್ಲಿ ಘೋಷಣೆಯಾದ ಕೂಡಲೇ ಪಂಜೆ ಸ್ಮಾರಕ ಭವನ ನಿಮಿ೯ಸಲೆಂದು ಪಂಜೆ ಹುಟ್ಟೂರಾದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳಕ್ಕೆ ಸಮೀಪ ಬಿ.ಸಿ.ರೋಡ್್ನ ಗೂಡಿನಬಳಿ ಎಂಬಲ್ಲಿ ಜಾಗ ನಿಗದಿಪಡಿಸಲಾಯಿತು. ಅಲ್ಲಿ ರಂಗಮಂದಿರವೊಂದನ್ನು ನಿಮಿ೯ಸುವ ಇರಾದೆಯೂ ಇತ್ತು.
ಮುಖ್ಯಮಂತ್ರಿ ಆಗಿದ್ದ ಕುಮಾರಸ್ವಾಮಿ ಜೊತೆಗೆ ಅಕ್ಟೋಬರ್್ 2007ರಲ್ಲಿ ಬಂದಿದ್ದ ಉಪಮುಖ್ಯಮಂತ್ರಿ ಯಡಿಯೂರಪ್ಪ, ಕೋಟಿ ವೆಚ್ಚಗಳ ಹಲವು ಅಭಿವೖದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ಮಾಡಿದರು. ಅವುಗಳಲ್ಲಿ ಪಂಜೆ ಮಂಗೇಶರಾಯ ಸ್ಮಾರಕ ಭವನವೂ ಒಂದು.ಆದರೆ ಬಂಟ್ವಾಳದ ಹಲವಾರು ಕಲ್ಲುಗಳ ಜೊತೆ ಅದೂ ಸೇರಿಹೋಯಿತು. ಬಂಟ್ವಾಳದವರೇ ಆದ ಹಿರಿಯ ಸಾಹಿತಿ ಏಯ೯ ಲಕ್ಷ್ಮೀನಾರಾಯಣ ಆಳ್ವ ಅವರು 2007ರಲ್ಲಿ ಆಗಿನ ತಾಪಂ ಅಧ್ಯಕ್ಷರಿಗೆ ಪತ್ರವೊಂದನ್ನು ಬರೆದು,ಪಂಜೆ ಭವನಕ್ಕೆ ನಿಗದಿಯಾದ ಜಾಗಕ್ಕಿಂದ ಬಂಟ್ವಾಳದ ಕೇಂದ್ರಸ್ಥಾನವಾದ ಬಿ.ಸಿ.ರೋಡ್್ನಲ್ಲೇ ಮಾಡಿದರೆ ಸೂಕ್ತ. ತಾಪಂ ವತಿಯಿಂದ ಭವ್ಯ ರಂಗಮಂದಿರವನ್ನು ನಿಮಿ೯ಸಲು ಬೇಕಾದ ಜಾಗ ಒದಗಿಸಬೇಕು ಎಂದು ವಿವರಿಸಿದರು.ಅದಕ್ಕೆ ಸ್ಪಂದಿಸಿದ ಅಂದಿನ ತಾಪಂ, ಈ ಕುರಿತು ಅಕ್ಟೋಬರ್್ 10, 2007ರಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನಿಣ೯ಯ ಕೈಗೊಂಡು, ಬಿ.ಸಿ.ರೋಡ್್ನ ಆಶ್ರಮ ಶಾಲೆಯ ಬಳಿ 30 ಸೆಂಟ್ಸ್್ ಜಾಗವನ್ನು ಒದಗಿಸುವ ಬಗ್ಗೆ ತೀಮಾ೯ನಿಸಿತು. ಜಾಗ ಒದಗಿಸುವುದು ಮಾತ್ರವಲ್ಲ, ರಂಗಮಂದಿರವನ್ನು ಕಟ್ಟಿದರೆ ಅದರ ನಿವ೯ಹಣೆ ತಾಪಂ ಮಾಡುವುದು ಎಂದು ನಿಣ೯ಯವೂ ಆಗಿತ್ತು. 2008 ಜನವರಿ 25ರಂದು ಕನ್ನಡ ಮತ್ತು ಸಂಸ್ಕೖತಿ ಇಲಾಖೆಗೆ ಒಟ್ಟು 30 ಸೆಂಟ್ಸ್ ಜಾಗವನ್ನು ತಾಪಂ ನೀಡಿತು.
ಚಿಕ್ಕಾಸೂ ಅನುದಾನ ಇಲ್ಲದೆ ಕಟ್ಟಡ ಯಾರು ಕಟ್ಟುತ್ತಾರೆ? ಹಾಗೇ ಆಯಿತು. ಘೋಷಣೆಯಾದ ಹಣ ಬರಲೇ ಇಲ್ಲ. ಸಾಹಿತ್ಯ ವೇದಿಕೆಗಳಲ್ಲಿ ಮಾತ್ರ ಸಾಹಿತಿಗಳನ್ನು ಸ್ಮರಿಸುವವರು ಪಂಜೆಯವರು ಯಾರೆಂಬುದನ್ನೇ ಮರೆತರು. ಹಣ ಇಲ್ಲ ಎಂದು ಕನ್ನಡ ಮತ್ತು ಸಂಸ್ಕೖತಿ ಇಲಾಖೆಯೂ ಕೈಚೆಲ್ಲಿ ಕುಳಿತಿತು. ಇದರಿಂದ ರಾಜಕೀಯ ಇಚ್ಛಾಶಕ್ತಿಯ ಕೊರತೆ ಹಾಗೂ ಆಡಳಿತ ಯಂತ್ರದ ನಿಲ೯ಕ್ಷ್ಯಕ್ಕೆ ಸಾಹಿತ್ಯಪ್ರೇಮಿಗಳ ಅವಜ್ಞೆಯೂ ಸೇರಿ ಕನ್ನಡದ ಅಗಲಿದ ಹಿರಿಯ ಕವಿಗೆ ಅವಮಾನ ಆಗಿರುವುದಂತೂ ನಿಜ.

1 comment:

YAKSHA CHINTANA said...

ತೀರಾ ನಾಚಿಕೆಗೇಡಿನ ಸಂಗತಿಗಳು. ಆದರೆ ಇದೇ ಇತ್ತಿಚೆಗೆ ಸಾಮಾನ್ಯವಾಗಿರುವುದು ನಮ್ಮ ಸಂಸ್ಕಾರದ ಅಧಃಪತನಕ್ಕೆ ಸಾಕ್ಷಿ. ಬೆಂಗಳೂರಲ್ಲಿ..ರಾಜ್ ಕುಮಾರ್ ಸಮಾಧಿ ಸ್ಮಾರಕ,ವಿಷ್ಣುವರ್ಧನ್ ಸ್ಮಾರಕ ಕೆಂಪೇಗೌಡ ಪ್ರತಿಮೆ ಹೀಗೆ ಹತ್ತು ಕೋಟಿ ಐವತ್ತು ಕೋಟಿ ಅಂತ ಖರ್ಚು ಮಾಡುವಲ್ಲಿ ಒಬ್ಬ ಕನ್ನಡದ ಅಪ್ರತಿಮ ಕವಿಯ ವಿಷಯದಲ್ಲಿ ಈ ರೀತಿ ನಡೆದು ಕೊಳ್ಳುವುದು ತುಂಬ ಖೇದಕರ. ಸ್ವಲ್ಪವಾದರು ಕನ್ನಡ ನಾಡು ನುಡಿಯ ಬಗ್ಗೆ ಅಭಿಮಾನ ಇದ್ದವರು ಹೀಗೆ ಮಾಡುವುದು ಸರಿಯೆ? ಇವರ ಕನ್ನಡ ಅಭಿಮಾನ ಹೊರ ಹೂಮ್ಮುವ ಬಗೆ ಹೀಗೆ. ಸರಿಯಾಗಿ ತಪ್ಪಿಲ್ಲದೆ ಕನ್ನಡ ಮಾತಾಡುವುದನ್ನು ಬರೆಯುವುದನ್ನು ಮೊದಲು ರೂಢಿಸಿಕೊಳ್ಳಲಿ. ಆಡುವ ಭಾಷೆಯಲ್ಲಿ ಕನ್ನಡದ ಬಳಕೆ ಕಡಿಮೆ ಮಾಡಿ ಇಂಗ್ಲೀಷನ್ನೆ ಉಚ್ಚರಿಸುವ ಇವರು ಇದಕ್ಕಿಂತ ಹೆಚ್ಚೆನನ್ನು ಮಾಡಲಾರರು ನಾಚಿಕೆಗೇಡು.ಹೆಚ್ಚಾಗಿ ದುಡ್ಡಿನ ಹಿಂದೇಯೆ ಓಡುವ ಸಿನಿಮಾ ಮಂದಿಯ ಕನ್ನಡ ಅಭಿಮಾನದ ಬಗ್ಗೆ ಬೇರೆ ಹೇಳಬೇಕಾಗಿಲ್ಲ. ಪರಿಶುದ್ದವಾಗಿ ಕನ್ನಡದ ಸೇವೆ ಮಾಡಿದ ಕವಿ ಹೃದಯಕ್ಕೆ ಈ ರೀತಿ ಮಾಡುವುದು ಸರಿಯಲ್ಲ. ಅತ್ಯುತ್ತಮ ಸಕಾಲಿಕ ಲೇಖನ.